लाइव कैलेंडर

November 2026
M T W T F S S
 1
2345678
9101112131415
16171819202122
23242526272829
30  
15/11/2026

AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

” ಶೋಷಿತರ ಸಂಘರ್ಷ ದಿನವೇ ಮಾರ್ಚ್ 20″
✊✊✊✊✊✊✊

ಭಾರತೀಯ ಸಮಾಜದ ಮೂಲ ಸ್ವರೂಪವನ್ನು ಗ್ರಹಿಸಲು ಅಂಬೇಡ್ಕರ್ ಅವರು ಪ್ರಪಂಚದ ಬೇರೆಬೇರೆ ಸಂಸ್ಕೃತಿಗಳ ಸಾಮಾಜಿಕ ಸ್ವರೂಪವನ್ನು ತೌಲನಿಕವಾಗಿ ಅಭ್ಯಾಸಿಸಲು ತೊಡಗಿದರು ಗ್ರಿಕ್ ಸಾಮಾಜಿಕ ವ್ಯವಸ್ಥೆಯಲ್ಲಿ ಗುಲಾಮಗಿರಿ ಪದ್ಧತಿ, ಆಚರಣೆಯಲ್ಲಿದ್ದುದ್ದನ್ನು ಗುರುತಿಸುತ್ತಾರೆ. ಮಾಲೀಕರು ತಮ್ಮ ಕಾರ್ಖಾನೆ ಮತ್ತು ತೋಟಗಳಲ್ಲಿ ಮನೆ ಕೆಲಸಗಳಲ್ಲಿ ಗುಲಾಮರನ್ನು ದುಡಿಸಿಕೊಳ್ಳುತ್ತಿದ್ದರು ಇವರಿಗೆ ಯಾವುದೇ ಬಗೆಯ ಸ್ವಾತಂತ್ರ್ಯ ವಿರುತ್ತಿರಲಿಲ್ಲ ಒಂದು ರೀತಿಯಲ್ಲಿ ಯುದ್ಧ ಕೈದಿಗಳಂತೆ ಅವರನ್ನು ಕಾಣಲಾಗುತ್ತಿತ್ತು. ಆದರೆ ಭಾರತದ ವೈದಿಕ ಸಾವಿ ವ್ಯವಸ್ಥೆ ಇದಕ್ಕಿಂತ ಭಿನ್ನವಾಗಿತ್ತು. ಅಂಬೇಡ್ಕರ್ ಅವರು ಅಪಾರವಾದ ವಿದ್ವತ್ ಮತ್ತು ಪ್ರೌಢಿಮೆಯನ್ನು ಪಡೆದುಕೊಂಡಿದ್ದರಿಂದ ಚಿಂತನಶೀಲ ಬರಹಗಳ ಮೂಲಕ ಜನರ ಮನಸ್ಸನ್ನು ಪರಿವರ್ತಿಸಬಹುದೆಂದು ಆಲೋಚಿಸಿದರು ಈ ಉದ್ದೇಶದಿಂದ ಅಸ್ಪೃಶ್ಯರ ಮುಖವಾಣಿಯಾಗಿ ಏಪ್ರಿಲ್ ಮೂರು 1927ರಂದು ಬಹಿಷ್ಕೃತ ಭಾರತ ಎಂಬ ಪತ್ರಿಕೆಯನ್ನು ಹೊರಡಿಸಿದರು ಈ ಪತ್ರಿಕೆಯ ಮುಖಾಂತರ ದಲಿತರ ಆರ್ಥಿಕ ಸಾಮಾಜಿಕ ಮತ್ತು ರಾಜಕೀಯ ಪರಿಸ್ಥಿತಿಗಳನ್ನು ವಿವರಿಸುತ್ತಾ ಸವರ್ಣೀಯ ಹಿಂದುಗಳು ದಲಿತರ ಮೇಲೆ ನಡೆಸುತ್ತಿದ್ದ ದೌರ್ಜನ್ಯಗಳನ್ನು ಬಯಲಿ ಗೆಳೆಯ ತೊಡಗಿದರು ದಲಿತರ ಮೇಲೆ ನಡೆಯುತ್ತಿದ್ದ ಅನ್ಯಾಯ ಅತ್ಯಾಚಾರಗಳಿಗೆ ಪ್ರತಿಭಟನೆ ಸಲ್ಲಿಸುತ್ತಾ ಅವರಿಗೆ ನ್ಯಾಯ ದೊರಕಿಸಿಕೊಡಲು ಬ್ರಿಟಿಷ್ ಸರ್ಕಾರವನ್ನು ಒತ್ತಾಯಿಸಿ ತೊಡಗಿದರು