AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

ಬದಿಯಲ್ಲಿ ಮಾನಸಿಕ ಮಹಿಳೆಯನ್ನು ರಕ್ಷಿಸಿ ಬೆಂಗಳೂರಿನ ಆಟೋ ಸಂಸ್ಥೆ ಆಶ್ರಮಕ್ಕೆ ಬಿಡುವ ಮುಖಾಂತರ ಮಾನವೀಯತ #avintvcom

1 min read

ರಸ್ತೆ ಬದಿಯಲ್ಲಿ ಮಲಗುತ್ತಿದ್ದ ಮಾನಸಿಕ ಅಸ್ವಸ್ಥ ಮಹಿಳೆಯನ್ನು ರಕ್ಷಿಸಿ  ಬೆಂಗಳೂರಿನ ಆಟೋ ರಾಜ ಸಂಸ್ಥೆ ಆಶ್ರಮಕ್ಕೆ ಬಿಡುವ ಮುಖಾಂತರ ಮಾನವೀಯತೆ ಮೆರೆದ ಕರವೇ ಕಾರ್ಯಕರ್ತರು   ________

ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲ್ಲೂಕಿನ ಶನಿವಾರಸಂತೆ ಹೋಬಳಿಯ ನಿಡ್ತ ಗ್ರಾಮ ಪಂಚಾಯತ್ ವ್ಯಾಪ್ತಿಯ ಗೋಪಾಲಪುರ ಗ್ರಾಮದಲ್ಲಿ ಸುಮಾರು 6 ತಿಂಗಳಿನಿಂದ ರಸ್ತೆಯಲ್ಲಿ  ತಿರುಗಾಡುತ್ತಿದ್ದ ಮತ್ತು ರಸ್ತೆ ಮಲಗುತ್ತಿದ್ದ ಮಾನಸಿಕ ಅಸ್ವಸ್ಥರಾಗಿದ್ದು ಇವರಿಂದ ತುಂಬಾ ವಾಹನಗಳಿಗೆ ತೊಂದರೆ ಆಗುತ್ತಿದನ್ನು ಕಂಡ ಶನಿವಾರಸಂತೆಯ ಪೋಲಿಸ್ ಸಿಬ್ಬಂದಿಯೊಬ್ಬರು ಕರವೇ ಕಾರ್ಯಕರ್ತರಿಗೆ ಮಾಹಿತಿ ಕೊಟ್ಟಿದ್ದರು . ಆಗ ಕರವೇ ಕಾರ್ಯಕರ್ತರು ಮಾಹಿತಿ ಕೊಟ್ಟ ಪೋಲಿಸ್ ಸಿಬ್ಬಂದಿಯವರಿಗೆ ನಿಮ್ಮ ಠಾಣೆಯಿಂದ  1ಲೆಟರನ್ನು ಕೊಡಿಸಿ ಎಂದು ಕೇಳಿಕೊಂಡ ಮೇರೆಗೆ ಶನಿವಾರಸಂತೆ ಠಾಣಾಧಿಕಾರಿಯಿಂದ ಲೆಟರ್ ಕೊಟ್ಟ ಮೇರೆಗೆ ಅದನ್ನು ಕರವೇ ಕಾರ್ಯಕರ್ತರು ಕರವೇ ಕಡೆಯಿಂದ 1 ಲೆಟರನ್ನು ಮಾಡಿ ಕರವೇ ಕಾರ್ಯಕರ್ತರು ಮಡಿಕೇರಿಗೆ ಹೋಗಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ ಇರುವ ಮಾನಸಿಕ ತಜ್ಞರಾದ ಡೇವಿಡ್  ಸಂಪರ್ಕಿಸಿದಾಗ ಅವರು ತಿಳಿಸಿದರು ಕೊರೋನಾ ಟೆಸ್ಟ್ ಆಗಬೇಕು ತಿಳಿಸಿದ ಮೇರೆಗೆ .