ಬರಿದಾದಷ್ಟು ಬದುಕು ಇಲ್ಲಿ ಹಗುರ……
1 min read
ಬರಿದಾದಷ್ಟು ಬದುಕು ಇಲ್ಲಿ ಹಗುರ……
ಈ ಬದುಕು ಶ್ರೀಮಂತಗೊಳ್ಳುವುದು ಅಂತರಿಕ ಐಸಿರಿಯಿಂದ ಮಾತ್ರ, ಇಲ್ಲಿ ನಾವು ಎಷ್ಟು ಬರಿದಾಗುತ್ತೇವೋ ಅಷ್ಟು ಹಗುರವಾಗುತ್ತೇವೆ, ಇದನ್ನು ಆಂತರಿಕ ಪಯಣ ಅಥವಾ ಇನ್ನರ್ ಜರ್ನಿ ಎನ್ನುತ್ತೇವೆ.
ಪ್ರಶಸ್ತಿ ಮತ್ತು ಸನ್ಮಾನಗಳನ್ನು ಕೇಳಿ ಪಡೆಯುವುದಕ್ಕು,ತಾನಾಗೆ ಲಭಿಸುವುದಕ್ಕೂ ವ್ಯತ್ಯಾಸವಿದೆ, ಪ್ರಶಸ್ತಿಯನ್ನು ಸನ್ಮಾನವನ್ನು ಸ್ವೀಕರಿಸುವವರು ಈ ವ್ಯತ್ಯಾಸದ ಗೆರೆಯನ್ನು ಅರ್ಥಮಾಡಿಕೊಳ್ಳದಿದ್ದರೆ ಒಡೆದ ಮಡಿಕೆಯಂತಾಗುತ್ತೇವೆ, ಒಂದು ವೇಳೆ ಈ ಅರ್ಥವನ್ನು ಅರ್ಥೈಸಿಕೊಂಡರೆ ಅದು ನಮಗೆ ಒಂದು ಶೋಭಾಯಮಾನವಾದ ಪೂರ್ಣ ಕುಂಭದಂತೆ ಗೋಚರಿಸಬಹುದು.
ಮಬ್ಬಾಗುತ್ತಿರುವ ಹಲವು ಸಂಗತಿಗಳಿಗೆ ಇಂಬು ಕೊಡುವ ದೃಷ್ಟಿಯಿಂದ, ಮಕ್ಕಳ ಸಾಹಿತ್ಯದಲ್ಲಿ ರಂಗ ಶಿಕ್ಷಣ ಕುರಿತು, ಓದು ಉಪನ್ಯಾಸ ಸಂವಾದ ಇತ್ತೀಚಿಗೆ ತರೀಕೆರೆ ಪಟ್ಟಣದ ಸದ್ವಿದ್ಯಾ ಮಂದಿರದ ಸಭಾಂಗಣದಲ್ಲಿ ನಡೆಯಿತು.
ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಶ್ರಾವಣ ಸಂಜೆ ಹೆಸರಿನಲ್ಲಿ ಈ ಕಾರ್ಯಕ್ರಮವನ್ನು ಅರ್ಥಪೂರ್ಣವಾಗಿ ಹಮ್ಮಿಕೊಂಡು, ವಿದ್ಯಾರ್ಥಿ ಯುವ ಜನರಿಗೆ ರಂಗ ಶಿಕ್ಷಣವನ್ನು ಕುರಿತು ಬೆಳಕು ಚೆಲ್ಲಿತು.
••••••••••••
ಡಿ.ಎಂ.ಮಂಜುನಾಥಸ್ವಾಮಿ
ಅವಿನ್ ಟಿವಿ ಸುದ್ದಿಜಾಲ… ✒️
ಚಿಕ್ಕಮಗಳೂರು

