AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

ಚಡಚಣದಲ್ಲಿ ಅಂಗನವಾಡಿ ನೌಕರರ ಸಂಘ ಹಾಗೂ ಅಖಿಲ ಭಾರತ ಅಂಗನವಾಡಿ ಕಾರ್ಯಕರ್ತೆಯರು ಪ್ರತಿಭಟನೆ #avintvcom

1 min read
Featured Video Play Icon

ಅಂಗನವಾಡಿ ನೌಕರರ ಪ್ರತಿಭಟನೆ: ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಮನವಿ
ಚಡಚಣ: ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಚಡಚಣದಲ್ಲಿ ಅಂಗನವಾಡಿ ನೌಕರರ ಸಂಘ ಹಾಗೂ ಅಖಿಲ ಭಾರತ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಒಕ್ಕೂಟ (ಸಿಐಟಿಯು) ಆಶ್ರಯದಲ್ಲಿ ಅಂಗನವಾಡಿ ಕಾರ್ಯರ್ತೆಯಯರು ಹಾಗೂ ಸಹಾಯಕಿಯರು ಗುರುವಾರ ಪ್ರತಿಭಟನೆ ನಡೆಸಿ ತಹಶಿಲ್ದಾರ ಮೂಲಕ ಪ್ರಧಾನ ಮಂತ್ರಿಗಳಿಗೆ ಮನವಿ ಸಲ್ಲಿಸಿದರು
ಬೆಳಿಗ್ಗೆ ಸಿಡಿಪಿಓ ಕಚೇರಿ ಮುಂಭಾಗದಲ್ಲಿ ಜಮಾಯಿಸಿದ ನೌಕರರು, ಪಟ್ಟಣದ ಪ್ರಮೂಖ ಬೀದಿಯಲ್ಲಿ ಪಾದಯಾತ್ರೆ ನಡೆಸುತ್ತ. ರಾಜ್ಯ ಹಾಗೂ ಕೇಂದ್ರ ಸರ್ಕಾರಗಳ ವಿರುದ್ಧ ಗೋಷಣೆಗಳನ್ನು ಕೂಗಿದರು.ನಂತರ ,ತಹಶಿಲ್ದಾರ ಕಚೇರಿಗೆ ತಲುಪಿ,ಮುಂಭಾಗದಲ್ಲಿ ಧರಣಿ ಸತ್ಯಾಗ್ರಹ ನಡೆಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಸಿಐಟಿಯು ತಾಲ್ಲೂಕು ಅಧ್ಯಕ್ಷೆ ಅಶ್ವಿನನಿ ತಳವಾರ,ಅಂಗನವಾಡಿ ನೌಕರರಿಗೆ ಕನಿಷ್ಠ ರೂ 21 ಸಾವಿರ ವೇತನ ನಿಗದಿಗೊಳಿಸಿ,ಖಾಯ: ಸರಕಾರಿ ನೌಕರರು ಎಂದು ಪರಿಗಣಿಸಿ.ಹೊಸ ಶಿಕ್ಷಣ ನೀತಿಯಿಂದ ಅಂಗನವಾಡಿ ಕೇಂದ್ರಗಳನ್ನು ರಕ್ಷಿಸಿ.ನಿವೃತ್ ಕಾರ್ಯಕರ್ತೆಯರಿಗೆ ವೇತನ ಬಿಡುಗಡೆಗೊಳಿಸಿ ಎನ್.ಪಿ.ಎಸ್ ಲೈಟ್ ವಂತಿಗೆಯನ್ನು ಶೇ.10 ರಷ್ಟು ಹೆಚ್ಚಿಸಿ.ಕರೋನ ಸಂದರ್ಭದಲ್ಲಿ ಮೃತರಾದ 26 ಜನ ಅಂಗನವಾಡಿ ನೌಕರರ ಮಕ್ಕಳಿಗೆ ಅನುಕಂಪದ ಆಧಾರದ ಮೇಲೆ ಕೆಲಸ ನೀಡಿ ಹಾಗೂ ಕನಿಷ್ಠ ರೂ.5 ಲಕ್ಷ ಪರಿಹಾರ ನೀಡಿ ಎಂದು ಆಗ್ರಹಿಸಿದರು.
ಸಂಘದ ತಾಲ್ಲೂಕು ಗೌರವಾಧ್ಯಕ್ಷೆ ಲೈಲಾಬಿ ನದಾಫ,ಕಾರ್ಯದರ್ಶಿ ಶೋಭಾ ಕಬಾಡೆ,ಖಜಾಂಚಿ ಉಷಾ ಕುಲಕರ್ಣಿ ಮುಂತಾದವರು ಮಾತನಾಡಿ,ನೌಕರರ ರೈತ ವಿರೋಧಿ ಕಾನೂನು ,ಕಾರ್ಮಿಕ ವಿರೋಧಿ ಸಂಹಿತೆಗಳನ್ನು ಹಿಂಪಡೆಯಬೇಕು.ಅಂಗನವಾಡಿ ನೌಕರರ ಬೇಡಿಕೆಗಳನ್ನು ಶೀಘ್ರ ಪುರೈಸಬೇಕು ಎಂದು ಒತ್ತಾಯಿಸಿದರು.
ನಂತರ ತಹಶಿಲ್ದಾರ ಸಿಬ್ಬಂದಿ ಮೂಲಕ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಒಕ್ಕೂಟದ ಸದಸ್ಯೆಯರಾದ ಸಾವಿತ್ರಿ ಬೈರಗೊಂಡ,ಸತ್ಯಮ್ಮ ಹಡಪದ,ನೀಲಮ್ಮ ಘಟಡಶೆಟ್ಟಿ,ಭೌರಮ್ಮ ಬಿರಾದಾರ,ಸಂಗೀತಾ ಹೋಕಳೆ,ಪಾರ್ವತಿ ಬೆನಕನಳ್ಳಿ ಸೇರಿದಂತೆ ತಾಲ್ಲೂಕಿನ ಅಂಗನವಾಡಿ,ಮಿನಿ ಅಂಗನವಾಡಿ ನೌಕರರು ನೂರಾರು ಸಂಖ್ಯೆಯಲ್ಲಿ ಪಾಲ್ಗೊಂಡಿದರು.ವರದಿ:ಶ್ರೀಕಾಂತ ಬಗಲಿ

About Author