ಜನಮನದ ಸಿಂಚನದೊಂದಿಗೆ ಗಡಿಹಳ್ಳಿಯಲ್ಲಿ ವೈಭವದ ಜಾನಪದ ಸಮ್ಮೇಳನ: ಜನಪದ ಗಾಯಕ ಗೀಗಿ ಪದದ ಪರಿಣಿತ ತ್ಯಾಗದಕಟ್ಟೆ ಚಂದ್ರಪ್ರಕಾಶ್ ಗೆ ಸಂದ ಸಮ್ಮೇಳನಾಧ್ಯಕ್ಷರ ಗೌರವ…
1 min read
ಅವಿನ್ ಟಿವಿ ಸುದ್ದಿಜಾಲ ✍️: ಜನಮನದ ಸಿಂಚನದೊಂದಿಗೆ ಗಡಿಹಳ್ಳಿಯಲ್ಲಿ ವೈಭವದ ಜಾನಪದ ಸಮ್ಮೇಳನ: ಜನಪದ ಗಾಯಕ ಗೀಗಿ ಪದದ ಪರಿಣಿತ ತ್ಯಾಗದಕಟ್ಟೆ ಚಂದ್ರಪ್ರಕಾಶ್ ಗೆ ಸಂದ ಸಮ್ಮೇಳನಾಧ್ಯಕ್ಷರ ಗೌರವ.
ಚಿಕ್ಕಮಗಳೂರು ಜೂ 15, ಅಜ್ಜಂಪುರ ತಾಲೂಕಿನ ಗಡಿಹಳ್ಳಿಯಲ್ಲಿ ಭಾನುವಾರ ಕರ್ನಾಟಕ ಜಾನಪದ ಪರಿಷತ್ತಿನಿಂದ ತಾಲೂಕು7ನೇ ಜಾನಪದ ಸಮ್ಮೇಳನ ವೈಭವದಿಂದ ನಡೆಯಿತು.
ಸಮ್ಮೇಳನಾಧ್ಯಕ್ಷ ಟಿ.ಸಿ.ಚಂದ್ರಪ್ರಕಾಶ್ ಮತ್ತು ನಿವೃತ್ತ ಯೋಧ ಮಲ್ಲಿಕಾರ್ಜುನ ಅವರನ್ನು ವಿವಿಧ ಜಾನಪದ ಕಲಾತಂಡ ಗಳು ಮತ್ತು ಗ್ರಾಮೀಣ ವಾದ್ಯದ ನಡುವೆ ಜೋಡೆತ್ತಿನ ಗಾಡಿಯ ಮೂಲಕ ಸಮ್ಮೇಳನದ ವೇದಿಕೆಗೆ ವೈಭವ ಮತ್ತು ಸಂಭ್ರಮದೊಂದಿಗೆ ಕರೆ ತರಲಾಯಿತು,
ಸಮ್ಮೇಳನಾಧ್ಯಕ್ಷರನ್ನು ಮಹಿಳೆಯರು ಪೂರ್ಣಕುಂಭದೊಂದಿಗೆ ಸ್ವಾಗತಿಸಿದರು.
ಸಮ್ಮೇಳನಾಧ್ಯಕ್ಷರ ಮೆರವಣಿಗೆಯಲ್ಲಿ ಸಾಗಿದ ವೀರಗಾಸೆ, ಕೋಲಾಟ, ಸುಗ್ಗಿ ಕುಣಿತ, ಡೊಳ್ಳು ಕುಣಿತ ಗ್ರಾಮೀಣರ ಗಮನ ಸೆಳೆದವು, ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದ ಸಾಹಿತಿ ಶ್ರೀನಿವಾಸ್ ಜಾನಪದವೆಂದರೆ ಜ್ಞಾನಪದ,ಜಾನಪದದಲ್ಲಿ ಜ್ಞಾನದ ಭಂಡಾರವೇ ಅಡಗಿದೆ, ಅಳಿವಿನಂಚಿನಲ್ಲಿರುವ ಅದನ್ನು ಉಳಿಸಿ ಬೆಳೆಸುವ ಮಹತ್ತರವಾದ ಹೊಣೆಗಾರಿಕೆ ಯುವಜನತೆಯ ಮೇಲಿದೆ ಎಂದರು.
ಜಾನಪದ ಕಲೆ, ಸಾಹಿತ್ಯ ಮತ್ತು ಸಂಸ್ಕೃತಿ ಉಳಿಯಬೇಕಾದರೆ ಇಂತಹ ಸಮ್ಮೇಳನಗಳು, ಜಾನಪದ ಕಾರ್ಯಕ್ರಮಗಳು ಹೆಚ್ಚು ನಡೆಯಬೇಕು ಎಂದು ಸಲಹೆ ಮಾಡಿದರು.
ಜಾನಪದ ವಸ್ತು ಪ್ರದರ್ಶನವನ್ನು ಉದ್ಘಾಟಿಸಿ ಮಾತನಾಡಿದ ಜಾನಪದ ಅಕಾಡೆಮಿ ಮಾಜಿ ಸದಸ್ಯೆ ಮುಗುಳಿ ಲಕ್ಷ್ಮೀದೇವಮ್ಮ ಕರ್ನಾಟಕ ಜಾನಪದ ಪರಿಷತ್ತಿನ ಕಾರ್ಯ ಚಟುವಟಿಕೆಗಳನ್ನು ಜಾನಪದದ ಉಳಿವಿಗಾಗಿ ಅದು ನಡೆಸುತ್ತಿರುವ ಕಾರ್ಯಕ್ರಮಗಳನ್ನು ಶ್ಲಾಗಿಸಿದರು.
