लाइव कैलेंडर

November 2026
M T W T F S S
 1
2345678
9101112131415
16171819202122
23242526272829
30  
15/11/2026

AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

ಭಾರತ ದೇವಾಲಯಗಳ ಬೀಡು, ಹಲವು ಆಚರಣೆಗಳ ನಾಡು…..

ಇಡೀ ಪ್ರಪಂಚದಲ್ಲಿ ಭಾರತವೊಂದೆ ನಾರಿದೇಶ, ಉಳಿದೆಲ್ಲ ದೇಶಗಳು ಪುರುಷ ದೇಶ ಎನ್ನುವ ಮಾತುಂಟು. ಹಾಗಾಗಿ ಇಲ್ಲಿ ಹೆಣ್ಣಿಗೆ ಹೆಣ್ತನಕ್ಕೆ ಸಂಬಂಧಪಟ್ಟ ಅನೇಕ ಆಚರಣೆಗಳು ರೂಡಿಗಳು ಸಂಪ್ರದಾಯಗಳು,ನದಿಯಂತೆ ನದಿ ತೀರದ ಪಯಣದಂತೆ, ಹೂವೊಂದರ ಗಿಡದ ನೆತ್ತಿಯನ್ನು ಮೆತ್ತಗೆ ಸವರಿದಂತೆ ಒಂದು ಭಾವನೆಯೊಂದಿಗೆ ನಂಬಿಕೆಯೊಂದಿಗೆ ಆಚರಣೆಯಲ್ಲಿವೆ. ಇಷ್ಟು ಮಾತ್ರವಲ್ಲ ಇದರ ಜೊತೆ ಜೊತೆಗೆ ಹೂವಿನ ಗಿಡದ ಬೇರನ್ನು ಕಿತ್ತು ಬಿಸಾಡುವಂತಹ ಹೆಣ್ಣಿಗೆ ಸಂಬಂಧಪಟ್ಟಂತಹ ಅಸಮಾನತೆಯ ಕ್ರೂರ ಶೋಷಣೆಗಳು ಕೂಡ ಈ ನೆಲದಲ್ಲಿ ಇನ್ನೂ ಇಂದಿಗೂ ನೆಲೆಗೊಂಡಿವೆ .

ಹೀಗಾಗಿ ಎಲ್ಲಿ ಹೆಣ್ಣನ್ನು ಗೌರವಿಸಲ್ಪಡುತ್ತಾರೋ ಅಲ್ಲಿ ದೇವತೆಗಳು ನೆಲೆಗೊಳ್ಳುತ್ತಾರೆ ಎನ್ನುತ್ತದೆ ಶಾಸ್ತ್ರ. ಶಾಸ್ತ್ರಗಳಲ್ಲಿ ಈ ರೀತಿ ಹೆಣ್ಣಿಗೆ ಪ್ರಾಶಸ್ತ್ಯವನ್ನು ಕೊಟ್ಟಂತೆ ವಾಸ್ತವದಲ್ಲಿ ಸ್ತ್ರೀ ಸಂಕುಲಕ್ಕೆ ಪ್ರಾಧಾನ್ಯತೆಯನ್ನು, ಸಮಾನತೆಯನ್ನು ನಿರೀಕ್ಷಿಸಿದ ಮಟ್ಟದಲ್ಲಿ ಈ ಭಾರತೀಯ ನೆಲ ಇನ್ನು ಕೊಟ್ಟಿಲ್ಲ.

ಇಂದು ಸ್ವರ್ಣಗೌರಿ ವ್ರತ. ವಿಶೇಷವಾಗಿ ತಾಯಂದಿರು ಸಹೋದರಿಯರು ಈ ಹಬ್ಬವನ್ನು ಸಂಭ್ರಮದಿಂದ ಬರಮಾಡಿಕೊಂಡು ಆಚರಿಸುತ್ತಾರೆ.

ಇಂತಹ ಸ್ವರ್ಣ ಗೌರಿ ಹಬ್ಬದ ಸಂಭ್ರಮಕ್ಕೆ, ಕರ್ನಾಟಕ ಸರ್ಕಾರದ ಮಾಜಿ ಮಂತ್ರಿಗಳಾದ ಮೋಟಮ್ಮನವರು ಹಾಲಿ ಮೂಡಿಗೆರೆ ವಿಧಾನಸಭಾ ಕ್ಷೇತ್ರದ ಶಾಸಕಿಯಾಗಿರುವ ಮಗಳು ನಯನ ಮೊಟಮ್ಮನವರಿಗೆ ಮೂಡಿಗೆರೆಯ ತಮ್ಮ ಮನೆಯಲ್ಲಿ ಬಾಗಿಣ ನೀಡಿ, ಮಡಿಲು ತುಂಬಿ ಹಾರೈಸಿದರು.
•••••••••
ಡಿ.ಎಂ.ಮಂಜುನಾಥಸ್ವಾಮಿ
ಅವಿನ್ ಟಿವಿ ಸುದ್ದಿಜಾಲ…. ✒️
ಚಿಕ್ಕಮಗಳೂರು

About Author

Leave a Reply

Your email address will not be published. Required fields are marked *

You may have missed