ಮತ್ತೆ ಕರವೇ ಕಾರ್ಯಕರ್ತರು ಸೋಮವಾರಪೇಟೆ ಸುತ್ತಮುತ್ತ  ಕೊರೊನಾ ಟ್ರಸ್ಟ್ ಮಾಡುತ್ತಿರುವ ಸಂಚಾರಿ ವಾಹನದಲ್ಲಿ ಕೊರೊನಾ ಟೆಸ್ಟ್  ಮಾಡುತ್ತಿರುವ ಮಹೇಶ್ ಎಂಬುವರನ್ನು ಸಂಪರ್ಕಿಸಿದಾಗ ಅವರು ತುಂಬು ಮನಸ್ಸಿನಿಂದ ಈ ಮಾನಸಿಕ ಅಸ್ವಸ್ಥ ಳನ್ನು  ಕೊರೋನಾ  ಟೆಸ್ಟ್ ಮಾಡಲು ಒಪ್ಪಿಕೊಂಡು ಸ್ಥಳಕ್ಕೆ ಧಾವಿಸಿ ಬಂದು ಕೊರೋನಾ  ಟೆಸ್ಟ್ ಮಾಡಿಸಿ ನೆಗೆಟಿವ್ ರಿಸಲ್ಟ್ ಬಂದಿರುತ್ತದೆ. ರಿಸಲ್ಟ್ ಬಂದ ಮೇಲೆ ಕರವೇ ಕಾರ್ಯಕರ್ತರು  ಮತ್ತೆ ಮಾನಸಿಕ ತಜ್ಞರು ಅನ್ನು ಸಂಪರ್ಕಿಸಿದಾಗ ಶನಿವಾರಸಂತೆ ಠಾಣೆಯಿಂದ ಮತ್ತೊಂದು ಲೆಟರನ್ನು ಬೆಂಗಳೂರಿನ ಆಟೋ ರಾಜ ಸಂಸ್ಥೆಗೆ 1ಲೆಟರ್ ಕೊಡಿಸಿ ಎಂದು ಕೇಳಿದರು .ಅದೇ ಮೇರೆಗೆ ಕರವೇ ಕಾರ್ಯಕರ್ತರು ಶನಿವಾರಸಂತೆ  ಠಾಣೆಯಿಂದ ಆಟೋರಾಜ ಬೆಂಗಳೂರು ಸಂಸ್ಥೆಗೆ ಲೆಟರನ್ನು ಕೊಟ್ಟಿರುತ್ತಾರೆ .ಆ ಲೆಟರ್ ಕರವೇ ಕಾರ್ಯಕರ್ತರು ಮಡಿಕೇರಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಮಾನಸಿಕ ತಜ್ಞರಾದ ಡೇವಿಡ್ ಅವರಿಗೆ  ತಲುಪಿಸಿದ ಮೇರೆಗೆ . ಕೊಡಗು ಜಿಲ್ಲೆಯ  ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸೂಚನೆ ಮೇರೆಗೆ ಮಾನಸಿಕ ತಜ್ಞರಾದ ಡಾಕ್ಟರ್ ಡೇವಿಡ್ ಆದೇಶದ ಮೇರೆಗೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸಿಬ್ಬಂದಿ ಶಿವಕುಮಾರ್ ಮತ್ತು ಅವರ ತಂಡ  ಇಂದು ಬೆಳಿಗ್ಗೆ 6ಗಂಟೆಗೆ  ಮಡಿಕೇರಿಯಿಂದ ಬಂದು ಈ ಮಾನಸಿಕ ಅಸ್ವಸ್ಥ ಮಹಿಳೆಯನ್ನು ಆಂಬ್ಯುಲೆನ್ಸ್ ನಲ್ಲಿ ಕರೆದುಕೊಂಡು ಹೋಗಿ ಬೆಂಗಳೂರಿನ ಆಟೋ ರಾಜ ಫೌಂಡೇಶನ್ ಸಂಸ್ಥೆಗೆ ಸೇರಿಸಲಾಯಿತು .