ಖರ್ಗೆ ಅವಹೇಳನ ಮಾಡಿರುವ ಸಿ.ಟಿ. ರವಿ ವಿರುದ್ಧ ಕಾಂಗ್ರೆಸ್ ಕಿಡಿ…
1 min read
ಖರ್ಗೆ ಅವಹೇಳನ ಮಾಡಿರುವ ಸಿ.ಟಿ. ರವಿ ವಿರುದ್ಧ ಕಾಂಗ್ರೆಸ್ ಕಿಡಿ.
. ಚಿಕ್ಕಮಗಳೂರು: ನಿಮ್ಮಪ್ಪನಿಂದಲೂ ಏನು ಮಾಡಲು ಆಗಿಲ್ಲ. ನೀನು ಏನು ಮಾಡುವೆ ಎಂದು ಪ್ರರ್ಶನಿಸುವ ಮೂಲಕ ವಿಧಾನ ಪರಿಷತ್ ಸದಸ್ಯ ಸಿ.ಟಿ ರವಿ ಅರ್ ಎಸ್ ಎಸ್ ಎನು ನೈಜ ಸಂಸ್ಕೃತಿ ಏನೆಂಬುದನ್ನು ತೋರಿಸಿದ್ದಾರೆ ಎಂದುಕೆಪಿಸಿಸಿ ವಕ್ತಾರ ರವೀಶ್ ಕ್ಯಾತನಬೀಡು ಕಿಡಿಕಾರಿದರು.
ನಗರದ ಪ್ರೆಸ್ಕ್ಲಬ್ನಲ್ಲಿಂದು ಕರೆದಿದ್ದ ಸುದ್ದಿ ಗೋಷ್ಠಿಯಲ್ಲಿ ಮಾತನಾಡಿದ ಅವರುಯಾವುದೇ ಸಂಸ್ಥೆ ನೊಂದಣಿ ಮಾಡಿಸದೆ ಕಾರ್ಯಚಟುವಟಿಕೆ – ಮಾಡುವುದು ಸಂವಿಧಾನಬಾಹಿರ. ಅರ್.ಎಸ್.ಎಸ್ ನೊಂದಣಿ ಮಾಡಿ ಎನ್ನುವ ಚಳವಳಿ ಈಗ ಅಗತ್ಯ. ಈ ಮಾತಿಗೆ ಅರ್ಥ ಬರುವಂತೆ ಪ್ರಿಯಾಂಕ ಖರ್ಗೆ ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದಾರೆ.
ಅದಕ್ಕೆ ಪ್ರತ್ಯುತ್ತರ ಕೊಡುವ ಭರದಲ್ಲಿ ನಾಡಿನ ಹಿರಿಯರಾದ ಮಲ್ಲಿಕಾರ್ಜುನ ಖರ್ಗೆಯವರಿಗೆ ಅಪಮಾನವಾಗುವಂತೆ ಹೇಳಿಕೆ ನೀಡಿರುವ ಸಿ.ಟಿ.ರವಿ ತಮ್ಮ ಮಾತಿನ ವರಸೆ ಬದಲಿಸಿಕೊಳ್ಳದಿದ್ದಲ್ಲಿ ಮುಂದೆ ಶೋಷಿತ ವರ್ಗದ ಅಪ್ಪಂದಿರು ತಕ್ಕ ಪಾಠ ಕಲಿಸಲಿದ್ದಾರೆ ಎಂದು ಹೇಳಿದರು.
ಈ ಹಿಂದೆ ಸಿದ್ರಾಮುಲ್ಲಾಖಾನ್ ಎಂದು ಹೇಳಿ ಸಿ.ಟಿ.ರವಿ ಯಾವ ಮೂಲೆ ಸೇರಿದರು ಎನ್ನುವುದು ರಾಜ್ಯದ ಜನರಿಗೆ ಗೊತ್ತಿದೆ. ಸಿ.ಟಿ.ರವಿ ಬಾಯಿ ಸರಿಯಿಲ್ಲ ಎನ್ನುವುದಕ್ಕೆ ಅವರ ಅಸಂಬಂಧ ಹೇಳಿಕೆಗಳ ನೂರಾರು ನಿದರ್ಶನಗಳಿವೆ.
ಅವರು ಸಾರ್ವಜನಿಕ ನಡವಳಿಕೆಗಳನ್ನು ಸರಿಪಡಿಸಿಕೊಳ್ಳದಿದ್ದರೆ ಜನರೇ ಅವರಿಗೆ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಎಚ್ಚರಿಸಿದರು.
