AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

ಬರಿಗಾಲಲ್ಲಿ ಮತಯಾಚಿಸಿ ಹಣ ಹೆಂಡ ಹಂಚದೆ ಗ್ರಾ.ಪಂ ಚುನಾವಣೆಯಲ್ಲಿ ಗೆಲುವು ಸಾಧಿಸಿದ ನವೀನ್ ಹಾವಳಿಗೆ #avintvcom

1 min read
Featured Video Play Icon

ಬರಿಗಾಲಲ್ಲಿ ಮತಯಾಚಿಸಿದ ಅಭ್ಯರ್ಥಿಗೆ ಒಲಿದ ಉಪಾಧ್ಯಕ್ಷ ಸ್ಥಾನ.

ಬರಿಗಾಲಲ್ಲಿ ಮತಯಾಚಿಸಿ ಹಣ ಹೆಂಡ ಹಂಚದೆ ಗ್ರಾ.ಪಂ ಚುನಾವಣೆಯಲ್ಲಿ ಗೆಲುವು ಸಾಧಿಸಿದ ನವೀನ್ ಹಾವಳಿಗೆ ನಿಡುವಾಳೆ ಗ್ರಾ.ಪಂ ಉಪಾಧ್ಯಕ್ಷ ಸ್ಥಾನ ಒಲಿದಿದೆ.

ನಿಡುವಾಳೆ ಗ್ರಾ.ಪಂ ಅಧ್ಯಕ್ಷ ಉಪಾಧ್ಯಕ್ಷರ ಚುನಾವಣೆ ಬುಧವಾರ ನಡೆದಿದ್ದು ಸಾಮಾನ್ಯ ಮಹಿಳೆಗೆ ಮೀಸಲಾಗಿದ್ದ ಅಧ್ಯಕ್ಷ ಸ್ಥಾನಕ್ಕೆ ಟಿ.ಕೆ ಶೃತಿ ಆಯ್ಕೆಯಾಗಿದ್ದು ಸಾಮಾನ್ಯ ಸ್ಥಾನಕ್ಕೆ ಮೀಸಲಾಗಿದ್ದ ಉಪಾಧ್ಯಕ್ಷ ಸ್ಥಾನಕ್ಕೆ ನವೀನ್ ಹಾವಳಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಚುನಾವಣಾಧಿಕಾರಿಯಾಗಿ ಕ್ಷೇತ್ರ ಶಿಕ್ಷಣಾಧಿಕಾರಿ ಹೇಮಂತ್ ರಾಜ್ ಕಾರ್ಯ ನಿರ್ವಹಿಸಿದರು. ಈ ಸಂದರ್ಭದಲ್ಲಿ ಗ್ರಾ.ಪಂ ಸದಸ್ಯರಾದ ಅರುಣ, ಲಕ್ಷ್ಮಿ, ಗುಲಾಬಿ, ಸಚಿನ್ ಮರ್ಕಲ್, ತಾ.ಪಂ ಮಾಜಿ ಅಧ್ಯಕ್ಷ ಕೆ.ಸಿ ರತನ್,  ಬಿಜೆಪಿ ಹೋಬಳಿ ಅಧ್ಯಕ್ಷ ವಿಜೇಂದ್ರ ಮರ್ಕಲ್, ಪಿಡಿಓ ಚಂದ್ರಾವತಿ, ಸಿಬ್ಬಂದಿಗಳಾದ ಸುನೀಲ್, ಪ್ರವೀಣ್, ಸ್ಥಳಿಯರಾದ ಗೌತಮ್, ಪರೀಕ್ಷಿತ್ ಜಾವಳಿ, ಮಗ್ಗಲಮಕ್ಕಿ ಗಣೇಶ್ ಮುಂತಾದವರು ಇದ್ದರು.

ವರದಿ.

ಮಗ್ಗಲಮಕ್ಕಿಗಣೇಶ್

ಬ್ಯೂರೋ ನ್ಯೂಸ್.

ಉದ್ಯೋಗ ಲಭ್ಯವಿದೆ | ಉಚಿತ ವಸತಿ ಮತ್ತು ಊಟ | ಸೀಮಿತ ಸೀಟುಗಳು ಮಾತ್ರ ಲಭ್ಯವಿದೆ | ತಕ್ಷಣವಾಗಿ ಅರ್ಜಿಯನ್ನು ಹಾಕಿ | Jobs available | With free accommodations and meals | Only limited seats available | Apply immediately |

About Author