24 ಗಂಟೆ ಕಳೆದರೂ ಚಿಕಿತ್ಸೆ ಸಿಗದೇ ರೋಗಿಯ ನರಳಾಟ….
1 min read
24 ಗಂಟೆ ಕಳೆದರೂ ಚಿಕಿತ್ಸೆ ಸಿಗದೇ ರೋಗಿಯ ನರಳಾಟ
ಆಲ್ದೂರು: ಸಮೀಪದ ಗಾಳಿಗಂಡಿ ವಾರ್ಡಿನ ನಿವಾಸಿ ರವಿ (
27) ಎಂಬ ಯುವಕ ಅರೇನೂರು ಗ್ರಾಮದ ಬಳಿ ಬೈಕ್ ನಲ್ಲಿ ತೆರಳುವಾಗ ಅಪಘಾತವಾಗಿದ್ದು,
ಅರೇನೂರು ಗ್ರಾಮದ ಸುಪ್ರೀತ್ ಎಂಬುವವರು ಮಂಗಳವಾರ ಮುಂಜಾನೆ ಎಂಟು ಗಂಟೆಗೆ ಆಲ್ದೂರು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಚಿಕಿತ್ಸೆಗೆ ಕರೆದುಕೊಂಡು ಬಂದು ಸೇರಿಸಿದ್ದು, ಗಂಭೀರ ಗಾಯಗಳು ಆದಕಾರಣ ಪ್ರಾಥಮಿಕ ಚಿಕಿತ್ಸೆ ನೀಡಿ ಚಿಕ್ಕಮಗಳೂರು ಜಿಲ್ಲಾಸ್ಪತ್ರೆಗೆ ರೋಗಿಯನ್ನು ರವಾನಿಸಲಾಗಿದೆ ಬಳಿಕ ಜಿಲ್ಲಾ ಸರ್ಜನ್ ಸಲಹೆ ಮೇರೆಗೆ ಮಂಗಳೂರು ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಲು ಕರೆದುಕೊಂಡು ಹೋಗಿದ್ದು ಹಾಸಿಗೆಯ ಕೊರತೆ ಇದೆ ಎಂದು ತಿಳಿಸಿ ರೋಗಿಯನ್ನು ದಾಖಲಿಸಿ ಕೊಳ್ಳದ ಕಾರಣ ಆಂಬುಲೆನ್ಸ್ ಚಾಲಕ ಪೃಥ್ವಿ ಮಂಗಳೂರಿನ ಫಾದರ್ ಮುಲ್ಲರ್ಸ್ ಆಸ್ಪತ್ರೆಗೆ
ಕರೆದೊಯ್ದಿದ್ದು ಐಸಿಯು ವಾರ್ಡ್ ಖಾಲಿ ಇಲ್ಲ ಎಂದು ಅಲ್ಲೂ ಕೂಡ ಅವರನ್ನು ದಾಖಲಿಸಿಕೊಳ್ಳದ ಕಾರಣ ಚಾಲಕ ಪೃಥ್ವಿ ಹೆಗಡೆ ಆಸ್ಪತ್ರೆ ಎಜೆ ಆಸ್ಪತ್ರೆ ಇಲ್ಲೆಲ್ಲ ರೋಗಿಯನ್ನು ದಾಖಲಿಸಲು ಪ್ರಯತ್ನಿಸಿದ್ದು ಬಳಿಕ ಮುಕ್ಕ ದಲ್ಲಿರುವ ಶ್ರೀನಿವಾಸ್ ಆಸ್ಪತ್ರೆಗೆ ದಾಖಲಿಸಲು ಪ್ರಯತ್ನ ಮುಂದುವರಿಸಿದ್ದು ಅಲ್ಲಿ 80000 ಹಣ ಠೇವಣಿ ಇಟ್ಟರೆ ಮಾತ್ರ ಚಿಕಿತ್ಸೆ ಪ್ರಾರಂಭಿಸುವುದಾಗಿ ತಿಳಿಸಿದ್ದಾರೆ ಹಾಗಾಗಿ ರೋಗಿಯ ಕುಟುಂಬ ಆರ್ಥಿಕ ವಾಗಿ ಸಬಲರಲ್ಲದ ಕಾರಣದಿಂದಾಗಿ ಪುನಹ ಮಂಗಳೂರಿನಿಂದ ರೋಗಿಯನ್ನು ಆಲ್ದೂರಿಗೆ ಕರೆ ತಂದಿದ್ದು, ಬಳಿಕ ಸ್ಥಳೀಯರಾದ ಪತ್ರಕರ್ತ ಕಿರಣ್, ಚಿಕ್ಕಮಗಳೂರು ಜಿಲ್ಲಾ ಮೆಡಿಕಲ್ ಕಾಲೇಜ್ ಡೀನ್ ಮತ್ತು ಡಿ ಹೆಚ್ ಓ ರವರಿಗೆ ಕರೆ ಮಾಡಿ ರೋಗಿಯನ್ನು ಹಾಸನ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಲು ಯತ್ನಿಸಿದ್ದು ಬಳಿಕ ಬೆಂಗಳೂರು ನಿಮಾನ್ಸ್ಗೆ ಕಳುಹಿಸಲು ತೀರ್ಮಾನಿಸಿ ಪತ್ರಕರ್ತ ಜೋಸೆಫ್ ಎಂ ಮತ್ತು ಸ್ಥಳೀಯರಾದ ಎ ಯು ಇಬ್ರಾಹಿಂ ರೋಗಿಯ ಚಿಕಿತ್ಸೆಗಾಗಿ ಸಾರ್ವಜನಿಕರಿಂದ ದೇಣಿಗೆ ಸಂಗ್ರಹಿಸಿ ಬೆಂಗಳೂರಿಗೆ ರೋಗಿಯನ್ನು ಹೆಚ್ಚಿನ ಚಿಕಿತ್ಸೆಗಾಗಿ ಕಳುಹಿಸಿಕೊಟ್ಟಿದ್ದು, ಬೆಂಗಳೂರು ತಲುಪಿದ ಬಳಿಕ ಕರೆ ಮಾಡಿದ ಆಂಬುಲೆನ್ಸ್ ಚಾಲಕ ಪೃಥ್ವಿ ಆಸ್ಪತ್ರೆ ಮುಂಭಾಗದಲ್ಲಿ ಒಂದು ಗಂಟೆ ಇಂದ ರೋಗಿಯನ್ನು ಆಂಬುಲೆನ್ಸ್ ನಲ್ಲಿ ಇಟ್ಟುಕೊಂಡು ಕಾದು ಕುಳಿತರು ಇನ್ನು ಕೂಡ ಚಿಕಿತ್ಸೆ ನೀಡುವುದಿರಲಿ ಒಳಗೆ ಕೂಡ ದಾಖಲಿಸಿಲ್ಲ ಎಂದು ಸ್ಥಳೀಯರಿಗೆ ಕರೆ ಮಾಡಿ ತಿಳಿಸಿದ್ದು, ಎ ಯು ಇಬ್ರಾಹಿಂ, ಬಡ ಕಾರ್ಮಿಕರು ಚಿಕಿತ್ಸೆಯನ್ನು ಪಡೆಯಲು ಕೂಡ ಎಷ್ಟೆಲ್ಲಾ ಹರಸಾಹಸ ಪಡಬೇಕು ಎಷ್ಟೇ ಹೋರಾಟ ಮಾಡಿದರು ಸಕಾಲಕ್ಕೆ ಚಿಕಿತ್ಸೆ ದೊರೆಯದಿರುವುದು ಆಡಳಿತ ವ್ಯವಸ್ಥೆಯ ವೈಫಲ್ಯ ಅಧಿಕಾರಿಗಳ ವಿಫಲತೆಗೆ ಸ್ಪಷ್ಟ ನಿದರ್ಶನವಾಗಿದೆ ಈ ಘಟನೆ ಇಡೀ ಮಾನವ ಸಮಾಜ ತಲೆತಗ್ಗಿಸುವಂತಹ ಅಮಾನವೀಯ ಸಂದರ್ಭದಲ್ಲಿ ನಿದರ್ಶನವಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
ದೂರವಾಣಿ ಸಂಭಾಷಣೆ ಮೂಲಕ ಮಾತನಾಡಿದ ಆಂಬುಲೆನ್ಸ್ ಚಾಲಕ ಪೃಥ್ವಿ ಬೆಂಗಳೂರು ನಿಮಾನ್ಸ್ ಆಸ್ಪತ್ರೆಗೆ ಮಧ್ಯಾಹ್ನ 1:30ಕ್ಕೆ ತಲುಪಿದ್ದು, 4:30ಕ್ಕೆ ರೋಗಿಯನ್ನು ವಿಚಾರಿಸಿದ್ದು ಸಿಟಿ ಸ್ಕ್ಯಾನಿಗೆ ಕಳುಹಿಸಿದ್ದು ಬಳಿಕ ಚಿಕಿತ್ಸೆ ವಿಚಾರವಾಗಿ ಮುಂದಿನ ನಿರ್ಣಯ ಮಾಡಲಾಗುವುದು ಎಂದು ತಿಳಿಸಿದರು.

