ನಗರದ ಹೊರವಲಯದ ಎಮರಾಲ್ಡ್ ಎನ್ಕ್ಲೇವ್ ನಲ್ಲಿ ಬೆಳ್ಳಂಬೆಳಗೆ ಚಿರತೆ ಪ್ರತ್ಯಕ್ಷವಾಗಿದೆ. #avintvcom
1 min read
ಇನ್ಫೋಸಿಸ್ ಬಳಿ ಚಿರತೆ ಪ್ರತ್ಯಕ್ಷ
ಮೈಸೂರು:ನಗರದ ಹೊರವಲಯದ ಇನ್ಫೋಸಿಸ್ ಸಂಸ್ಥೆ ಬಳಿಯೇ ಇರುವ ಎಮರಾಲ್ಡ್ ಎನ್ಕ್ಲೇವ್ ನಲ್ಲಿ ಬೆಳ್ಳಂಬೆಳಗೆ ಚಿರತೆ ಪ್ರತ್ಯಕ್ಷವಾಗಿದೆ.ಈ ಕಟ್ಟಡ ದ ಮುಂಬಾಗಿಲು ಸೇರಿದಂತೆ ಸುತ್ತಮುತ್ತಲೂ ಆಹಾರಕ್ಕಾಗಿ ಹೊಂಚು ಹಾಕಿರುವ ದೃಶ್ಯ ಸಿಸಿ ಕ್ಯಾಮರಾದಲ್ಲಿ ಪತ್ತೆಯಾಗಿದ್ದು,ಇದೇ ವೇಳೆ ಬಾಗಿಲ ಮುಂದೆ ಗಾಡ ನಿದ್ರೆಯಲ್ಲಿದ್ದ ನಾಯಿಯೊಂದನ್ನು ಹೊತ್ತೋಯ್ದಿದೆ. ಇಂದು ಬೆಳಗ್ಗೆ ಕ್ಯಾಮರಾ ಚಿತ್ರೀಕರಣ ಪರಿಶೀಲಿಸುವ ಸಂದರ್ಭ ಸಿಬ್ಬಂಧಿಗಳು ಬೆಚ್ಚಿಬಿದ್ದಿದ್ದು,ಇಲ್ಲಿಗೆ ಸಮೀಪದ ಸಾಮಾಜಿಕ ಅರಣ್ಯದಿಂದ ಬಂದಿರುವ ಶಂಕೆ ಇದೆ.ಈ ಬಗ್ಗೆ ಅರಣ್ಯ ಇಲಾಖೆಗೆ ಮಾಹಿತಿ ನೀಡಲಾಗಿದ್ದು ಪರಿಶೀಲನೆ ನಡೆಸಿದ್ದಾರೆ.