ಕುದುರೆಮುಖ ರಾಷ್ಟ್ರೀಯ ಉದ್ಯಾನ ವ್ಯಾಪ್ತಿಯಲ್ಲಿ ದಗದಗಿಸಿ ಉರಿಯುತ್ತಿರುವ ಬೆಂಕಿಯ ಜ್ವಾಲೆ….
1 min read
ಅವಿನ್ ಟಿವಿ ಸುದ್ದಿಜಾಲ ✍️: ಕುದುರೆಮುಖ ರಾಷ್ಟ್ರೀಯ ಉದ್ಯಾನ ವ್ಯಾಪ್ತಿಯಲ್ಲಿ ದಗದಗಿಸಿ ಉರಿಯುತ್ತಿರುವ ಬೆಂಕಿಯ ಜ್ವಾಲೆ, ಅರಣ್ಯಾಧಿ

ಕಾರಿಗಳ ದಿವ್ಯ ನಿರ್ಲಕ್ಷಕ್ಕೆ ಸಾರ್ವಜನಿಕರ ಆಕ್ರೋಶ, ಬೆಂಕಿಯ ತೀವ್ರತೆಗೆ ಪ್ರಾಣಿ ಪಕ್ಷಿಗಳ ಆಕ್ರಂದನ.
ಕಳಸ ಮಾ ೨೦: ಚಿಕ್ಕಮಗಳೂರು ಜಿಲ್ಲೆಯ ಕುದುರೆಮುಖ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯ ಸುಮಾರು 25 ಕಡೆ ಭಾರಿ ಬೆಂಕಿಗೆ ಸುಟ್ಟು ಹೋಗುತ್ತಿರುವ ಶೋಲಾ ಹುಲ್ಲುಗಾವಲು, ಬೆಂಕಿನಂದಿಸಲು ಸಮರ್ಪಕವಾಗಿ ವೀಕ್ಷರ ನೇಮಕ ಮಾಡಿಕೊಳ್ಳದ ಅಧಿಕಾರಿಗಳ ದಿವ್ಯ ನಿರ್ಲಕ್ಷತನಕ್ಕೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಜಿಲ್ಲೆಯ ಪ್ರಸಿದ್ಧ ಕುದುರೆಮುಖ ರಾಷ್ಟ್ರೀಯ ಉದ್ಯಾನ ವ್ಯಾಪ್ತಿಯಲ್ಲಿ ಭಾರಿ ಬೆಂಕಿ ಬಿದ್ದಿದೆ.ಇಲ್ಲಿನ ಕೆರೆಕಟ್ಟೆ ವಲಯದ ಮಾಣಿಕ್ಯಬೆಟ್ಟ, ವಾಲೀಕುಂಜ ಗಿರಿ ಸಾಲಿನಲ್ಲಿ ಭಾರಿ ಬೆಂಕಿ ಕಾಣಿಸಿದೆ.ಒಟ್ಟು 25 ಕಡೆಗೂ ಹೆಚ್ಚು ಕಾಡಿನ ಪ್ರದೇಶಕ್ಕೆ ಕಿಡಿಗೇಡಿಗಳು ಬೆಂಕಿ ಹಚ್ಚಿದ್ದಾರೆ ಎನ್ನಲಾಗಿದೆ,ಇದರಿಂದ
ಸಾವಿರಾರು ಎಕರೆ ಕಾಡು ಬೆಂಕಿಗೆ ಆಹುತಿಯಾಗಿದೆ.ಬೆಂಕಿಯ ತೀವ್ರತೆ ತುಂಬ ದೂರದವರೆಗೂ ಎದ್ದು ಕಾಣುತಿತ್ತು.ನೆಲದಲ್ಲಿ ಗೂಡು ಕಟ್ಟುವ ಪಕ್ಷಿಗಳು ,ಪ್ರಾಣಿಗಳು,ಸಸ್ಯ ವರ್ಗ ಹೆಚ್ಚಾಗಿ ಸುಟ್ಟಿ ಹೋಗಿರುವ ಸಾಧ್ಯತೆಗಳು ಇವೆ ಎನ್ನುತ್ತಾರೆ ಸ್ಥಳೀಯರು.
