ಮೂಡಿಗೆರೆಯಲ್ಲಿ ಪ್ರತಿವರ್ಷದಂತೆ ಈ ಬಾರಿಯು ನೆಡೆಯುವ ಡಾ. ಬಿ. ಆರ್. ಅಂಬೇಡ್ಕರ್ ಅವರ 135ನೇ ಜನ್ಮದಿನಾಚರಣೆ ಅಂಗವಾಗಿ ಸರಳ ಸಾಮೂಹಿಕ ವಿವಾಹ…
1 min read
*ಮೂಡಿಗೆರೆಯಲ್ಲಿ ಪ್ರತಿವರ್ಷದಂತೆ ಈ ಬಾರಿಯು ನೆಡೆಯುವ ಡಾ. ಬಿ. ಆರ್. ಅಂಬೇಡ್ಕರ್ ಅವರ 135ನೇ ಜನ್ಮದಿನಾಚರಣೆ ಅಂಗವಾಗಿ ಸರಳ ಸಾಮೂಹಿಕ ವಿವಾಹ. ಇದೇ ತಿಂ

ಗಳು ಮೇ 14.ಬೆಳಿಗ್ಗೆ 10 ಘಂಟೆಗೆ ಶ್ರೀಮತಿ ಮೋಟಮ್ಮ ಅವರ ಅದ್ಯಕ್ಷತೆಯಲ್ಲಿ ಪಟ್ಟಣದ ಅಂಡತ್ಯಾಯ ರಂಗಮಂದಿರದಲ್ಲಿ 10 ಜೋಡಿಗಳ ಸರಳ ಸಾಮೂಹಿಕ ವಿವಾಹ ಏರ್ಪಡಿಸಿರುವ ಹಿನ್ನಲೆಯಲ್ಲಿ ಕಾಂಗ್ರೆಸ್ ಪಕ್ಷದ ಹಿರಿಯ ನಾಯಕರು,ಮಾಜಿ ಸಚಿವರಾದ ಶ್ರೀಮತಿ ಮೋಟಮ್ಮ ರವರು ಇಂದು ಬೆಳಿಗ್ಗೆ ಹಿರೇಮಗಳೂರಿನ ಶ್ರೀ ಕೋದಂಡ ರಾಮಚಂದ್ರ ಸ್ವಾಮಿ ದೇವಾಲಯಕ್ಕೆ ಭೇಟಿ ನೀಡಿ ಮಾಂಗಲ್ಯ ಪೂಜೆ ಸಲ್ಲಿಸಿ, ದೇವರಿಗೆ ಮಾಂಗಲ್ಯ ಸಮರ್ಪಣೆ ಮಾಡಿದರು. ನಂತರ ದೇವಾಲಯದ ಹಿರಿಯ ಅರ್ಚಕರು, ಹಾಗೂ ವಾಗ್ಮಿಗಳಾದ ಶ್ರೀಯುತ ಹಿರೇಮಗಳೂರು ಕಣ್ಣನ್ ಮಾಮ ಅವರನ್ನು ಭೇಟಿಮಾಡಿ ವಿಚಾರ ವಿನಿಮಯ ಮಾಡಿದರು. ಈ ಸಂದರ್ಭದಲ್ಲಿ ಗ್ರಾಮದ ಮುಖಂಡರಾದ ಹೆಚ್. ಎಸ್. ಜಗದೀಶ್,ಹೆಚ್.ಎನ್.ಪ್ರಕಾಶ್.ಕಾಂಗ್ರೆಸ್ ಮುಖಂಡರು ಹಾಗೂ ಮಾಜಿ ಧರ್ಮದರ್ಶಿಗಳಾದ ಹಿರೇಮಗಳೂರು ರಾಮಚಂದ್ರ, ಡೈರಿ ಶಿವಾಜಿ ಉಪಸ್ಥಿತರಿದ್ದರು*

