ಕಾಫಿ ಬೆಳೆಗಾರರ ಸಮಸ್ಯೆ ಪರಿಹರಿಸಿ,ಕೇಂದ್ರ ಸಚಿವರಾದ ಹೆಚ್.ಡಿ ಕುಮಾರಸ್ವಾಮಿಗೆ ಬೆಳೆಗಾರರ ನಿಯೋಗ ಒತ್ತಾಯ.*
1 min read*ಕಾಫಿ ಬೆಳೆಗಾರರ ಸಮಸ್ಯೆ ಪರಿಹರಿಸಿ,ಕೇಂದ್ರ ಸಚಿವರಾದ ಹೆಚ್.ಡಿ ಕುಮಾರಸ್ವಾಮಿಗೆ ಬೆಳೆಗಾರರ ನಿಯೋಗ ಒತ್ತಾಯ.*



ಕಾಫೀಬೆಳೆಗಾರರ ಪ್ರಮುಖ ಸಮಸ್ಯೆಗಳಾದ ಕಾಡನೆ,ಕಾಡುಕೋಣ,ಕಸ್ತೂರಿರಂಗನ್ ವರದಿ, ಕಂದಾಯ-ಅರಣ್ಯ ಸಮಸ್ಯೆ ಬರಪರಿಸ್ಥಿತಿ ಸೇರಿದಂತೆ ಹಲವು ಸಮಸ್ಯೆಗಳ ಕುರಿತು ಕೇಂದ್ರ ಉಕ್ಕು ಮತ್ತು ಬೃಹತ್ ಕೈಗಾರಿಕ ಸಚಿವರಾದ ಶ್ರೀ ಹೆಚ್. ಡಿ ಕುಮಾರ ಸ್ವಾಮಿಯವರನ್ನು ಇಂದು ಧರ್ಮಸ್ಥಳದಲ್ಲಿ ಚಿಕ್ಕಮಗಳೂರು ಜಿಲ್ಲೆಯ ಬೆಳೆಗಾರರ ನಿಯೋಗ ಭಾರತೀಯ ಕಾಫೀಮಂಡಳಿ ಅಧ್ಯಕ್ಷರಾದ ಶ್ರೀ ಎಂ. ಜೆ ದಿನೇಶ್ ನೇತೃತ್ವದಲ್ಲಿ ವಿಧಾನಪರಿಷತ್ ಸದಸ್ಯರಾದ ಶ್ರೀ ಎಸ್. ಎಲ್ ಬೋಜೇಗೌಡರ ಸಮ್ಮುಖದಲ್ಲಿ ಭೇಟಿಮಾಡಿ ಮನವಿ ಸಲ್ಲಿಸಲಾಯಿತು.
ನಮ್ಮ ಮನವಿಗೆ ಸ್ಪಂದಿಸಿದ ಸಚಿವರು, ಕಾಫೀಬೆಳೆಗಾರರ ಸಮಸ್ಯೆ ಅರಿವು ನನಗಿದೆ, ಸಂಬಂಧಪಟ್ಟ ಸಚಿವರೊಂದಿಗೆ ಮಾತನಾಡುತ್ತೇನೆ,ಪ್ರಮುಖವಾಗಿ ಕಾಡಾನೆ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಪ್ರಯತ್ನ ಮುಂದುವರೆದಿದೆ ಎಂದರು.
ಜಿಲ್ಲಾ ಅಧ್ಯಕ್ಷರಾದ ಕೆ. ಯು ರತೀಶ್ ಕುಮಾರ್,ಉಪಾಧ್ಯಕ್ಷರಾದ ಬಿ. ಆರ್ ಬಾಲಕೃಷ್ಣ, ಪ್ರದಾನ ಕಾರ್ಯದರ್ಶಿ ಕೆರೆಮಕ್ಕಿಮಹೇಶ್,ಜಿಲ್ಲಾ ಒಕ್ಕಲಿಗರ ಸಂಘದ ಅಧ್ಯಕ್ಷರಾದ ಟಿ. ರಾಜಶೇಖರ್, ಟಿ. ಡಿ ಮಲ್ಲೇಶ್,ಪ್ರಕಾಶ್ ಮಾಡ್ಲಾ,ಕೆ. ಸಿ ರತನ್,ಮನುಕತ್ಲೆಖಾನ್, ಹಾಸನ ಪ್ಲಾಂಟರ್ಸ್ ಬ್ಯಾಂಕ್ ಅಧ್ಯಕ್ಷ ಸುರೇಂದ್ರ ಹುಣಸೆಮಕ್ಕಿ ನಿಯೋಗದಲ್ಲಿದ್ದರು.

