ಯತ್ನಾಳ್ ಮತ್ತು ಸಿ.ಟಿ. ರವಿ ಅವರ ಬೇಜವಾಬ್ದಾರಿ ಹೇಳಿಕೆಗಳ ವಿರುದ್ಧ ದಲಿತ ಸಂಘಟನೆಗಳ ಒಕ್ಕೂಟದಿಂದ ಬೃಹತ್ ಪ್ರತಿಭಟನೆ….
1 min read
ಯತ್ನಾಳ್ ಮತ್ತು ಸಿ.ಟಿ. ರವಿ ಅವರ ಬೇಜವಾಬ್ದಾರಿ ಹೇಳಿಕೆಗಳ ವಿರುದ್ಧ ದಲಿತ ಸಂಘಟನೆಗಳ ಒಕ್ಕೂಟದಿಂದ ಬೃಹತ್ ಪ್ರತಿಭಟನೆ
ಚಿಕ್ಕಮಗಳೂರು: ದಲಿತ ಹೆಣ್ಣುಮಕ್ಕಳ ಸ್ವಾಭಿಮಾನ ಮತ್ತು ಘನತೆಗೆ ಧಕ್ಕೆ ತರುವಂತಹ ಹೇಳಿಕೆಗಳನ್ನು ನೀಡಿರುವ ಮಾಜಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹಾಗೂ ಮಾಜಿ ಸಚಿವ ಸಿ.ಟಿ. ರವಿ ಅವರ ವಿರುದ್ಧ ದಲಿತ ಸಂಘಟನೆಗಳ ಒಕ್ಕೂಟವು ತೀವ್ರ ಆಕ್ರೋಶ ವ್ಯಕ್ತಪಡಿಸಿದೆ. ಈ ಹೇಳಿಕೆಗಳನ್ನು ಖಂಡಿಸಿ ದಿನಾಂಕ 22.9.2025ರ ಸೋಮವಾರ ಬೆಳಗ್ಗೆ 11.30ಕ್ಕೆ ನಗರದ ಆಜಾದ್ ಪಾರ್ಕ್ ಬಳಿ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ.
“ಯತ್ನಾಳ್ ಅವರು ‘ದಲಿತ ಹೆಣ್ಣುಮಕ್ಕಳಿಗೆ ಚಾಮುಂಡೇಶ್ವರಿ ದೇವಸ್ಥಾನ ಪ್ರವೇಶವಿಲ್ಲ’ ಎಂದು ಬೇಜವಾಬ್ದಾರಿ ಹೇಳಿಕೆ ನೀಡಿದರೆ, ಸಿ.ಟಿ. ರವಿ ಅವರು ಪ್ರಿಯಾಂಕಾ ಖರ್ಗೆ ಅವರ ಬಗ್ಗೆ ‘ಬೆರಕೆಗೆ ಹುಟ್ಟಿದವರು’ ಎಂಬ ಅಸಂಬದ್ಧ ಹೇಳಿಕೆ ನೀಡಿ ನಮ್ಮ ಸಮುದಾಯದ ಘನತೆಗೆ ಧಕ್ಕೆ ತಂದಿದ್ದಾರೆ. ಇಂತಹ ಹೇಳಿಕೆಗಳು ಕೇವಲ ದಲಿತರನ್ನಷ್ಟೇ ಅಲ್ಲದೆ, ಇಡೀ ಮಾನವ ಸಮುದಾಯ ಮತ್ತು ಸಂವಿಧಾನವನ್ನೂ ಅವಮಾನಿಸಿದಂತಾಗಿದೆ. ಬಾಬಾಸಾಹೇಬ್ ಅಂಬೇಡ್ಕರ್ ಅವರು ಕಟ್ಟಿದ ಈ ದೇಶದಲ್ಲಿ ಇಂತಹ ದ್ವೇಷಪೂರಿತ ಮಾತುಗಳಿಗೆ ಅವಕಾಶವಿಲ್ಲ”
“ನಮ್ಮ ದಲಿತ ನಾಯಕರ, ಮತ್ತು ಹೆಣ್ಣುಮಕ್ಕಳ ಸ್ವಾಭಿಮಾನಕ್ಕೆ ಧಕ್ಕೆ ತಂದಿರುವ ಇಂತಹ ಜನಪ್ರತಿನಿಧಿಗಳ ಹೇಳಿಕೆಗಳಿಗೆ ಸೂಕ್ತ ಕಾನೂನು ಕ್ರಮ ಜರುಗಿಸಬೇಕು. ಇಂತಹ ಬೇಜವಾಬ್ದಾರಿ ಹೇಳಿಕೆಗಳು ಪುನರಾವರ್ತನೆಯಾಗದಂತೆ ತಡೆಯಲು ಈ ಪ್ರತಿಭಟನೆ ಒಂದು ಎಚ್ಚರಿಕೆಯ ಗಂಟೆಯಾಗಿದೆ. ನಮ್ಮ ಹೋರಾಟ ಕೇವಲ ವೈಯಕ್ತಿಕ ಘಟನೆಯ ವಿರುದ್ಧವಲ್ಲ, ಬದಲಾಗಿ ಸಮಾಜದಲ್ಲಿ ಜಾತಿ ವೈಷಮ್ಯವನ್ನು ಬಿತ್ತುತ್ತಿರುವ ವ್ಯವಸ್ಥೆಯ ವಿರುದ್ಧ”
ಪ್ರತಿಭಟನೆಯಲ್ಲಿ ಜಿಲ್ಲೆಯ ಎಲ್ಲಾ ದಲಿತ ಸಂಘಟನೆಗಳು,ಪ್ರಗತಿಪರ ಸಂಘಟನೆಗಳು, ರೈತ ಸಂಘಟನೆಗಳು ಹಾಗೂ ವಿವಿಧ ಮಹಿಳಾ ಸಂಘಟನೆಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಹೋರಾಟಕ್ಕೆ ಬೆಂಬಲಿಸಿ.
ಜಿಲ್ಲೆಯ ಎಲ್ಲಾ ನಾಗರಿಕರು ನ್ಯಾಯದ ಪರವಾಗಿ ಒಗ್ಗೂಡುವುದು ತುರ್ತಾಗಿದೆ..
ನಾನು ಬರುತ್ತಿದ್ದೇನೆ ನೀವು ಬನ್ನಿ.
ಜೈ ಭೀಮ್. 💙
✍️ ಆಶಾ ಸಂತೋಷ್ ಮೂಡಿಗೆರೆ
ರಾಜ್ಯ ಸಮಿತಿ ಸದಸ್ಯೆ,
ದಲಿತ ಮಹಿಳಾ ಒಕ್ಕೂಟ
ಕರ್ನಾಟಕ ದಲಿತ ಸಂಘರ್ಷ ಸಮಿತಿ ಅಂಬೇಡ್ಕರ್ ವಾದ

