ಟಿಂಬರ್ ಕಾರ್ಮಿಕರ ಸಂಘದ ವತಿಯಿಂದ ಕಾರ್ಮಿಕ ದಿನದ ಆಚರಣೆ….
1 min read
ಟಿಂಬರ್ ಕಾರ್ಮಿಕರ ಸಂಘದ ವತಿಯಿಂದ ಕಾರ್ಮಿಕ ದಿನದ ಆಚರಣೆ
ಆಲ್ದೂರು: ಪಟ್ಟಣದ ಸಮೀಪದ ಗಾಳಿಗಂಡಿ ವಾರ್ಡಿನ ಬಿ ಹೆಚ್ ರಸ್ತೆ, ಮಲ್ನಾಡ್ ಟಿಂಬರ್ ಕಾರ್ಮಿಕರ ಸಂಘ (ರಿ) ವತಿಯಿಂದ ಕಾರ್ಮಿಕ ದಿನಾಚರಣೆಯನ್ನು ಆಚರಿಸಲಾಯಿತು.
ಕಾರ್ಮಿಕ ದಿನದ ಅಂಗವಾಗಿ ಪರಸ್ಪರ ಶುಭಾಶಯ ವಿನಿಮಯ ಮಾಡಿಕೊಂಡು ಸಂಘದ ವತಿಯಿಂದ ಸಿದ್ದಪಡಿಸಿದ್ದ ಸಿಹಿಯನ್ನು
ಸಂಘದ ಸದಸ್ಯರು ಮತ್ತು ಸಾರ್ವಜನಿಕರಿಗೆ ಹಂಚಲಾಯಿತು.
ಸಂಘದ ಉಪಾಧ್ಯಕ್ಷ ಸುರೇಶ್ ಕೆಡಿ, ಕಾರ್ಮಿಕರ ದುಡಿಮೆಯ ಬೆವರು ದೇಶದ ಅಭಿವೃದ್ಧಿಯ ಮೂಲ ಮಂತ್ರವಾಗಿದೆ ಎಂದು ಅಭಿಪ್ರಾಯ ಪಟ್ಟರು.
ಕಾರ್ಯದರ್ಶಿ ಸಂತೋಷ್ ಪ್ರತಿಯೊಂದು ಉದ್ಯೋಗಕ್ಕೂ ಅದರದ್ದೇ ಆದ ಮಹತ್ವ ಬೆಲೆ ಇದ್ದೇ ಇದೆ. ಸರ್ಕಾರಗಳು ದೈಹಿಕವಾಗಿ ಪರಿಶ್ರಮ ಪಡುವ ಕೂಲಿ ಕಾರ್ಮಿಕರ ಸಂಘಗಳ ಅಭಿವೃದ್ಧಿ ಕಲ್ಯಾಣಕ್ಕಾಗಿ ವಿಶೇಷ ಯೋಜನೆಗಳನ್ನು ಜಾರಿಗೆ ತರಬೇಕು ಮತ್ತು ಟಿಂಬರ್ ಕಾರ್ಮಿಕರ ಕೆಲಸದ ಭದ್ರತೆಗೆ ಸುರಕ್ಷತಾ ವಿಮೆಯನ್ನು ಒದಗಿಸಬೇಕು ಎಂದು ಒತ್ತಾಯಿಸಿದರು.
ಸಂಘದ ಪದಾಧಿಕಾರಿಗಳು ಸದಸ್ಯರು ಭಾಗವಹಿಸಿದ್ದರು.