ಸಾಹಿತಿ ಡಿ.ಪಿ.ರಾಜಪ್ಪ ಮಾತನಾಡಿ ಸಮ್ಮೇಳನದ ವೇದಿಕೆಗಳಲ್ಲಿ ಹಿರಿಯ ಕಲಾವಿದರನ್ನು ಗೌರವಿಸುವುದರಿಂದ ಇನ್ನೂ ಹೆಚ್ಚು ಹೆಚ್ಚು ಜನಪದ ಕಲೆ, ಸಾಹಿತ್ಯ, ಸಂಗೀತ, ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಳ್ಳಲು ಪ್ರೇರಣೆಯನ್ನು ನೀಡಿದಂತಾಗುತ್ತದೆ ಎಂದರು.
ತರೀಕೆರೆ ಮಾಜಿ ಶಾಸಕ ಎಸ್.ಎಂ. ನಾಗರಾಜ್ ಮಾತನಾಡಿ ಜಾನಪದ ಕಲೆ, ಸಾಹಿತ್ಯ ಮತ್ತು ಸಂಸ್ಕೃತಿ ಉಳಿದು ಬೆಳೆಯಬೇಕಾದರೆ ಶಾಲಾ ಕಾಲೇಜುಗಳಲ್ಲಿ ಜಾನಪದದ ಕಾರ್ಯಕ್ರಮಗಳನ್ನು ನಿರಂತರವಾಗಿ ನಡೆಸಬೇಕು, ಪಠ್ಯಪುಸ್ತಕಗಳಲ್ಲಿ ಜಾನಪದವನ್ನು ಅಳವಡಿಸಬೇಕು ಎಂದು ಸಲಹೆ ಮಾಡಿದರು.
ಸಮ್ಮೇಳನಾಧ್ಯಕ್ಷ ಟಿ.ಸಿ.ಚಂದ್ರಪ್ರಕಾಶ್ ಅವರು ಮಾತನಾಡಿ ಇಂದಿನ ಮಕ್ಕಳು ಮತ್ತು ಯುವ ಜನತೆ ಜಾನಪದ ಕಲೆ, ಸಾಹಿತ್ಯ ಮತ್ತು ಸಂಸ್ಕೃತಿಯನ್ನು ಜತನದಿಂದ ಕಾಪಾಡಬೇಕು ಎಂದರು.
ಆಶಯ ನುಡಿಗಳನ್ನಾಡಿದ ಕರ್ನಾಟಕ ಜಾನಪದ ಪರಿಷತ್ತಿನ ಜಿಲ್ಲಾಧ್ಯಕ್ಷ ಜಿ.ಬಿ. ಸುರೇಶ್ ಅಳಿವಿನಂಚಿನಲ್ಲಿರುವ ಜಾನಪದ ಕಲೆ, ಸಾಹಿತ್ಯ ಮತ್ತು ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಪರಿಷತ್ತು ನಿರಂತರವಾಗಿ ಕಾರ್ಯಕ್ರಮಗಳನ್ನು ನಡೆಸುತ್ತಿದೆ ಎಂದು ತಿಳಿಸಿದರು.
ಕ ಸಾ ಪ ಪ್ರಧಾನ ಸಂಚಾಲಕ ಇಮ್ರಾನ್ ಅಹಮದ್ ಬೇಗ್, ಹಿರಿಯ ವೀರಗಾಸೆ ಕಲಾವಿದ ಮಾಳೇನಹಳ್ಳಿ ಬಸಪ್ಪ ಸೇರಿದಂತೆ ಅನೇಕರು ಮಾತನಾಡಿದರು,
ಗಾಯತ್ರಮ್ಮ, ಗಡಿ ಹಳ್ಳಿ ಮಂಜಣ್ಣ, ಮರಳು ಸಿದ್ದಪ್ಪ, ದಂಡೂರು ರಾಜಣ್ಣ, ಜಾಗದಕಟ್ಟೆ ಜಯಣ್ಣ, ತ್ಯಾಗದಕಟ್ಟೆ ತಿಪ್ಪೇಶ್,ಚಿಕ್ಕಲೂರು ಜಯಣ್ಣ, ಶಂಕ್ರಪ್ಪ, ಜಗದೀಶ್ವರಾಚಾರ್, ಡಿ,ಪಿ. ರಾಜಪ್ಪ, ಶಂಕ್ರಪ್ಪ, ಕಾರೆಹಳ್ಳಿ ಬಸಪ್ಪ ಉಪಸ್ಥಿತರಿದ್ದರು.
••••••••••••••
ಡಿ ಎಂ ಮಂಜುನಾಥಸ್ವಾಮಿ
ಅವಿನ್ ಟಿವಿ ಸುದ್ದಿಜಾಲ …. ✍️
ಚಿಕ್ಕಮಗಳೂರು