ಹಾಗಾಗಿ ಕರವೇ ಕಾರ್ಯಕರ್ತರ ಜತೆ ಸಹಕರಿಸಿದ  ಶನಿವಾರಸಂತೆ ಠಾಣಾಧಿಕಾರವರಿಗೆ   ಮತ್ತು   ಶನಿವಾರಸಂತೆ ಪೊಲೀಸ್ ಸಿಬ್ಬಂದಿಗಳಿಗೆ ಮತ್ತು ಕರವೇ ಕಾರ್ಯಕರ್ತರಿಗೆ ಮಾಹಿತಿ ನೀಡಿದ ಪೊಲೀಸ್ ಸಿಬ್ಬಂದಿ ಯವರಿಗೆ  ಮತ್ತು ಕರವೇ ಕಾರ್ಯಕರ್ತರಿಗೆ ಸಹಕರಿಸಿದ ಕೊಡಗು ಜಿಲ್ಲೆಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳಿಗೆ  ಮತ್ತು  ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ ಮಾನಸಿಕ ತಜ್ಞರಾದ ಡಾಕ್ಟರ್  ಡೇವಿಡ್ ಅವರಿಗೆ ಮತ್ತು ಶಿವಕುಮಾರ್ ಮತ್ತು ತಂಡದವರಿಗೆ ಮತ್ತು ಈ ಮಾನಸಿಕ ಅಶ್ವಸ ಮಾಹಿಳೆಗೆ  ಕೊರೋನಾ ಟೆಸ್ಟ್ ಮಾಡಿದ ಮಹೇಶ್ ಮತ್ತು ಸಿಬ್ಬಂದಿಯವರಿಗೆ ಮತ್ತು ಕರವೇ ಕಾರ್ಯಕರ್ತರಿಗೆ ಸಹಕರಿಸಿದ ಎಲ್ಲರಿಗೂ  ಶಿವರಾಮೇಗೌಡರ  ಕರವೇ ಕಾರ್ಯಕರ್ತರಿಂದ ತುಂಬು ಹೃದಯದ ಧನ್ಯವಾದಗಳನ್ನು ಅರ್ಪಿಸುತ್ತಿದ್ದೇವೆ …ಈ ಸಂದರ್ಭದಲ್ಲಿ ಸೋಮವಾರಪೇಟೆ ತಾಲ್ಲೂಕು ಕರವೇ ತಾಲ್ಲೂಕು ಅಧ್ಯಕ್ಷ ರಾದ ಫ್ರಾನ್ಸಿಸ್ ಡಿಸೋಜಾ ಮತ್ತು ಶನಿವಾರಸಂತೆ ಹೋಬಳಿ ಘಟಕದ ಅಧ್ಯಕ್ಷರಾದ ಆನಂದ್ ಮತ್ತು ಸೋಮವಾರಪೇಟೆ ತಾಲೂಕು ಕಾರ್ಯದರ್ಶಿ ರಾಮನಳ್ಳಿ ಪ್ರವೀಣ್ ಮತ್ತು ಕರವೇ ಕಾರ್ಯಕರ್ತರಾದ  ರಂಜಿತ್ ಮತ್ತು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಧಿಕಾರಿ ಶಿವಕುಮಾರ್ ಅವರ ತಂಡ ಭಾಗವಹಿಸಿದ್ದರು

ಉದ್ಯೋಗ ಲಭ್ಯವಿದೆ | ಉಚಿತ ವಸತಿ ಮತ್ತು ಊಟ | ಸೀಮಿತ ಸೀಟುಗಳು ಮಾತ್ರ ಲಭ್ಯವಿದೆ | ತಕ್ಷಣವಾಗಿ ಅರ್ಜಿಯನ್ನು ಹಾಕಿ | Jobs available | With free accommodations and meals | Only limited seats available | Apply immediately |

 

About Author