ತುರ್ತು ಕರೆ: ಕಾವಲುಗಾರರೇ ಹಂತಕರಾದಾಗ, ನ್ಯಾಯಕ್ಕೆ ದನಿಯಾಗುವುದು ನಮ್ಮೆಲ್ಲರ ಕರ್ತವ್ಯ!..
1 min read
🚨 ತುರ್ತು ಕರೆ: ಕಾವಲುಗಾರರೇ ಹಂತಕರಾದಾಗ, ನ್ಯಾಯಕ್ಕೆ ದನಿಯಾಗುವುದು ನಮ್ಮೆಲ್ಲರ ಕರ್ತವ್ಯ! .
ಕಳಸ ತಾಲೂಕಿನ ಸಂಸೆ ಗ್ರಾಮದ ಅಮಾಯಕ ಆಟೋ ಚಾಲಕ ನಾಗೇಶ್ ಎಂಬ ದಲಿತ ಯುವಕನ ದುರಂತ ಸಾವಿಗೆ ಪೊಲೀಸರ ದೌರ್ಜನ್ಯವೇ ಕಾರಣ ಎಂದು ಆರೋಪಿಸಲಾಗಿದೆ. ನ್ಯಾಯಕ್ಕೆ ಧ್ವನಿಯಾಗಿರುವ ನಾಗೇಶ್ ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬುದು ಮತ್ತಷ್ಟು ನೋವಿನ ಸಂಗತಿ.
ಇದು ಕೇವಲ ಒಂದು ಆತ್ಮಹತ್ಯೆಯಲ್ಲ, ಪೊಲೀಸ್ ದಬ್ಬಾಳಿಕೆಗೆ ಬಲಿಯಾದ ನಾಗೇಶ್ ಅವರ ಸಾವಿಗೆ ನ್ಯಾಯ ಸಿಗಲೇಬೇಕು. ನಾಗೇಶ್ ಅವರ ಸಾವಿಗೆ ನೇರ ಕಾರಣರಾದ ಪೊಲೀಸ್ ಪೇದೆಯಾದ ಸಿದ್ದೇಶ್ ಮತ್ತು ಸಹಚರರಾದ ಸುರಕ್ಷಿತ್, ಶಶಿ ಮತ್ತು ಸುಳ್ಳು ಕೇಸು ದಾಖಲಿಸಿ ಆರೋಪಿಗಳಿಗೆ ನೆರವಾದ ಭ್ರಷ್ಟ ಪಿಎಸ್ಐ ಆದರ್ಶ್ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು.
ನಾಗೇಶ್ ಕುಟುಂಬಕ್ಕೆ ನ್ಯಾಯ ಒದಗಿಸುವುದು ನಮ್ಮೆಲ್ಲರ ಸ್ವಾಭಿಮಾನದ ಪ್ರಶ್ನೆ. ಇದಕ್ಕಾಗಿ ಕರ್ನಾಟಕದಾದ್ಯಂತ ಇರುವ ಎಲ್ಲಾ ಸಂಘಟನೆಗಳು ಒಗ್ಗಟ್ಟಾಗಿ ಹೋರಾಡಬೇಕಿದೆ. ಈ ಅನ್ಯಾಯದ ವಿರುದ್ಧ ಸಿಡಿದೆದ್ದು ನಿಲ್ಲುವ ತುರ್ತು ಪರಿಸ್ಥಿತಿ ಬಂದಿದೆ.
ನಮ್ಮ ಕರ್ನಾಟಕ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ) ದಲಿತ ಮಹಿಳಾ ಒಕ್ಕೂಟವು ಈ ಅನ್ಯಾಯದ ವಿರುದ್ಧ ಹೋರಾಟಕ್ಕೆ ಕರೆ ನೀಡಿದೆ. ನ್ಯಾಯಕ್ಕಾಗಿ ನಿಲ್ಲುವ ಪ್ರತಿಯೊಬ್ಬರೂ ನಮ್ಮೊಂದಿಗೆ ಕೈಜೋಡಿಸಿ. ತಡ ಮಾಡಬೇಡಿ, ಈಗಲೇ ಕಾರ್ಯಪ್ರವೃತ್ತರಾಗಿ!
✊ ನಾಗೇಶ್ ಅವರಿಗೆ ನ್ಯಾಯ ಸಿಗುವವರೆಗೂ ನಾವು ಸುಮ್ಮನಿರುವುದಿಲ್ಲ!
ಕರೆ ನೀಡಿದವರು:
ಆಶಾ ಸಂತೋಷ್,
ರಾಜ್ಯ ಸಮಿತಿ ಸದಸ್ಯರು,
ಕರ್ನಾಟಕ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ) ದಲಿತ ಮಹಿಳಾ ಒಕ್ಕೂಟ, ಮೂಡಿಗೆರೆ.

