ಅಕ್ರಮವಾಗಿ ವನ್ಯಜೀವಿಯಾದ ಜಿಂಕೆ ಜಾತಿಗೆ ಸೇರಿರುವ ಪ್ರಾಣಿಯನ್ನು ಬೇಟೆಯಾಡಿದ ಮೂರು ಜನರ ಬಂಧನ…..
1 min read
ಅಕ್ರಮವಾಗಿ ವನ್ಯಜೀವಿಯಾದ ಜಿಂಕೆ ಜಾತಿಗೆ ಸೇರಿರುವ ಪ್ರಾಣಿಯನ್ನು ಬೇಟೆಯಾಡಿದ ಮೂರು ಜನರ ಬಂಧನ.
ದಿನಾಂಕ : 19-05-2026 ರಂದು ಚಿಕ್ಕಮಗಳೂರು ಸಿಐಡಿ ಪೊಲೀಸ್ ಅರಣ್ಯ ಸಂಚಾರಿ ದಳದ ಪೊಲೀಸರಿಗೆ ದೊರೆತ ಮಾಹಿತಿಯಂತೆ ಅತ್ತಿಗುಂಡಿ ಗ್ರಾಮದಿಂದ ಮಲಗಾರು ಗ್ರಾಮಕ್ಕೆ ಹೋಗುವ ಕಚ್ಚಾ ರಸ್ತೆಯಲ್ಲಿ ಕಾಡು ಪ್ರಾಣಿಗಳ ಬೇಟೆಯಾಡುತ್ತಿರುವ ಬಗ್ಗೆ ದೊರೆತ ಮಾಹಿತಿಯಂತೆ ಸಮಯ ಬೆಳಗ್ಗೆ 01-45 ಗಂಟೆಗೆ ಪಂಚರ ಸಮಕ್ಷಮ ಸಿಬ್ಬಂದಿಗಳೊಂದಿಗೆ ದಾಳಿ ಮಾಡಿದ್ದು ಮೂರು ಜನ ವ್ಯಕ್ತಿಗಳು ಕೈಯಲ್ಲಿ ಬ್ಯಾಗ್, ದೊಣ್ಣೆ ಹಾಗೂ ಟಾರ್ಚ್ ಹೊಡಿದುಕೊಂಡು ಓಡಿಹೋಗುತ್ತಿದ್ದು ದಾಳಿ ಮಾಡಿ ಮೂರು ಜನ ಆರೋಪಿಗಳನ್ನು ಮತ್ತು ಸೋತ್ತನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿ ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ. ಸದರಿ ಆರೋಪಿಗಳಿಂದ 1) ಒಂದು ಜಿಂಕೆ ಜಾತಿಗೆ ಸೇರಿದ ಪ್ರಾಣಿಯ ಕಳೆಬರಹ 2) ಬಿಳಿ ಬಣ್ಣದ 01 ಬಟ್ಟೆ ಬ್ಯಾಗ್, 3) 02 ಹೆಡ್ ಲೈಟ್ಗಳು, 4) 02 ಕಾಡು ಜಾತಿಯ ಮರದ ದೊಣ್ಣೆಗಳನ್ನು ಮುಂದಿನ ಕ್ರಮದ ಬಗ್ಗೆ ವಶಪಡಿಸಿಕೊಳ್ಳಲಾಗಿದೆ. ಆರೋಪಿಗಳಾದ 1) ವೆಂಕಟರಮಣ ಬಿನ್ ಲೇ/ ಪೊನ್ನು ಸ್ವಾಮಿ, 35 ವರ್ಷ, ತಮಿಳುಗೌಡ ಜನಾಂಗ, ಕೂಲಿ ಕೆಲಸ, ವಾಸ ಮೇಟೂರು ಗ್ರಾಮ, ಹೊಸಗಂಗೂರು ಸಮೀಪ, ಕಲ್ಲತ್ತಿಪುರ ಅಂಚೆ, ಲಿಂಗದಹಳ್ಳಿ ಹೋಬಳಿ, ತರೀಕೆರೆ ತಾಲ್ಲೂಕು, ಚಿಕ್ಕಮಗಳೂರು ಜಿಲ್ಲೆ. 2) ಕನ್ನಿಯಪ್ಪನ್ ಬಿನ್ ಲೇ/ ಗೋವಿಂದ ರಾಜು, 25 ವರ್ಷ, ಎಸ್.ಟಿ ಜನಾಂಗ, ಕೂಲಿ ಕೆಲಸ, ವಾಸ ಕುಂಬಳೂರು ಗ್ರಾಮ, ನಾಡನೂರು ಅಂಚೆ, ಜಮಣಮತ್ತೂರು ತಾಲ್ಲೂಕು, ತಿರುವಣ್ಣಾಮಲೈ ಜಿಲ್ಲೆ, ತಮಿಳು ನಾಡು ರಾಜ್ಯ, 3) ಸುರೇಶ ಬಿನ್ ಚಿನ್ನರಾಜು, 20 ವರ್ಷ, ಎಸ್.ಟಿ ಜನಾಂಗ, ಕೂಲಿ ಕೆಲಸ, ವಾಸ ವಲ್ಲಿಯೂರು, ನಮಿಯಾ ಮಪಟ್ಟು ಅಂಚೆ, ಜಮಣಮತ್ತೂರು ತಾಲ್ಲೂಕು, ತಿರುವಣ್ಣಾಮಲೈ ಜಿಲ್ಲೆ, ತಮಿಳು ನಾಡು ರಾಜ್ಯ ರವರುಗಳನ್ನು ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ.
