लाइव कैलेंडर

November 2026
M T W T F S S
 1
2345678
9101112131415
16171819202122
23242526272829
30  
15/11/2026

AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

…..ನಿಧನ…..
ಕರ್ನಾಟಕ ದಲಿತ ಸಂಘರ್ಷ ಸಮಿತಿ ಸದಸ್ಯ ಮಂಜುನಾಥ್ ಲೋಕವಳ್ಳಿ (56)….ಇನ್ನಿಲ್ಲ.
ಕರ್ನಾಟಕ ದಲಿತ ಸಂಘರ್ಷ ಸಮಿತಿ ಸದಸ್ಯ ಮಂಜುನಾಥ್ ಲೋಕವಳ್ಳಿ  ಅಪಘಾತದಲ್ಲಿ ನಿಧನ.
‎ಚಿಕ್ಕಮಗಳೂರು: ಕರ್ನಾಟಕ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ) ಚಿಕ್ಕಮಗಳೂರು ಜಿಲ್ಲಾ ಸಮಿತಿ ಸದಸ್ಯರಾದ ಮಂಜುನಾಥ್ ಲೋಕವಳ್ಳಿ ಅವರು ಇಂದು ಸಂಜೆ 6.30.ಕ್ಕೆ ನಡೆದ ಭೀಕರ ರಸ್ತೆ ಅಪಘಾತದಲ್ಲಿ ನಿಧನರಾಗಿದ್ದಾರೆ. ಮೂಡಿಗೆರೆ ಸಮೀಪ ಸಂಭವಿಸಿದ ಈ ದುರ್ಘಟನೆ ಸಮಾಜಕ್ಕೆ ತುಂಬಲಾರದ ನಷ್ಟವನ್ನುಂಟು ಮಾಡಿದೆ.
ಮೂಡಿಗೆರೆ ನಿವಾಸಿ ಮಂಜುನಾಥ್ ಲೋಕವಳ್ಳಿ ಅವರು ಇಂದು ಸಂಜೆ 6.30 ಗಂಟೆ ಸುಮಾರಿಗೆ ತಮ್ಮ ಆಟೋದಲ್ಲಿ ಪ್ರಯಾಣಿಸುತ್ತಿದ್ದಾಗ, ಎದುರಿನಿಂದ ಬರುತ್ತಿದ್ದ ಕಾರಿನೊಂದಿಗೆ ಡಿಕ್ಕಿ ಸಂಭವಿಸಿದೆ. ಅಪಘಾತದ ತೀವ್ರತೆಗೆ ಮಂಜುನಾಥ್ ಅವರು ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ ಎಂದು ತಿಳಿದುಬಂದಿದೆ.
‎ಮೃತರಾದ ಮಂಜುನಾಥ್ ಅವರು ದಲಿತ ಸಂಘರ್ಷ ಸಮಿತಿಯ ಸಕ್ರಿಯ ಸದಸ್ಯರಾಗಿದ್ದರು. ಮೂಡಿಗೆರೆ ಮತ್ತು ಚಿಕ್ಕಮಗಳೂರು ಜಿಲ್ಲೆಯಲ್ಲಿ ದಲಿತ ಸಮುದಾಯದ ಹಕ್ಕುಗಳಿಗಾಗಿ ನಿರಂತರವಾಗಿ ಹೋರಾಡುತ್ತಿದ್ದರು. ಅವರ ದಿಟ್ಟತನ, ಸಂಘಟನಾ ಕೌಶಲ್ಯ ಮತ್ತು ಸಮಾಜಮುಖಿ ಚಿಂತನೆಗಳು ಅನೇಕ ಯುವಕರಿಗೆ ಪ್ರೇರಣೆಯಾಗಿದ್ದವು.
ಅವರ ನಿಧನಕ್ಕೆ ದಲಿತ ಸಂಘರ್ಷ ಸಮಿತಿಯ ರಾಜ್ಯಾಧ್ಯಕ್ಷರು ಸೇರಿದಂತೆ ಹಲವಾರು ಗಣ್ಯರು, ಮುಖಂಡರು ಹಾಗೂ ಸ್ಥಳೀಯರು ತೀವ್ರ ಸಂತಾಪ ಸೂಚಿಸಿದ್ದಾರೆ. ಈ ದುಃಖಕರ ಘಟನೆ ಸಮಸ್ತ ದಲಿತ ಸಮುದಾಯ ಮತ್ತು ಪ್ರಗತಿಪರ ಚಿಂತಕರಲ್ಲಿ ಆಘಾತ ಮೂಡಿಸಿದೆ. ಮೃತ ದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಲಾಗಿದೆ.
ಮೃತರು.ಪತ್ನಿ.ಒಬ್ಬ ಮಗ..ಇಬ್ಬರು ಹೆಣ್ಣು ಮಕ್ಕಳನ್ನು. ಆಪಾರ ಬಂದು ಬಳಗವನ್ನು.ಹಿತೈಷಿಗಳನ್ನು ಅಗಲಿದ್ದಾರೆ..
ನಾಳೆ ಸಂಜೆ 3.30ಕ್ಕೆ ಅಂತಿಮ ಸಂಸ್ಕಾರ ಲೊಕವಳ್ಳಿಯಲ್ಲಿ ನಡೆಯಲಿದೆ.

About Author

Leave a Reply

Your email address will not be published. Required fields are marked *

You may have missed