ಚಿಕ್ಕಮಗಳೂರಿನ ಕಲಾವಿದರ ತಂಡದಿಂದ “ಆಡಿಯೋ ಸೀರಿಯಲ್ ” ಎಂಬ ಹೊಸ ಪ್ರಯೋಗಿಕ ದಾರವಾಹಿ#avintvcom
1 min readಮೊದಲ ಬಾರಿಗೆ ಚಿಕ್ಕಮಗಳೂರಿನ ಕಲಾವಿದರ ತಂಡದಿಂದ “ಆಡಿಯೋ ಸೀರಿಯಲ್ ” ಎಂಬ ಹೊಸ ಪ್ರಯೋಗಿಕ ದಾರವಾಹಿ
ಚಿಕ್ಕಮಗಳೂರಿನ ನ್ಯೂ ವರ್ಲ್ಡ್ಸ್ ಕ್ರಿಯೇಷನ್ ನಿಂದ ಇದೇ ಮೊದಲ ಬಾರಿಗೆ ಸಮುದ್ರ ಎಂಬ ಆಡಿಯೋ ಧಾರಾವಾಹಿ ಇದೇ ತಿಂಗಳ ದಿನಾಂಕ 13/5/2021 ಗುರುವಾರದಂದು ಬಿಡುಗಡೆಯಾಗಿದೆ ,ಪ್ರತಿ ವಾರಕ್ಕೊಂದು ಸಂಚಿಕೆಯನ್ನೊಳಗೊಂಡ ಧಾರಾವಾಹಿ ಆಗಿದ್ದು ಪ್ರತಿ ಭಾನುವಾರ ಬೆಳಗ್ಗೆ 11ಗಂಟೆಗೆ ಸೀರಿಯಲ್ ವರ್ಲ್ಡ್ ಕನ್ನಡ ಎಂಬ ಯೂಟ್ಯೂಬ್ ಚಾನಲ್ನಲ್ಲಿ ಪ್ರಸಾರವಾಗುತ್ತದೆ, ಈ ಆಡಿಯೋ ಧಾರಾವಾಹಿಯ ಕಥೆ ಮತ್ತು ನಿರ್ದೇಶನ ರಾಕೇಶ್ ಸಿಂಗ್ ಮಾಡಿದ್ದೂ ಕರ್ನಾಟಕ ವಿವಿಧ ಜಿಲ್ಲೆಯ ಕಲಾವಿದರು ಪಾತ್ರದ ಧ್ವನಿ ನೀಡಿದ್ದಾರೆ,ಚಿಕ್ಕಮಗಳೂರು ಮೂಡಿಗೆರೆಯ ವಿಜಯಲಕ್ಷ್ಮಿ, ಮೋನಿಷಾ B.S , ಮಾಕೊನಹಳ್ಳಿ ಯ ಪರಮೇಶ್ N.k ,ಅಬ್ದುಲ್ ನಾಜಿಮ್ ಮೂಡಿಗೆರೆ, ಕೋಲ್ಹರ್ ಜಿಲ್ಲೆಯ ಸಾಹಿಶ್ರೀ, ನಿತಿನ್ ಗುಲ್ಬರ್ಗ, ರಾಜು ಭದ್ರಾವತಿ, ರಾಕೇಶ್ ಸಿಂಗ್,ರಾಹುಲ್ ಸಿಂಗ್ ಧ್ವನಿ ನೀಡಿದ್ದಾರೆ, ಆಡಿಯೋ ಸಂಕಲನ ರಾಹುಲ್ ಸಿಂಗ್ ಮಾಡಿದ್ದಾರೆ.ಈ ಕರೊನಾ ಎಂಬ ಮಹಮಾರಿಯಿಂದಾಗಿ ಕಲಾವಿದರು ಮನೆಯಲ್ಲಿಯೇ ಇದ್ದು ತಮ್ಮ ಧ್ವನಿಗಳ ಮೂಲಕವೇ ಕಲಾಸೇವೆಯಲ್ಲಿ ತೊಡಗಿದ್ದಾರೆ..ಇನ್ನು ದಾರವಾಹಿಯ ಕಾಲ್ಪನಿಕ ಕಥೆಯು, ಬಹಳ ಕುತೂಹಲಕಾರಿ ಸನ್ನಿವೇಶಗಳನ್ನೊಳಗೊಂಡಿದ್ದು ಪ್ರತಿ ಸಂಚಿಕೆಗಳಿಗೆ ಹೊಸ ತಿರುವನ್ನು ಹಾಗೂ ರಹಸ್ಯಗಳ ಸುಳಿವು ನೀಡಿ,ವೀಕ್ಷಕರ ಕುತೂಹಲದ ನಿರೀಕ್ಷೆ ಹೆಚ್ಚಿಸಲಿದೆ…
ಈ ತಂಡಕ್ಕೆ ಒಳ್ಳೆಯ ಯಶಸ್ಸು ಸಿಗಲಿ ಎಂದು ಶುಭ ಹಾರೈಸೋಣ
ವರದಿ: ಮಗ್ಗಲಮಕ್ಕಿ ಗಣೇಶ್
ಬ್ಯುರೋ ನ್ಯೂಸ್.
http://nisargacare.com/career/

