लाइव कैलेंडर

November 2026
M T W T F S S
 1
2345678
9101112131415
16171819202122
23242526272829
30  
20/11/2026

AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

‎ಬಗ್ಗಸಗೋಡು ಸರ್ಕಾರಿ ಶಾಲೆಗೆ ‎ ‎3.50 ಲಕ್ಷ ಮೌಲ್ಯದ ಉಪಕರಣಗಳ ಕೊಡುಗೆ….

1 min read

‎ಬಗ್ಗಸಗೋಡು ಸರ್ಕಾರಿ ಶಾಲೆಗೆ
‎
‎3.50 ಲಕ್ಷ ಮೌಲ್ಯದ ಉಪಕರಣಗಳ ಕೊಡುಗೆ.
‎
ಕೊಟ್ಟಿಗೆಹಾರ : ಸರ್ಕಾರಿ ಶಾಲೆಗಳ ಅಭಿವೃದ್ಧಿ ಹಾಗೂ ವಿದ್ಯಾರ್ಥಿಗಳಿಗೆ ಉತ್ತಮ ಕಲಿಕಾ ವಾತಾವರಣ ಕಲ್ಪಿಸುವ ಉದ್ದೇಶದಿಂದ ಶೆರ್ವಿನ್ ವಿಲಿಯಮ್ಸ್ ಸಂಸ್ಥೆ ಹಾಗೂ ಬೆಂಗಳೂರಿನ ಜೆ.ಪಿ. ನಗರ ರೋಟರಿ ಸಂಸ್ಥೆಯ ಸಹಯೋಗದಲ್ಲಿ ಬಗ್ಗಸಗೋಡು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಸುಮಾರು 3.50 ಲಕ್ಷ ಮೌಲ್ಯದ ಉಪಕರಣಗಳನ್ನು ನೀಡಲಾಗಿದೆ. ಕೊಡುಗೆಯಾಗಿ

‎ಶಾಲೆಗೆ 14 ಡೆಸ್ಟ್‌ಗಳು, ಮೂರು ಅಲೆರಾಗಳು, ಎರಡು ಗ್ರೀನ್ ಬೋರ್ಡ್‌ಗಳು, ಒಂದು ಸ್ಮಾರ್ಟ್ ಟಿವಿ ಹಾಗೂ ಒಂದು ವಾಟರ್ ಪ್ಯೂರಿಫೈಯರ್ ಸೇರಿದಂತೆ ಅಗತ್ಯ ಸೌಲಭ್ಯಗಳನ್ನು ಒದಗಿಸುವ ಮೂಲಕ ಶಾಲೆಯ ಶೈಕ್ಷಣಿಕ ಮತ್ತು ಮೂಲಸೌಕರ್ಯ ಅಭಿವೃದ್ಧಿಗೆ ಸಂಸ್ಥೆಗಳು ಸಹಕರಿಸಿವೆ.

‎ಶೇರ್ವಿನ್ ವಿಲಿಯಮ್ಸ್ ಸಂಸ್ಥೆಯ ಮುಖ್ಯಸ್ಥ ರತನ್ ರೈ, ರೋಟರಿ ಸಂಸ್ಥೆಯ ಅಧ್ಯಕ್ಷ ರವಿ ಜೆ.ಎಂ., ರೋಟರಿ ಸದಸ್ಯರಾದ ಶ್ರೀನಿವಾಸ್ ಕೆ. ಹಾಗೂ ಸುರೇಶ್ ರಾಬರ್ಟ್ ಅವರು ಶಾಲೆಗೆ ಅಗತ್ಯ ಉಪಕರಣಗಳನ್ನು ಒದಗಿಸುವ ಮೂಲಕ ವಿದ್ಯಾರ್ಥಿಗಳ ಕಲಿಕೆಗೆ ಪ್ರೋತ್ಸಾಹ ನೀಡಿದ್ದಾರೆ.
‎
‎ಶಾಲೆಯ ಅಭಿವೃದ್ಧಿಗೆ ಉದಾರವಾಗಿ ಸಹಕರಿಸಿದ ಸಂಸ್ಥೆಗಳ ಮುಖ್ಯಸ್ಥರು ಹಾಗೂ ಪದಾಧಿಕಾರಿಗಳಿಗೆ ಶಾಲೆಯ ಮುಖ್ಯ ಶಿಕ್ಷಕರು, ಸಹ ಶಿಕ್ಷಕರು, ಎಸ್‌ಡಿಎಂಸಿ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಸರ್ವ ಸದಸ್ಯರು, ವಿದ್ಯಾರ್ಥಿಗಳು, ಪೋಷಕರು ಮತ್ತು ಹಳೆಯ ವಿದ್ಯಾರ್ಥಿಗಳು ಅಭಿನಂದನೆ ಸಲ್ಲಿಸಿ ಕೃತಜ್ಞತೆ ವ್ಯಕ್ತಪಡಿಸಿದ್ದಾರೆ.

About Author

Leave a Reply

Your email address will not be published. Required fields are marked *

You may have missed