ಕಳಸದಲ್ಲಿ ಜೈನ ಸಾಹಿತ್ಯ ಸಮ್ಮೇಳನ….
1 min read
ಕಳಸದಲ್ಲಿ ಜೈನ ಸಾಹಿತ್ಯ ಸಮ್ಮೇಳನ….
ಕಳಸ:ಪಟ್ಟಣದಲ್ಲಿ ಪ್ರಥಮ ರಾಜ್ಯ ಜೈನ ಸಾಹಿತ್ಯ ಸಮ್ಮೇಳನ ಮೇ.18 ರಂದು ನಡೆಯಲಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಸೂರಿ ಶ್ರೀನಿವಾಸ್ ತಿಳಿಸಿದ್ದಾರೆ.
ಕಳಸದ ಕೆಳಂಗಡಿಯಲ್ಲಿರುವ ಶ್ರೀ ಚಂದ್ರನಾಥ ಸ್ವಾಮಿ ಬಸದಿಯ ಪಂಚಕಲ್ಯಾಣ ಹಾಗೂ ನೂತನ ಬಸದಿಯ ಲೋಕಾರ್ಪಣೆ ಮತ್ತು ಧಾರ್ಮಿಕ ಕಾರ್ಯಕ್ರಮಗಳು ಮೇ.18 ರಿಂದ 22ರವರೆಗೆ ನಡೆಯಲಿದ್ದು, ಮೊದಲ ದಿನ ಮೇ.18 ರಂದು ಒಂದು ದಿನ ಅದೇ ನೂತನ ಬಸದಿಯ ಪಕ್ಕದ ಮಹಾವೀರಭವನದಲ್ಲಿ ರಾಜ್ಯ ಮಟ್ಟದ ಪ್ರಪ್ರಥಮ ಜೈನ ಸಾಹಿತ್ಯ ಸಮ್ಮೇಳನವನ್ನು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಕಳಸ ಮತ್ತು ಚಂದ್ರನಾಥಸ್ವಾಮಿ ಬಸದಿ ಜೀರ್ಣೋದ್ದಾರ ಸಮಿತಿ ಆಶ್ರಯದಲ್ಲಿ ನಡೆಸಲು ಸ್ವಾಗತ ಸಮಿತಿ ಉದ್ದೇಶಿಸಿದೆ ಎಂದು ಹೇಳಿದರು.
ಕಳಸದ ಧಾರ್ಮಿಕ ಸೇವಾತತ್ಪರಾಗಿರುವ ಕೆ.ಸಿ ಧರಣೇಂದ್ರಯ್ಯ ಅವರು ಸ್ವಾಗತ ಸಮಿತಿಯ ಅಧ್ಯಕ್ಷರಾಗಿದ್ದಾರೆ. ಅಂದು ಬೆಳಿಗ್ಗೆ ಧ್ವಜಾರೋಹಣ ನಂತರ ಸಮ್ಮೇಳನ ಅಧ್ಯಕ್ಷರ ಮೆರವಣಿಗೆ, ಉದ್ಘಾಟನಾ ಕಾರ್ಯಕ್ರಮ ನಂತರ ಕಳಸಸೀಮೆ ಇತಿಹಾಸ ಕುರಿತ ಗೋಷ್ಠಿ ಮತ್ತು ಕವಿಗೋಷ್ಟಿಗಳು ನಡೆಯಲಿದ್ದು ಉದ್ಘಾಟನಾ ಸಮಾರಂಭದಲ್ಲಿ ಹಲವಾರು ಪುಸ್ತಕಗಳ ಬಿಡುಗಡೆ ಕಾರ್ಯಕ್ರಮವಿದೆ ಎಂದರು.
ಸಂಜೆ ಸಮಾರೋಪ ಸಮಾರಂಭ ನಡೆಯಲಿದ್ದು ಸಮ್ಮೇಳನದಲ್ಲಿ ನಾಡಿನ ಹಲವಾರು ಜೈನಭಟ್ಟಾರಕ ವಸ್ವಾಮಿಗಳು ಹಾಗೂ ಸಾಹಿತಿಗಳು ಮತ್ತು ಸಾಹಿತ್ಯ ಆಸಕ್ತರು ಭಾಗವಹಿಸಲಿದ್ದಾರೆ. ಇದೇ ಸಂದರ್ಭದಲ್ಲಿ ರಾಜ್ಯದ ಮೂವರಿಗೆ ಸಾಹಿತ್ಯ ಸಿರಿ ಪ್ರಶಸ್ತಿ ಮತ್ತು ಜಿಲ್ಲೆಯ ಸಾಧಕರನ್ನು ಗುರುತಿಸಿ ಗೌರವಿಸಲಾಗುವುದು ಎಂದು ತಿಳಿಸಿದ್ದಾರೆ.