“ಮೂಡಿಗೆರೆಯಲ್ಲಿ ಮೃತ್ಯುಕೂಪವಾದ ರಸ್ತೆಗಳನ್ನು ದುರಸ್ತಿ ಗೊಳಿಸಲು ಎಸ್‌ಡಿಪಿಐ ಆಗ್ರಹ.”
1 min read
ಮೂಡಿಗೆರೆ: ತಾಲೂಕಿನಾದ್ಯಂತ ‘ಜಲಜೀವನ್ ಮಿಷನ್’ (JJM) ಯೋಜನೆಯಡಿ ಕುಡಿಯುವ ನೀರಿನ ಪೈಪ್ ಅಳವಡಿಸಲು ರಸ್ತೆಗಳನ್ನು ಅಗೆದು ತಿಂಗಳುಗಳೇ ಕಳೆದರೂ, ಸಮರ್ಪಕವಾಗಿ ಮುಚ್ಚದ ಹಿನ್ನೆಲೆಯಲ್ಲಿ ಮೂಡಿಗೆರೆ ನಗರದಾದ್ಯಂತ ಸಾರ್ವಜನಿಕರು ಹಾಗೂ ವಾಹನ ಸವಾರರು ತೀವ್ರ ಸಂಕಷ್ಟ ಎದುರಿಸುತ್ತಿದ್ದಾರೆ.
ಸಂಬಂಧಪಟ್ಟ ಅಧಿಕಾರಿಗಳು ಮತ್ತು ಗುತ್ತಿಗೆದಾರರ ಬೇಜವಾಬ್ದಾರಿತನದಿಂದಾಗಿ ಪಟ್ಟಣದ ಪ್ರಮುಖ ರಸ್ತೆಗಳು ಮೃತ್ಯುಕೂಪಗಳಾಗಿ ಪರಿಣಮಿಸಿವೆ ಎಂದು ಎಸ್‌ಡಿಪಿಐ ಮೂಡಿಗೆರೆ ವಿಧಾನಸಭಾ ಉಪಾಧ್ಯಕ್ಷರಾದ ನಾಗೇಶ್ ಸಾಲುಮರ ಅಕ್ರೋಶ ವ್ಯಕ್ತಪಡಿಸಿದ್ದಾರೆ.

ನಗರದ ಮುಖ್ಯ ರಸ್ತೆಗಳು, ವಸತಿ ಬಡಾವಣೆಗಳು ಹಾಗೂ ಆಸ್ಪತ್ರೆ-ಶಾಲೆಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆಗಳ ಮಧ್ಯದಲ್ಲೇ ದೊಡ್ಡ ದೊಡ್ಡ ಕಂದಕಗಳನ್ನು ತೋಡಲಾಗಿದೆ. ಕಾಮಗಾರಿ ಮುಗಿದ ನಂತರ ರಸ್ತೆಗಳನ್ನು ಮೊದಲಿನ ಸ್ಥಿತಿಗೆ ತರಬೇಕಾದ ಗುತ್ತಿಗೆದಾರರು, ಕೇವಲ ಮಣ್ಣು ಮುಚ್ಚಿ ಕೈ ತೊಳೆದುಕೊಂಡಿದ್ದಾರೆ.

ಪ್ರಸ್ತುತ ಮಳೆಯಿಂದಾಗಿ ಈ ಮಣ್ಣು ಕುಸಿದು, ಕೆಸರ ಗದ್ದೆಯಂತಾಗಿದ್ದು, ದಿನನಿತ್ಯ ಹತ್ತಾರು ದ್ವಿಚಕ್ರ ವಾಹನ ಸವಾರರು ಬಿದ್ದು ಗಾಯಗೊಳ್ಳುತ್ತಿದ್ದಾರೆ. ಈಗಾಗಲೇ ಹಲವು ಸರಣಿ ಅಪಘಾತಗಳು ಸಂಭವಿಸಿದ್ದು, ಸಾರ್ವಜನಿಕರು ಆಸ್ಪತ್ರೆ ಪಾಲಾಗುತ್ತಿದ್ದಾರೆ. ಅದಲ್ಲದೆ ಮೂಡಿಗೆರೆ ನಗರದಲ್ಲಿ ಹಲವೆಡೆ ರಸ್ತೆಗಳು ಹಾಳಾಗಿದ್ದು ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ತಕ್ಷಣ ಸ್ಥಳ ಪರಿಶೀಲನೆ ನಡೆಸಿ, ಎಲ್ಲಾ ರಸ್ತೆ ಗುಂಡಿಗಳನ್ನು ಮುಚ್ಚಿ ಸರಿಪಡಿಸದಿದ್ದರೆ, ಮೂಡಿಗೆರೆ ನಗರದ ಸಮಸ್ತ ಸಾರ್ವಜನಿಕರು,ವಿವಿಧ ಸಂಘಟನೆಗಳ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಗುವುದು ಎಂದು ಹೇಳಿದರು ಈ ಸಂಧರ್ಭದಲ್ಲಿ ಎಸ್‌ಡಿಪಿಐ ಮೂಡಿಗೆರೆ ವಿಧಾನಸಭಾ ಅಧ್ಯಕ್ಷರಾದ ಶರೀಫ್, ಜಿಲ್ಲಾ ಸಮಿತಿ ಸದಸ್ಯರಾದ ಖಾಲಿದ್,ಸಿಖಂದರ್ ಹಾಗೂ ಆದರ್ಶ್ ಉಪಸ್ಥಿತರಿದ್ದರು.
✍🏻ಬರಹ ಕೃಪೆ.✍🏻

ನಾಗೇಶ್ ಸಾಲುಮರ.
ಎಸ್.ಡಿ.ಪಿ.ಐ. ಉಪಾಧ್ಯಕ್ಷರು.
ಮೂಡಿಗೆರೆ ವಿಧಾನ ಸಭಾ ಕ್ಷೇತ್ರ.
🎙️ವರದಿ.🎙️

ಮಗ್ಗಲಮಕ್ಕಿ ಗಣೇಶ್.
ಸ್ಥಾನಿಕ ಸಂಪಾದಕರು.
ಬ್ಯೂರೋ ನ್ಯೂಸ್,ಅವಿನ್ ಟಿವಿ.

