AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

ಪಿ.ಟಿ ಉಷಾ ರವರ 1979ನೇ ದಾಖಲೆಯನ್ನು ಕೊಡಗಿನ ಅಥ್ಲೆಟ್ ಉನ್ನತಿ ಅಯ್ಯಪ್ಪ ಸರಿಗಟ್ಟಿದ್ದಾರೆ. #avintvcom

1 min read
Featured Video Play Icon

ಪಿ.ಟಿ ಉಷಾ ದಾಖಲೆ ಮುರಿದ ಕೊಡಗಿನ ಅಥ್ಲೆಟ್

ಕೊಡಗು: ಭಾರತದ ವೇಗ ಎಂದೇ ಖ್ಯಾತಿ ಪಡೆದಿದ್ದ ಪಿ.ಟಿ ಉಷಾ ರವರ 1979ನೇ ದಾಖಲೆಯನ್ನು ಕೊಡಗಿನ ಅಥ್ಲೆಟ್ ಉನ್ನತಿ ಅಯ್ಯಪ್ಪ ಸರಿಗಟ್ಟಿದ್ದಾರೆ.16ನೇ ವರ್ಷದ ವಿಭಾಗದಲ್ಲಿ ಪಿ.ಟಿ ಉಷಾ 12.2 ಎರಡು ಸೆಕೆಂಡ್ ನಲ್ಲಿ ರಾಷ್ಟ್ರೀಯ ದಾಖಲೆ ಮಾಡಿದ್ದರೆ ಉನ್ನತಿ ಅಯ್ಯಪ್ಪ 11.50 ಸೆಕೆಂಡ್ ನಲ್ಲಿ 300 ಮೀಟರ್ ಹರ್ಡಲ್ಸ್ ನಲ್ಲಿ ನೂತನ ದಾಖಲೆ ನಿರ್ಮಿಸಿದ್ದಾರೆ.ಎರಡು ಭಾರಿ ಒಲಂಪಿಯನ್ ಅಥ್ಲೆಟ್ ಪ್ರಮಿಳಾ ಅಯ್ಯಪ್ಪರವರ ಪುತ್ರಿಯಾಗಿರುವ ಉನ್ನತಿ ಗುವಹಾಟಿಯಲ್ಲಿ ನಡೆಯುತ್ತಿರುವ 36ನೇ ರಾಷ್ಟ್ರೀಯ ಜೂನಿಯರ್ ಅಥ್ಲೇಟಿಕ್ಸ್ ಚಾಂಪಿಯನ್ ಶಿಪ್ ನಲ್ಲಿ ಈ ದಾಖಲೆ ನಿರ್ಮಿಸಿದ್ದಾರೆ. 80 ಮೀಟರ್ ಹರ್ಡಲ್ಸ್ ಮತ್ತು 300 ಮೀಟರ್ ಹರ್ಡಲ್ಸ್ ನಲ್ಲಿ ಈ ದಾಖಲೆ ನಿರ್ಮಾಣ ಮಾಡಿದ್ದಾರೆ. ಕರ್ನಾಟಕ

ರಾಜ್ಯವನ್ನು ಪ್ರತಿನಿದಿಸಿದ್ದ ಉನ್ನತಿ 80 ಮೀಟರ್ ಹರ್ಡಲ್ಸ್ ನಲ್ಲಿ 11.50 ಸೆಕೆಂಡ್ ನಲ್ಲಿ ಗುರಿ ತಲುಪುವ ಮೂಲಕ ಚಿನ್ನದ ಪದಕ ಗೆದ್ದುಕೊಂಡರೆ,300 ಮೀಟರ್ ಹರ್ಡಲ್ಸ್ ನಲ್ಲಿ 40.11 ಸೆಕೆಂಡ್ ನಲ್ಲಿಯೂ ಚಿನ್ನದ ಪದಕ ಪಡೆದುಕೊಂಡಿದ್ದಾರೆ. ವಿಶೇಷವೆಂದರೆ ಈಕೆಗೆ ಇವರ ಪೋಷಕರಾದ ಪ್ರಮಿಳಾ ಮತ್ತು ಅಯ್ಯಪ್ಪ ದಂಪತಿಗಳೇ ಕೋಚ್.

ಉದ್ಯೋಗ ಲಭ್ಯವಿದೆ | ಉಚಿತ ವಸತಿ ಮತ್ತು ಊಟ | ಸೀಮಿತ ಸೀಟುಗಳು ಮಾತ್ರ ಲಭ್ಯವಿದೆ | ತಕ್ಷಣವಾಗಿ ಅರ್ಜಿಯನ್ನು ಹಾಕಿ | Jobs available | With free accommodations and meals | Only limited seats available | Apply immediately |

About Author