“ಮಹಿಳಾ ಕೌಶಲ್ಯ ತರಬೇತಿ ಶಿಬಿರದ ಸಮಾರೋಪ ಸಮಾರಂಭ.”
1 min read
ದಕ್ಷಿಣ ಕನ್ನಡ : ರೈತ ಯುವಕಮಂಡಲ ಚಾರಿಟೇಬಲ್ ಟ್ರಸ್ಟ್ ಹಾಗೂ ರೋಟರಿ ಕ್ಲಬ್ ಸುಬ್ರಹ್ಮಣ್ಯ ಇದರ ಸಹಾಯಯೋಗದಲ್ಲಿ ನಡೆದ ಮಹಿಳೆಯರ ಕೌಶಲ್ಯ ತರಬೇತಿ ಶಿಬಿರದ ಸಮಾರೋಪ ಸಮಾರಂಭ ಕಾರ್ಯಕ್ರಮ ದಿನಾಂಕ 11/07/2026ರ ಶನಿವಾರದಂದು ಸುಳ್ಯ ತಾಲ್ಲೂಕಿನ,ಏನೇಕಲ್ಲಿನಲ್ಲಿ ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷ ಸ್ಥಾನವನ್ನು ಟ್ರಸ್ಟ್ ನ ಅಧ್ಯಕ್ಷರಾದ ರಾಮಕೃಷ್ಣ ಮಲ್ಲಾರ ವಹಿಸಿದ್ದರು.