ಇದರಿಂದ ಮುಂಬೈ ಪ್ರಾಂತೀಯ ಸರ್ಕಾರ ಪ್ರತಿಯೊಬ್ಬ ವ್ಯಕ್ತಿಯು ಯಾವುದೇ ಜಾತಿಯವನಾಗಿರಲಿ ಸಾರ್ವಜನಿಕವಾಗಿ ಓಡಾಡಲು ಶಿಕ್ಷಣ ಪಡೆಯಲು ಮತ್ತು ಸಾರ್ವಜನಿಕ ಕೆರೆ ಬಾವಿಗಳಿಂದ ನೀರನ್ನು ಕುಡಿಯಲು ಹಕ್ಕುಳ್ಳವನು. ಎಂಬ ಕಾನೂನನ್ನು ಜಾರಿಗೆ ತಂದಿದ್ದು ಆದರೆ ಇಂಡಿಯಾದಲ್ಲಿ ಎಂತಹ ಕಾನೂನು ಜಾರಿಗೆ ಬಂದರೂ ಅದನ್ನು ಅನುಷ್ಠಾನಗೊಳ್ಳದಂತೆ ಸವರ್ಣಿಯರು ತಡೆಯೋಡುತ್ತಿದ್ದರು ಆ ಕಾಲದಲ್ಲಿ ಅಸ್ಪಶ್ಯರು ಬೀದಿಗಳಲ್ಲಿ ಓಡಾಡುವಂತಿರಲಿಲ್ಲ ಮತ್ತು ಕೆರೆ ಬಾವಿಗಳನ್ನು ಮುಟ್ಟುವಂತಿರಲಿಲ್ಲ. ಇಂತಹ ಪರಿಸ್ಥಿತಿ ಯಥಾಪ್ರಕಾರ ಮುಂದುವರೆದು ದ್ದನ್ನು ಗಮನಿಸಿದ ಅಂಬೇಡ್ಕರ್ ಅವರು ಚಳುವಳಿ ಮಾಡಲು ಆಲೋಚಿಸಿದರು 1927ರ ಮಾರ್ಚ್ ತಿಂಗಳಲ್ಲಿ ಅಂಬೇಡ್ಕರ್ ಅವರ ಮುಂದಾಳತ್ವದಲ್ಲಿ ನಡೆದ ನಾಗರಿಕ ಹಕ್ಕು ಚಳುವಳಿಯು ಭಾರತದ ಇತಿಹಾಸದಲ್ಲಿ ಒಂದು ಮೈಲುಗಲ್ಲಾಯಿತು ಈ ಚಳುವಳಿಯಲ್ಲಿ ಚೌಡರೆ ಕೆರೆಯ ನೀರನ್ನು ತೆಗೆದುಕೊಳ್ಳಬಹುದೆಂದು ಗೊತ್ತುವಳಿಯನ್ನು ಅಂಗೀಕರಿಸಲಾಯಿತು ಮುಂಬೈ ಪ್ರಾಂತ್ಯದ ಕೋಲಬ್ ಜಿಲ್ಲೆಯಲ್ಲಿ ಮಹಾಡ್ ಎಂಬುದು ಒಂದು ಸಣ್ಣ ನಗರವಾಗಿತ್ತು ಇದಕ್ಕೆ ಪೂರಕವಾಗಿ ಇಲ್ಲಿನ ನಗರಸಭೆಯು ಅಸ್ಪೃಶ್ಯರು ಚೌಡರೆ ಕೆರೆಯ ನೀರನ್ನು ತೆಗೆದುಕೊಳ್ಳಬಹುದೆಂದು ಗೊತ್ತುವಳಿಯನ್ನು ಪಾಸು ಮಾಡಿತು ಆದರೂ ಸವರ್ಣೀಯರು ಚೌಡರ ಕೆರೆಯ ನೀರನ್ನು ಮುಟ್ಟಲು ಅವಕಾಶ ಮಾಡಿಕೊಡಲಿಲ್ಲ ಈ ಹಕ್ಕನ್ನು ಸ್ಥಾಪಿಸುವ ಬಗ್ಗೆ ಚಿಂತಿಸಿದ ಅಂಬೇಡ್ಕರ್ 1927 ಮಾರ್ಚ್ 19 ಮತ್ತು 20ರಂದು ಮಹಾಡ್ ನಗರದಲ್ಲಿ ಒಂದು ಸಮ್ಮೇಳನ ನಡೆಸಲು ಆಲೋಚಿಸಿದರು ಈ ಸಮ್ಮೇಳನದಲ್ಲಿ ಮುಂಬೈ ಪ್ರಾಂತ್ಯದ ಬೇರೆ ಬೇರೆ ಭಾಗಗಳಿಂದ ಸುಮಾರು 10000 ಶೋಷಿತರು ಸೇರಿದರು. ಈ ಸಮಾವೇಶದ ಅಧ್ಯಕ್ಷತೆಯನ್ನು ಅಂಬೇಡ್ಕರ್ ಅವರು ವಹಿಸಿ ಸಮ್ಮೇಳನ ಉದ್ದೇಶಿಸಿ ಭಾಷಣ ಮಾಡಿ ನೆರೆದಿದ್ದ ಎಲ್ಲಾ ಜನಗಳಿಗೆ ಸ್ಪೂರ್ತಿ ಮತ್ತು ಕೆಚ್ಚು ಗಳನ್ನು ಮೂಡಿಸಿದರು.
