लाइव कैलेंडर

November 2026
M T W T F S S
 1
2345678
9101112131415
16171819202122
23242526272829
30  
16/11/2026

AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

ಚಿಕ್ಕಮಗಳೂರು ಜಿಲ್ಲೆಯ,ಮೂಡಿಗೆರೆ ವಿಧಾನಸಭಾ ಕ್ಷೇತ್ರದ ಆವತಿ ಹೋಬಳಿಯ ಕಣತಿ ಗ್ರಾಮದ ಮತಗಟ್ಟೆ ವ್ಯಾಪ್ತಿಯಲ್ಲಿರುವ 103 ವರ್ಷ ಪ್ರಾಯದ ಬೀಬಿ ಜಾನ್ ಮೈದೀನ್ ಅವರ ಮನೆಗೆ, ಅಂಚೆ ಮತಪತ್ರದ ಮೂಲಕ ಮತದಾನ ಮಾಡಿಸುವ ತಂಡದೊಂದಿಗೆ ಚುನಾವಣಾಧಿಕಾರಿಗಳಾದ ಎಚ್.ಡಿ.ರಾಜೇಶ್ ಭೇಟಿ ನೀಡಿ, ಬೀಬಿ ಜಾನ್ ಮೈದೀನ್ ಬಿನ್ ಮೈದೀನ್ ರವರಿಗೆ ಹೂಗುಚ್ಛ ನೀಡಿ ಗೌರವಿಸಿ ಮನೆಯಿಂದಲೇ ಅಂಚೆ ಮತಪತ್ರದ ಮೂಲಕ ಮತದಾನ ಮಾಡಿಸಿದರು.

ಚಿಕ್ಕಮಗಳೂರು ಜಿಲ್ಲೆಯ,ಮೂಡಿಗೆರೆ ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯ ಬಣಕಲ್ ಹೊಬಳಿ, ಹಳೇಹಳ್ಳಿ (ಭಾರತಿ ಬೈಲು) ಗ್ರಾಮದ ಹಿರಿಯ ಮತದಾರರಾದ 104 ವರ್ಷ ವಯಸ್ಸಿನ ಶ್ರೀಮತಿ ಪುಟ್ಟಮ್ಮ ಇವರ ಮನೆಗೆ ಅಂಚೆ ಮತಪತ್ರದ ಮೂಲಕ ಮತದಾನ ಮಾಡಿಸುವ ತಂಡದೊಂದಿಗೆ ಭೇಟಿ ನೀಡಿದ ಸಹಾಯಕ ಚುನಾವಣಾಧಿಕಾರಿಗಳಾದ ತಹಸೀಲ್ದಾರ್ ವೈ.ತಿಪ್ಪೇಸ್ವಾಮಿ ರವರು ಶ್ರೀಮತಿ ಪುಟ್ಟಮ್ಮ ರವರಿಗೆ ಹೂಗುಚ್ಛ ನೀಡಿ ಗೌರವಿಸಿ ಅವರ ಮನೆಯಿಂದಲೇ ಅವರಿಂದ ಅಂಚೆ ಮತಪತ್ರದ ಮೂಲಕ ಮತದಾನ ಮಾಡಿಸಿದರು.ಈ ಬಾರಿ ಚುನಾವಣಾ ಆಯೋಗ ಹಿರಿಯ ನಾಗರೀಕರು, ವಿಕಲಚೇತನರು ಮತ್ತು ಕೋವಿಡ್ ಸೋಂಕಿತರು ತಾವು ಇಚ್ಚಿಸಿದಲ್ಲಿ ಮನೆಯಿಂದಲೇ ಮತದಾನ ಮಾಡಲು ಅವಕಾಶ ನೀಡಿದೆ. ನಮೂನೆ 12-ಡಿ ಅಡಿಯಲ್ಲಿ ಸಹಿ ಹಾಕಿ ಮನೆಯಿಂದಲೇ ಮತದಾನ ಮಾಡಲು ಒಪ್ಪಿಗೆ ಸೂಚಿಸಿದವರ ಮನೆಗೆ ಚುನಾವಣಾ ಆಯೋಗ ನೇಮಿಸಿದ ವ್ಯಕ್ತಿಗಳು ಮನೆಗೆ ತೆರಳಿ ಮತದಾನಕ್ಕೆ ಅವಕಾಶ ಮಾಡಿಕೊಟ್ಟಿದ್ದಾರೆ. ಈ ಸಂದರ್ಭದಲ್ಲಿ ಕ್ಷೇತ್ರದಲ್ಲಿ ಸ್ಪರ್ಧಿಸಿರುವ ಅಭ್ಯರ್ಥಿಗಳ ಪ್ರತಿನಿಧಿಗಳು ಕೂಡ ಮತದಾರರು ಹಾಜರಿರುವಂತೆ ನೋಡಿಕೊಂಡು ಮತದಾನ ಮಾಡುವಂತೆ ಅವಕಾಶ ಮಾಡಿಕೊಟ್ಟಿದ್ದಾರೆ.

About Author

More Stories

Leave a Reply

Your email address will not be published. Required fields are marked *

You may have missed