ಮುಖ್ಯ ಅತಿಥಿಗಳಾಗಿ ರೊಟೇರಿಯನ್ ಮೇಜರ್ ಡೋನರ್ ಲತಾ ಮಧುಸೂದನ್ ಅಧ್ಯಕ್ಷರು ರೋಟರಿ ಕ್ಲಬ್ ಸುಳ್ಯ ಹಾಗೂ ಎಂ.ಪಿ.ಎಚ್.ಎಫ್ ಶ್ರೀ ಜಯಪ್ರಕಾಶ್ ಪೂರ್ವ ಅಧ್ಯಕ್ಷರು ರೋಟರಿ ಕ್ಲಬ್ ಸುಬ್ರಮಣ್ಯ ಹಾಗೂ ಶ್ರೀಮತಿ ಸುಮಾ ಕುದ್ವ ತರಬೇತುದಾರರು ಮತ್ತು ಮಾಲೀಕರು ಸೌಂದರ್ಯ ಬ್ಯೂಟಿ ಪಾರ್ಲರ್ ಪಂಜ, ಮತ್ತು ಟ್ರಸ್ಟಿನ ಉಪಾಧ್ಯಕ್ಷರಾದ ಶ್ರೀ ಶಿವರಾಂ ಜಿದ್ಗಲ್ ಮತ್ತು ಟೈಲರಿಂಗ್ ತರಬೇತುದಾರರಾದ ಮೀನಾಕ್ಷಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಮುಖ್ಯ ಅತಿಥಿಗಳಾದ ರೊಟೇರಿಯನ್ ಮೇಜರ್ ಡೋನರ್ ಲತಾ ಮಧುಸೂದನ್ ಮಾತನಾಡಿ ರೈತ ಯುವಕ ಮಂಡಲ ಚಾರಿಟೇಬಲ್ ಟ್ರಸ್ಟ್ ಇಂದು ಮಹಿಳಾ ಸಬಲೀಕರಣಕ್ಕೆ ಪೂರಕವಾಗುವಂತಹ ಕಾರ್ಯಕ್ರಮಗಳನ್ನು ಆಯೋಜನೆ ಮಾಡುತ್ತಿದೆ ಇದರಿಂದಾಗಿ ಇಂದು ಮಹಿಳೆಯರು ಸ್ವಾವಲಂಭಿಗಳಾಗುತ್ತಿದ್ದಾರೆ ಮುಂದಿನ ದಿವಸಗಳಲ್ಲಿ ರೋಟರಿ ಕ್ಲಬ್ ಸುಳ್ಯದಿಂದ ಟ್ರಸ್ಟಿಗೆ ಪರಸ್ಪರ ಸಹಾಯ ಹಸ್ತ ನೀಡುವುದಾಗಿ ಹೇಳಿದರು. ಇನ್ನೋರ್ವ ಅತಿಥಿಯಾದ ರೊಟೇರಿಯನ್ ಎಂ.ಪಿ.ಎಚ್.ಎಫ್ ಶ್ರೀ ಜಯಪ್ರಕಾಶ್ ಪೂರ್ವ ಅಧ್ಯಕ್ಷರು ರೋಟರಿ ಕ್ಲಬ್ ಸುಬ್ರಹ್ಮಣ್ಯ ಇವರು ಮಾತನಾಡಿ ಟ್ರಸ್ಟಿನ ಇಂತಹ ಸಮಾಜಮುಖಿ ಕಾರ್ಯಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ ಹೊಲಿಗೆ ತರಬೇತಿ ಪಡೆದ ಮಹಿಳೆಯರಿಗೆ ರೋಟರಿ ಕ್ಲಬ್ ಬೆಂಗಳೂರು ವತಿಯಿಂದ ಟೈಲರಿಂಗ್ ಮಿಷಿನ್ ಕೊಡಿಸುವುದರ ಬಗ್ಗೆ ಪ್ರಯತ್ನಿಸುತ್ತೇನೆ ಎಂಬ ಭರವಸೆ ನೀಡಿದರು ಮತ್ತು ಟ್ರಸ್ಟಿನ ಕಾರ್ಯಕ್ರಮವನ್ನು ಶ್ಲಾಘಿಸಿದರು.
ತರಬೇತುದಾರರಾದ ಶ್ರೀಮತಿ ಸುಮಾಕುದ್ವ ರವರು ಮಾತನಾಡಿ ನಾನು ಕಲಿತ ವಿದ್ಯೆಯನ್ನು ಇನ್ನೊಬ್ಬರಿಗೆ ಹೇಳಿಕೊಡಲು ತುಂಬಾ ಖುಷಿಯಾಗುತ್ತಿದೆ ಹಾಗೂ ಇದರಿಂದಾಗಿ ಮಹಿಳೆಯರು ತಮ್ಮ ಕಾಲ ಮೇಲೆ ತಾವೇ ನಿಂತು ತಮ್ಮ ಜೀವನವನ್ನು ನಡೆಸಬಹುದು ಇನ್ನು ಮುಂದೆ ಕೂಡ ಟ್ರಸ್ಟಿನ ಇಂತಹ ಸಮಾಜಮುಖಿ ಕಾರ್ಯಕ್ರಮಗಳಿಗೆ ನನ್ನ ಸಂಪೂರ್ಣ ಬೆಂಬಲ ಇದೆ ಎಂದು ಭರವಸೆ ನೀಡಿದರು.ಕಾರ್ಯಕ್ರಮದ ಅಧ್ಯಕ್ಷರಾದ ರಾಮಕೃಷ್ಣ ಮಲ್ಲಾರ ಮಾತನಾಡಿ ಮಹಿಳಾ ಸಬಲೀಕರಣಕ್ಕೆ ಮುಂದಿನ ದಿನಗಳಲ್ಲಿ ಟ್ರಸ್ಟಿನ ವತಿಯಿಂದ ಇನ್ನೂ ಹೆಚ್ಚಿನ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸುವುದಾಗಿ ತಿಳಿಸಿದರು.ಪ್ರಶಿಕ್ಷಣಾರ್ಥಿಗಳಾದ ಶ್ರೀಮತಿ ಶೋಭಾ ಗಿರಿಧರ್,ಶ್ರೀಮತಿ ಅಕ್ಷತಾ ರಂಜನ್,ಭವ್ಯ ಕುದ್ವ,ಶ್ರೀ ಜಿ. ಚಂದ್ರಶೇಖರ್ ನಾಯರ್ ತಮ್ಮ ಮೂರು ದಿನದ ಅನಿಸಿಕೆಯನ್ನು ವ್ಯಕ್ತಪಡಿಸಿದರು.ಟ್ರಸ್ಟಿನ ನಿರ್ದೇಶಕರಾದ ಭರತ್ ನೆಕ್ರಾಜೆ ಸ್ವಾಗತಿಸಿದರು.ಟ್ರಸ್ಟಿಗಳಾದ ಚಂದ್ರಶೇಖರ್ ನಾಯರ್ ಮುಖ್ಯ ಅತಿಥಿಗಳ ಪರಿಚಯ ಮಾಡಿದ.ರು ಟ್ರಸ್ಟಿನ ಖಜಾಂಜಿಗಿಯಾದ ನಾಗರಾಜ್ ಪರಮಲೆ ಧನ್ಯವಾದ ಸಮರ್ಪಿಸಿದರು. ನಿರ್ದೇಶಕರಾದ ವಿಜಯಕುಮಾರ್ ಅಮೈ ಕಾರ್ಯಕ್ರಮ ನಿರೂಪಿಸಿದರು ಟ್ರಸ್ಟಿನ ನಿರ್ದೇಶಕರುಗಳಾದ ಪ್ರಶಾಂತ್ ದೋಣಿಮನೆ ಮೋಹನ್ ಕೋಟಿಗೌಡನ ಮನೆ ಸಹಕರಿಸಿದರು.
ಬರಹ ಕೃಪೆ.✍🏻

ಸಿದ್ದಿಕ್ ಚಕ್ಕಮಕ್ಕಿ.
ನ್ಯೂಸ್ ಬ್ಯೂರೋ,ಅವಿನ್ ಟಿವಿ.
🎙️ವರದಿ.🎙️

ಮಗ್ಗಲಮಕ್ಕಿ ಗಣೇಶ್.
ಸ್ಥಾನಿಕ ಸಂಪಾದಕರು.
ನ್ಯೂಸ್ ಬ್ಯೂರೋ,ಅವಿನ್ ಟಿವಿ.

