AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

ಭಾರತ್ ಸ್ಕೌಟ್ಸಮತ್ತುಗೈಡ್ಸ್ ಸ್ಥಳಿಯ ಸಂಸ್ಥೆ ವಿದ್ಯಾರ್ಥಿಗಳಿಗೆ ದ್ವಿತೀಯ ಸೋಪಾನ ಪರೀಕ್ಷೆ ಮತ್ತು ತರಬೇತಿ #avintvcom

1 min read

 

ಟ್ಸ ಮತ್ತು ಗೈಡ್ಸ್ ಸ್ಥಳಿಯ ಸಂಸ್ಥೆ ಮೂಡಿಗೆರೆ ಇವರ ವತಿಯಿಂದ ಮೂಡಿಗೆರೆ ತಾಲ್ಲೂಕಿನಲ್ಲಿ ವ್ಯಾಸಂಗ ಮಾಡುತ್ತಿರುವ ಭಾರತ್ ಸ್ಕೌಟ್ಸ ಮತ್ತು ಗೈಡ್ಸ್ ವಿದ್ಯಾರ್ಥಿಗಳಿಗೆ ದ್ವಿತೀಯ ಸೋಪಾನ ಪರೀಕ್ಷೆ ಹಾಗೂ ರಾಜ್ಯ ಪುರಸ್ಕಾರ್ ಪೂರ್ವ ಸಿದ್ಧಾತ ತರಬೇತಿ ಶಿಬಿರವನ್ನ ಆಯೋಜಿಸಲಾಗಿತ್ತು ಈ ಕಾರ್ಯಕ್ರಮದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಹೇಮಂತ್ ರಾಜ್ ಸರ್ ರವರು ಮಾತನಾಡಿ ಪರೀಕ್ಷೆಗೆ ಬಂದಿರುವ ಮಕ್ಕಳನ್ನ ಕುರಿತು ಪರೀಕ್ಷೆಯ ಬಗ್ಗೆ ಹಾಗೂ ಪರೀಕ್ಷಾ ಸಮಯದಲ್ಲಿ ಆಗುವ ಭಯವನ್ನ ಹೋಗಲಾಡಿಸಿ ದೈರ್ಯದಿಂದ ಪರೀಕ್ಷೆ ಬರೆಯಲು ತಿಳಿಸಿದರು ಹಾಗೆಯೇ ಈಗಾಗಲೇ ನಮ್ಮ ತಾಲ್ಲೂಕಿನಲ್ಲಿ ಪರೀಕ್ಷೆಯ ಬಗ್ಗೆ ಪ್ರತಿ ಶಾಲೆಯಲ್ಲಿ ತುಂಬಾ ತರಬೇತಿ ನಡೆದಿದೆ ಆದ್ದರಿಂದ ಸರಳವಾಗಿ ಹಾಗೂ ಯಾವುದೇ ಗೊಂದಲ ಮತ್ತು ಭಯವಿಲ್ಲದೆ ಪರಿಕ್ಷೇಯನ್ನ ಎದುರಿಸುವ ಮೂಲಕ ನಮ್ಮ ತಾಲ್ಲೂಕಿನ ಮಕ್ಕಳು ಜಿಲ್ಲಾ ಹಾಗೂ ರಾಜ್ಯ ಮಟ್ಟದಲ್ಲಿ ನಡೆಯುವ ಪರೀಕ್ಷೆಯಲ್ಲಿ ಉತ್ತೀರ್ಣ ಆಗುವ ಮೂಲಕ ತಾಲ್ಲೂಕಿಗೆ ಮತ್ತು ಜಿಲ್ಲೆಗೆ ಉತ್ತಮ ಹೆಸರನ್ನ ತರುವ ನಿಟ್ಟಿನಲ್ಲಿ ತಾವೆಲ್ಲರೂ ಶ್ರಮವಹಿಸಬೇಕು ಎಂದರು ಸ್ಥಳಿಯ ಸಂಸ್ಥೆಯ ಉಪಾಧ್ಯಕ್ಷರಾದ ಮಹಮ್ಮದ್ ಹಮೀದ್ ರವರು ನಮ್ಮ ಸಂಸ್ಥೆಯು ಸಮಾಜಕ್ಕೆ ಮಾದರಿಯಾದ ಸಂಸ್ಥೆಯಾಗಿದ್ದು, ಸರ್ವರಿಗೂ ಶಿಸ್ತು, ಸಮಯ ಪ್ರಜ್ಞೆ, ನಾಯಕತ್ವ ಗುಣಗಳನ್ನ ಕಲಿಸುತ್ತದೆ ಹಾಗೆಯೇ ಆಪತ್ಕಾಲದಲ್ಲಿ ಸಹಕಾರಿಯಾಗುವ ಮೂಲಕ ಉತ್ತಮ ಸಂಸ್ಥೆಯಾಗಿ ನಡೆಯುತ್ತಿದೆ ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ಸೇವಾಮನೋಭಾವ ವನ್ನ ಅಳವಡಿಸಿಕೊಳ್ಳುವ ಮೂಲಕ ಸಮಾಜಕ್ಕೆ ಮಾದರಿಯಾಗಬೇಕು ಎಂದರು ಕ್ಷೇತ್ರ ಆರೋಗ್ಯ ಅಧಿಕಾರಿಗಳಾದ ಶ್ರೀಯುತ ಮಂಜುನಾಥ್ ರವರು ಮಕ್ಕಳು ಪಠ್ಯ ಚಟುವಟಿಕೆಯ ಜೊತೆಗೆ ಪಠ್ಯೇತರ ಚಟುವಟಿಕೆಗಳು ಹೆಚ್ಚಾಗಿ ತೊಡಗಿಸಿಕೊಳ್ಳಬೇಕು ವೈಯಕ್ತಿಕ ಮತ್ತು ಸಮುದಾಯದ ಆರೋಗ್ಯದ ಬಗ್ಗೆ ಗಮನ ಹರಿಸಬೇಕು ಎಂದು ತಿಳಿಸಿ ಗುರುಗಳ ಬಗೆಗಿನ ಅರ್ಥ ಮತ್ತು ಅವರ ಅಶಿರ್ವಾದ ಇರಬೇಕು ಎಂದು ಹೇಳುವ ಮೂಲಕ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ಶುಭಹಾರೈಸಿದರು. ಬಿಜಿಎಸ್ ವಿಎಸ್ ಶಾಲೆಯ ಪ್ರಾ0ಶುಲರಾದ ರವೀಂದ್ರ ಕುಮಾರ್ ಶ್ರೀವಾತ್ಸವ್ ಸರ್, ಜಿಲ್ಲಾ ಸಂಘಟಕರಾದ ಕಿರಣ್ ಸರ್ ಹಾಗೂ ನವೀನ್ ಸರ್ ಮಕ್ಕಳಿಗೆ ಶುಭಾಷಯಗಳನ್ನ ಕೋರಿದರು ಸಭೆಯ ಹಾಗೂ ಮೂಡಿಗೆರೆ ಸ್ಥಳಿಯ ಸಂಸ್ಥೆಯ ಗೌರವ ಅಧ್ಯಕ್ಷರಾದ ಶ್ರೀಯುತ ಮಗ್ಗಲಮಕ್ಕಿಗಣೇಶ್ ರವರು ನಮ್ಮ ಸ್ಥಳಿಯ ಸಂಸ್ಥೆಯ ಮಕ್ಕಳು ಒಂದಲ್ಲ ಒಂದು ಸೇವೆಯಲ್ಲಿ ಪಾಲ್ಗೊಂಡು ಸಮಾಜದಲ್ಲಿ ತಮ್ಮನ್ನ ತಾವು ಗುರುತಿಸುಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ ಅವರಿಗೆ ಅವರ ಶಾಲೆಯ ಶಿಕ್ಷಕರು ಮತ್ತು ಪೋಷಕರು ಪ್ರೋತ್ಸಾಹ ನೀಡುತ್ತಿದ್ದಾರೆ, ವಿದ್ಯಾರ್ಥಿಗಳು ಯಾವುದೆ, ಭಯ, ಗೊಂದಲವಿಲ್ಲದೆ ಧೈರ್ಯವಾಗಿ ಪರಿಕ್ಷೇಯನ್ನ ಎದುರಿಸಬೇಕು, ಕಳೆದ ಸಾಲಿನಲ್ಲಿ ನಮ್ಮ ತಾಲ್ಲೂಕಿನ ವಿದ್ಯಾರ್ಥಿಗಳು ರಾಜ್ಯ ಪುರಸ್ಕಾರ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ನಮ್ಮ ಸಂಸ್ಥೆಗೆ ಹೆಮ್ಮೆ ತಂದಿದ್ದಾರೆ ಹಾಗೆಯೆ ಈ ಬಾರಿಯೂ ಸಹ ರಾಜ್ಯ ಪುರಸ್ಕಾರ ಪರೀಕ್ಷೆಗೆ ಅರ್ಜಿ ಸಲ್ಲಿಸಿರುವ ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಉತ್ತೀರ್ಣರಾಗುವ ಮೂಲಕ ನಮ್ಮ ಸಂಸ್ಥೆಯ ಗೌರವವನ್ನ ಇನ್ನಷ್ಟು ಹೆಚ್ಚಿಸಬೇಕು ಎಂದರು, ಪ್ರತಿಯೊಬ್ಬ ವಿದ್ಯಾರ್ಥಿಯ ಪೋಷಕರುಗಳು, ಶಾಲೆಯ ಮುಖ್ಯಸ್ಥರುಗಳ ಪ್ರೋತ್ಸಾಹದಿಂದಾಗಿ ಈ ಸಂಸ್ಥೆಯು ಉತ್ತಮವಾಗಿ ನಡೆಯಲು ಸಹಕಾರಿಯಾಗಿದೆ, ಇದೇ ರೀತಿ ಮುಂದೆಯೂ ಕೂಡ ವಿದ್ಯಾರ್ಥಿಗಳ ಒಳಿತಿಗಾಗಿ ತಮ್ಮೆಲ್ಲರ ಸಹಕಾರ ಅನಿವಾರ್ಯ ಎಂದರು, ನಮ್ಮೊಂದಿಗೆ ಸಹಕರಿಸುತ್ತಿರುವ ನಮ್ಮ ಸ್ಥಳೀಯ ಸಂಸ್ಥೆಯ ಪದಾಧಿಕಾರಿಗಳು, ಶಿಕ್ಷಕ ಬಂಧುಗಳು, ಜಿಲ್ಲಾ ಸಂಸ್ಥೆಯವರಿಗೆ ತುಂಬು ಹೃದಯದ ದನ್ಯವಾದಗಳನ್ನ ತಿಳಿಸಿ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು. ಸ್ಥಳಿಯ ಸಂಸ್ಥೆಯ ಕಾರ್ಯದರ್ಶಿ ಜಯಪಾಲ್ ಸ್ವಾಗತಿಸಿ, ಆತ್ಮೀಯ ಮೇಡಮ್ ರವರು ವಂದಿಸಿದರು, ಚೇತನ್ ಸರ್ ರವರು ನಿರೂಪಿಸಿದರು, ಈ ಕಾರ್ಯಕ್ರಮದಲ್ಲಿ ಪ್ರಶಾಂತ್ ಸರ್, ಕಮಲ ಮೇಡಮ್, ಅಶ್ವಿನಿ ಮೇಡಮ್, ಬಸವರಾಜು ಸರ್, ಪೂರ್ಣೇಷ್ ಸರ್, ಗಣೇಶ್ ಸರ್, ಜೀವನ್ ಸರ್, ಮಹದೇವ್ ಬಡಿಗೇರ್ ಮತ್ತಿತರರು ಹಾಜರಿದ್ದರು… ವರದಿ. ಮಗ್ಗಲಮಕ್ಕಿಗಣೇಶ್. ಬ್ಯೂರೋ ನ್ಯೂಸ್

ಉದ್ಯೋಗ ಲಭ್ಯವಿದೆ | ಉಚಿತ ವಸತಿ ಮತ್ತು ಊಟ | ಸೀಮಿತ ಸೀಟುಗಳು ಮಾತ್ರ ಲಭ್ಯವಿದೆ | ತಕ್ಷಣವಾಗಿ ಅರ್ಜಿಯನ್ನು ಹಾಕಿ | Jobs available | With free accommodations and meals | Only limited seats available | Apply immediately |

ಭಾರತ್ ಸ್ಕೌ

About Author