ಕುದುರೆಮುಖ ರಾಷ್ಟ್ರೀಯ ಉದ್ಯಾನದ ಅರಣ್ಯ ಅಧಿಕಾರಿಗಳ ದಿವ್ಯ ನಿರ್ಲಕ್ಷಕ್ಕೆ ಸಾವಿರಾರು ಎಕರೆ ಕಾಡು ಬೆಂಕಿಯಿಂದ ಬಸ್ಮವಾಗಿದ್ದು ಈ ಬಗ್ಗೆ ಯಾವುದೇ ಮುಂಜಾಗೃತ ಕ್ರಮ ಕೈಗೊಳ್ಳುದಿರುವುದು ಈ ಅವಘಡಕ್ಕೆ ಕಾರಣ ಎನ್ನಲಾಗಿದೆ.
ಬೆಂಕಿ ನಂದಿಸುವ ಅರಣ್ಯ ವೀಕ್ಷಕರನ್ನು ಸಂಬಂಧಪಟ್ಟ ಅರಣ್ಯ ಇಲಾಖೆ ನೇಮಕ ಮಾಡಿಕೊಂಡಿದ್ದರು ಕೂಡ ನೆಲ ಹಂತದಲ್ಲಿ ಯಾವುದೇ ವೀಕ್ಷರು ಬೆಂಕಿ ನಂದಿಸುವ ಕಾರ್ಯದಲ್ಲಿ ಕಂಡು ಬರುತ್ತಿಲ್ಲ.
ಕಾಡಿಗೆ ಬೆಂಕಿ ಬೀಳದಂತೆ
ಮುಂಜಾಗ್ರತಾ ಕ್ರಮವಾಗಿ ಬೆಂಕಿ ನಿಯಂತ್ರಣ ರೇಖಾ ಗಡಿಯನ್ನು ಮಾಡಿಲ್ಲ.ಸರಿಯಾಗಿ ವೀಕ್ಷಣ ಗೋಪುರ ನಿರ್ಮಾಣ ಮಾಡಿಲ್ಲ.
ಬೆಂಕಿ ಬೀಳದಂತೆ ಯಾವುದೇ ಮುಂಜಾಗೃತ ಕೆಲಸ ಮಾಡುವಲ್ಲಿ ವಿಫಲವಾಗಿದೆ ಸಂಬಂಧಪಟ್ಟ ಅರಣ್ಯ ಇಲಾಖೆ ಎಂದು ಸ್ಥಳೀಯರು ದೂರಿದ್ದಾರೆ.
ಒಂದು ವಾರದಿಂದ ಸತತವಾಗಿ ಬೆಂಕಿ ಬಿದ್ದು ಕಾಡು ಸುಟ್ಟು ಜೀವಸಂಕುಲಕ್ಕೆ ಹಾನಿಯಾಗುತ್ತಿದ್ದರೂ ಕೂಡ ಯಾವುದೇ ಅರಣ್ಯ ಸಿಬ್ಬಂದಿ ಮತ್ತು ಅಧಿಕಾರಿಗಳು ಸ್ಥಳಕ್ಕೆ ಬಂದಿಲ್ಲ ಎನ್ನುವುದು ಸ್ಥಳೀಯರ ತೀವ್ರ ಬೇಸರ, ಇದು ಅವರ ಬೇಜವಾಬ್ದಾರಿ ಮತ್ತು ಕರ್ತ್ಯವ ಲೋಪವನ್ನು ತೋರಿಸುತ್ತದೆ ಎನ್ನುತ್ತಾರೆ.
ಸದಾ ಪರಿಸರ ಕಾಡು ಸಂರಕ್ಷಣೆ ಬಗ್ಗೆ ಆಸಕ್ತಿ ತೋರುವ ಅರಣ್ಯ ಸಚಿವರಾದ ಈಶ್ವರ್ ಖಂಡ್ರೆ ಅವರು ಖುದ್ದು ಸ್ಥಳ ಪರಿಶೀಲನೆ ಮಾಡಿ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಮತ್ತು ಕುದುರೆಮುಖ ರಾಷ್ಟ್ರೀಯ ಉದ್ಯಾನವನ್ನು ಬೆಂಕಿಯಿಂದ ರಕ್ಷಿಸಲು ಮುಂದಾಗಬೇಕು ಎಂದು ಸ್ಥಳೀಯರು, ಪರಿಸರ ಪ್ರಿಯರು ಒತ್ತಾಯಿಸಿದ್ದಾರೆ.
••••••••••••••
ಡಿ ಎಂ ಮಂಜುನಾಥಸ್ವಾಮಿ
ಅವಿನ್ ಟಿವಿ ಸುದ್ದಿಜಾಲ ….. ✍️
ಚಿಕ್ಕಮಗಳೂರು