ಈ ಕಾರ್ಯಾಚರಣೆಯಲ್ಲಿ ಮಾನ್ಯ ಪೊಲೀಸ್ ಉಪ ಮಹಾನಿರೀಕ್ಷಕರಾದ ಶ್ರೀಮತಿ. ಸಂಗೀತಾ, ಜಿ, ಸಿ.ಐ.ಡಿ. ಅರಣ್ಯ ಘಟಕ, ಬೆಂಗಳೂರು, ಮತ್ತು ಮಡಿಕೇರಿ ಸಿಐಡಿ ಅರಣ್ಯ ಘಟಕದ ಪೊಲೀಸ್ ಅಧೀಕ್ಷಕರಾದ ಶ್ರೀ ಪವನ್ ನೆಟ್ಟೂರು ಐಪಿಎಸ್ ರವರ ಮಾರ್ಗದರ್ಶನದಲ್ಲಿ ಚಿಕ್ಕಮಗಳೂರು ಸಿಐಡಿ ಪೊಲೀಸ್ ಅರಣ್ಯ ಸಂಚಾರಿ ದಳದ ಪೊಲೀಸ್ ಉಪನಿರೀಕ್ಷಕರಾದ ಶ್ರೀ ಬಾಬುದ್ದೀನ್ ಹಾಗೂ ಸಿಬ್ಬಂದಿಗಳಾದ ದೇವರಾಜ, ಕೃಷ್ಣರಾಜ್ ಅರಸ್, ದಿಲೀಪ್, ನಟರಾಜ್, ಹಾಲೇಶ್, ಹೇಮಾವತಿ ಚಾಲಕರಾದ ತಿಮ್ಮಶೆಟ್ಟಿ ಪಾಲ್ಗೊಂಡಿರುತ್ತಾರೆ.
ಅರಣ್ಯ ಕಾಯ್ದೆ ಮತ್ತು ವನ್ಯಜೀವಿಗಳ ಸಂರಕ್ಷಣಾ ಕಾಯ್ದೆ ಸಂಬಂಧಪಟ್ಟ ಅಕ್ರಮ ಚಟುವಟಿಕೆಗಳು ಕಂಡು ಬಂದಲ್ಲಿ ಈ ಕೆಳಗಿನ ದೂರವಾಣಿ ಸಂಖ್ಯೆಗಳಿಗೆ ಮಾಹಿತಿಯನ್ನು ನೀಡಬೇಕಾಗಿ ಕೋರಿಕೆ.
1. ಮಡಿಕೇರಿ ಸಿಐಡಿ ಅರಣ್ಯ ಘಟಕ ಪೊಲೀಸ್ ಅಧೀಕ್ಷಕರ ಕಛೇರಿ ಫೋನ್ ನಂ: 9480800220
2. ಸಿಐಡಿ ಪೊಲೀಸ್ ಅರಣ್ಯ ಸಂಚಾರಿ ದಳ ಚಿಕ್ಕಮಗಳೂರು ಕಛೇರಿ ಫೋನ್ ನಂ: 8277949809
ಪೊಲೀಸ್ ಸಬ್ಇನ್ಸ್ ಪೆಕ್ಟರ್
ಸಿ.ಐ.ಡಿ., ಅರಣ್ಯ ಸಂಚಾರಿ ದಳ ಚಿಕ್ಕಮಗಳೂರು