ದೇಶದಲ್ಲಿಸಂವಿಧಾನದತ್ತ ಜನಪರ ಸರಕಾರ ಕಾಣುತ್ತಿಲ್ಲ. ವಿದ್ಯಾರ್ಥಿಗಳಿಗೆ ನೀಟ್. ಮೂಲಕ ಅನ್ಯಾಯ ಮಾಡಲಾಯಿತು. ಶಿಕ್ಷಣ ಸಚಿವಾಲಯದ ಕಚೇರಿಗೆ ಬೆಂಕಿ ಬಿತ್ತು. ರೆಫೆಲ್ ಫೈಲ್ಗೆ ಬೆಂಕಿ ಹಚ್ಚಿದರು. ಪಶ್ಚಿಮ ಬಂಗಾಳದಲ್ಲಿ 4 ಸಾವಿರ ಇವಿಎಂ ಯಂತ್ರಗಳು ಭಸ್ಮವಾದವು. ಈ ಬೆಂಕಿಯ ಹಿಂದೆ ಯಾವ ಚಾಣಕ್ಯ ನೀತಿ ಇದೆ ಎನ್ನುವುದನ್ನು ಬಿಜೆಪಿ ನೇತೃತ್ವದ ಕೇಂದ್ರ ಸರಕಾರ ಉತ್ತರ ಹೇಳಬೇಕು. ಬಿಜೆಪಿ ಯ ಯಾವೊಬ್ಬ ಮುಖಂಡನು ಈ ಘಟನೆಯನ್ನು ಖಂಡಿಸದೆ ಇರುವುದನ್ನು ನೋಡಿದರೆ ಇವರ ಚಾಣಕ್ಯ ನೀತಿ ಏನೆಂಬುದು ಅರ್ಥವಾಗುತ್ತದೆ ಎಂದರು. ಸಾರ್ವಜನಿಕರಿಗೆ
ಅಂಬೇಡ್ಕರ್ ಮತ್ತು ಸಾವರ್ಕರ್ ಅವರ ಈ 2 ಲೋಕ ದೃಷ್ಟಿಗಳು ಈಗ ಚರ್ಚೆಗೆ ಒಳಪಡುತ್ತಿವೆ. ಬಿಜೆಪಿ ಸಾವರ್ಕರ್
ವಿಚಾರಧಾರೆ ಜತೆ ಹೆಜ್ಜೆ ಹಾಕುತ್ತಿದ್ದರೆ, ಭಾರತದ ಹಿತದೃಷ್ಟಿಯಿಂದ ಅಂಬೇಡ್ಕರ್ ಲೋಕ ದೃಷ್ಟಿಯನ್ನು ಗಟ್ಟಿಮಾಡಬೇಕಾದ ಅಗತ್ಯ ಭಾರತೀಯರಿಗಿದೆ. ಬುದ್ಧ, ಬಸವ, ಗಾಂಧಿ ವಿಚಾರಧಾರೆಗಳನ್ನು ಉಳಿಸಿ ಬೆಳೆಸಬೇಕಾದ ಕರ್ತವ್ಯ ಸಾರ್ವಜನಿಕರಿಗಿದೆ. ಸಂವಿಧಾನದ ಆಶಯಕ್ಕೆ ಕೇಡು ಉಂಟುಮಾಡುವ ಯಾವುದೇ ಸಂಘಟನೆ, ಯಾವುದೇ ಪಕ್ಷವಿದ್ದರೆ ಅವರು ದೇಶದ್ರೋಹಿಗಳು ಎಂದರು.
ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಹಿರೇಮಗಳೂರು ರಾಮಚಂದ್ರ ಮಾತನಾಡಿ ಸಿ.ಟಿ.ರವಿ ತನ್ನ ಮಾತಿನ ನಡವಳಿಕೆ ಬದಲಿಸಿಕೊಳ್ಳದಿದ್ದರೆ ಅವರ ವಿರುದ್ಧ. ಹೊರಾಟ ಹಮ್ಮಿಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಕಾಂಗ್ರೆಸ್ ಮುಖಂಡರಾದ ತನೋಜ್ ನಾಯ್ಡು, ಸಂತೋಷ್ ಲಕ್ಯಾ, ಎನ್.ಡಿ. ಚಂದ್ರಪ್ಪ, ರೂಬಿನ್ಮೋಸೆಸ್ ಇದ್ದರು.