ಸವರ್ಣೀಯ ಹಿಂದೂಗಳ ತಮ್ಮ ಸಜಾತಿಯವರನ್ನೇ ಇಷ್ಟೊಂದು ಹೀನಾಯವಾಗಿ ನಡೆಸಿಕೊಳ್ಳುತ್ತಿರುವುದರಿಂದ ವಿರುದ್ಧ ಪ್ರತಿಭಟನೆ ಮಾಡಬೇಕೆಂದು ಅಸ್ಪೃಶ್ಯರನ್ನು ತಮ್ಮ ಭಾಷಣಗಳಿಂದ ಎಚ್ಚರಿಸುತ್ತಾರೆ ಸ್ವಂತ ಬಲವಿದ್ದು ಆಲೋಚನೆ ಸುತ್ತಿದ್ದು ತಮ್ಮ ಪರಿಸ್ಥಿತಿಗಳನ್ನು ಕುರಿತು ತಾವೇ ಸ್ವಂತ ಚಿಂತಿಸಬೇಕೆಂದು ಕರೆ ಕೊಡುತ್ತಾರೆ ಯಾವುದೇ ಸಾಧನೆಯನ್ನು ಅಥವಾ ಗುರಿಯನ್ನು ಮುಟ್ಟಬೇಕಾದರೆ ಹೋರಾಟದಿಂದಲೇ ಸಾಧ್ಯ ಎಂಬ ಕರೆ ಕೊಡುತ್ತಾರೆ.
ಶತಶತಮಾನಗಳಿಂದ ದಬ್ಬಾಳಿಕೆಗೆ ಗುರಿಯಾದ ಜನಗಳು ಹೀಗಿರುವ ಪರಿಸ್ಥಿತಿಯಲ್ಲಿಯೇ ಮುಂದುವರೆಯುವಂತೆ ಮೇಲ್ಜಾತಿ ಜನಗಳು ಅವರನ್ನು ನಿರ್ಬಂಧಿಸುತ್ತಾರೆ ನಿಜ ಆದರೆ ಈ ಅಸನೆಯ ಬಾಲನ್ನು ಎಷ್ಟು ದಿನ ಬದುಕುವುದು ಎಂಬ ಪ್ರಶ್ನೆಯನ್ನು ಅಂಬೇಡ್ಕರ್ ಅವರು ಮುಂದೆ ಇಡುತ್ತಾರೆ ಈ ದೃಷ್ಟಿಯಿಂದ ದಲಿತರು ತಮ್ಮ ಸಾಂಪ್ರದಾಯಿಕ ರೀತಿ ನೀತಿಗಳನ್ನು ಮಾರ್ಪಡಿಸಿಕೊಳ್ಳಬೇಕೆಂದು ಕರೆ ಕೊಡುತ್ತಾರೆ ಸ್ವಾತಂತ್ರವನ್ನು ಹೋರಾಟದ ಮೂಲಕ ದಕ್ಕಿಸಿಕೊಳ್ಳಬೇಕೆ ವಿನಃ ಬಳುವಳಿಯ ರೂಪದಲ್ಲಿ ಪಡೆಯಲಾಗದೆಂದು ಕರೆ ಕೊಡುತ್ತಾರೆ ನೋವು ಅಪಮಾನಗಳಲ್ಲಿ ಬದುಕುತ್ತಾ ದಾಸ್ಯ ಮತ್ತು ದಾರಿದ್ರೆಗಳೇ ತಮ್ಮ ಸಹಜ ಸ್ಥಿತಿಗಳೆಂದು ನಂಬಿದ ನಿಮ್ಮ ವರ್ಗಗಳ ಜನಗಳಿಗೆ ತುಂಬುತ್ತಾ ತಮ್ಮ ಹಕ್ಕುಗಳಿಗಾಗಿ ಹೋರಾಟದ ಕಣಕ್ಕಿಳಿಯಲು ಪ್ರೇರೇಪಿಸುತ್ತಾರೆ. ಆದ್ದರಿಂದಾಗಿಯೇಭಾರತದಲ್ಲಿ “ಮಾರ್ಚ್ 20 ನೇ ದಿನವನ್ನು. ಶೋಷಿತರ ಸಂಘರ್ಷದ ದಿನ” ಎಂದು ಕರೆಯಬಹುದು.

ಬರಹ:
ಡಾ.ಹರೀಶ್ ನಲ್ಕೆ ಸಂಶೋಧನಾ. ಬರಹಗಾರರು

About Author

Leave a Reply

Your email address will not be published. Required fields are marked *

You may have missed