AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

ಧಾರ್ಮಿಕ ಮತ್ತು ವೈಜ್ಞಾನಿಕವಾಗಿ ವಿಶಿಷ್ಟ ಸ್ಥಾನ ಪಡೆದ ತುಳಸಿ ಮಾತೆ… #avintvcom

1 min read
Featured Video Play Icon

ಧಾರ್ಮಿಕ ಮತ್ತು ವೈಜ್ಞಾನಿಕವಾಗಿ ವಿಶಿಷ್ಟ ಸ್ಥಾನ ಪಡೆದ ತುಳಸಿ ಮಾತೆ…
ಸಮಸ್ತ ಹಿಂದೂಗಳ ಪ್ರತಿ ಮನೆಯಲ್ಲಿ ತುಳಸಿ ಗಿಡ ಇರುವುದು ಸರ್ವೇ ಸಾಮಾನ್ಯ. ತುಳಸಿ ಗಿಡಕ್ಕೆ ತನ್ನದೇ ಆದ ಇತಿಹಾಸವಿದೆ. ಪ್ರತಿ ವರ್ಷ ಕಾರ್ತಿಕ ಮಾಸದ ಶುಕ್ಲಪಕ್ಷದ ದ್ವಾದಶಿಯಂದು ತುಳಸಿ ವಿವಾಹ ಮಾಡುವ ಪರಿಪಾಠ ನಮ್ಮಲ್ಲಿ ಮೊದಲಿನಿಂದಲೂ ನಡೆದುಕೊಂಡು ಬಂದಿದೆ.
ತುಳಸಿ ಹಬ್ಬದಂದು ತುಳಸಿ ಕಟ್ಟೆಯನ್ನು ಸ್ವಚ್ಛಗೊಳಿಸಿ ಚಿಕ್ಕ ಚಿಕ್ಕ ಮಂಟಪಗಳಿಂದ ಅಲಂಕರಿಸಿ, ರಂಗೋಲಿ ಬಿಡಿಸಿ, ಹಣತೆ ಬೆಳಗಿಸಿ, ಮಾವಿನ ತೋರಣ ಕಟ್ಟಿ, ಪಕ್ಕದಲ್ಲಿ ನೆಲ್ಲಿ ಗಿಡದ ಟೊಂಗೆಯನ್ನು ಇಟ್ಟು ವಿವಾಹ ಮಾಡುವ ಪದ್ಧತಿಯನ್ನು ನಡೆಸಿಕೊಂಡು ಬಂದಿದ್ದೇವೆ.
ಪ್ರತಿ ಮಹಿಳೆಯೂ ತನ್ನ ಪತಿಯ ಆಯುಷ್ಯ ವೃದ್ಧಿಗೆ ಮತ್ತು ಪತಿಯ ಒಳಿತಿಗಾಗಿ ಪೂಜಿಸುವುದು ಸಂಪ್ರದಾಯ.
ಕಾರ್ತಿಕ ಮಾಸದಲ್ಲಿ ನೆಲ್ಲಿ ಗಿಡದಲ್ಲಿ ವಿಷ್ಣುವಿನೊಂದಿಗೆ ಇರುವನೆಂಬ ನಂಬಿಕೆ ಇರುವುದರಿಂದ ದ್ವಾದಶಿಯಂದು ವಿಷ್ಣುವು ನೊಂದಿಗೆ ತುಳಸಿಯ ವಿವಾಹ ಕಾರ್ಯಕ್ರಮವನ್ನು ಮಾಡುತ್ತಾ ಬಂದಿದ್ದೇವೆ.
ಪುರಾಣಗಳ ಕಾಲದಿಂದಲೂ ಮತ್ತು ವೈಜ್ಞಾನಿಕವಾಗಿ ತುಳಸಿ ಗಿಡಕ್ಕೆ ವಿಶೇಷವಾದ ಸ್ಥಾನವಿದೆ. ಅಂತಹ ಪವಿತ್ರ ತುಳಸಿ ಮಾತೆಯ ಪೂಜಾ ಕಾರ್ಯಕ್ರಮದಲ್ಲಿ ತೊಡಗುವ ಎಲ್ಲಾ ಬಾಂಧವರಿಗೂ ಶುಭವಾಗಲಿ ಎಂದು ಭಗವಂತನಲ್ಲಿ ಪ್ರಾರ್ಥಿಸುತ್ತೇನೆ. ಶುಭ ರಾತ್ರಿ

About Author