AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

ಇಂದು ಬೆಂಗಳೂರಿನ ಹೈನ್ಸ್ ರಸ್ತೆಯಲ್ಲಿ ಬ್ಯಾಂಕ್ ನ ನೂತನ ಶಾಖೆಯನ್ನು ರಾಜ್ಯ ಮಹಿಳಾ ಮತ್ತು ಮಕ್ಕಳ ಕಲ್ಯಾಣ #avintvcom

1 min read
Featured Video Play Icon

ಬೆಂಗಳೂರು
“ಆರ್ಥಿಕಾಭಿವೃದ್ಧಿಯಲ್ಲಿ ಬ್ಯಾಂಕ್ ಗಳ ಪಾತ್ರ ಅಪಾರ”

ಇಂದು ಬೆಂಗಳೂರಿನ ಹೈನ್ಸ್ ರಸ್ತೆಯಲ್ಲಿ, ಯೂನಿಯನ್ ಬ್ಯಾಂಕ್ ನ ನೂತನ ಶಾಖೆಯನ್ನು ರಾಜ್ಯ ಮಹಿಳಾ ಮತ್ತು ಮಕ್ಕಳ ಕಲ್ಯಾಣ, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಸಚಿವರಾದ ಸೌ. ಶಶಿಕಲಾ ಜೊಲ್ಲೆ ಜಿ, ಹಾಗೂ ಚಿಕ್ಕೋಡಿ ಲೋಕಸಭೆ ಸಂಸದರಾದ ಮಾನ್ಯ ಶ್ರೀ ಅಣ್ಣಾಸಾಹೇಬ ಜೊಲ್ಲೆ ಜಿ ಯವರು ಉದ್ಘಾಟಿಸಿ, ಸತ್ಕಾರ ಸ್ವೀಕರಿಸಿ, ಶುಭಕೋರಿ, ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು.
ದೇಶದ ಆರ್ಥಿಕಾಭಿವೃದ್ಧಿಗೆ ಬ್ಯಾಂಕ್ ಗಳು ನೀಡುತ್ತಿರುವ ಕೊಡುಗೆ ಮಹತ್ತರವಾಗಿದೆ. ಮಾನ್ಯ ಪ್ರಧಾನಮಂತ್ರಿಗಳಾದ ಶ್ರೀ ನರೇಂದ್ರ ಮೋದಿ ಜಿ ಅವರ ಮಹತ್ವಕಾಂಕ್ಷೆಯ ಆತ್ಮನಿರ್ಭರ ಭಾರತ ಹಾಗೂ ಪ್ರಧಾನಮಂತ್ರಿ ಸ್ವನಿಧಿ (ಪಿಎಂ ಸ್ಟ್ರೀಟ್ ವೆಂಡರ್ಸ್ ಆತ್ಮ ನಿರ್ಭರ್ ನಿಧಿ) ಯೋಜನೆಗಳನ್ನು ಫಲಾನುಭವಿಗಳಿಗೆ ತಲುಪಿಸುವಲ್ಲಿ ಯೂನಿಯನ್ ಬ್ಯಾಂಕ್ ನ ಕಾರ್ಯ ಶ್ಲಾಘನೀಯ. ಈ ಬ್ಯಾಂಕ್ ಒಳ್ಳೆಯ ರೀತಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಗ್ರಾಹಕರಿಗೆ ಉತ್ತಮ ಸೇವಾ-ಸೌಲಭ್ಯವನ್ನು ಒದಗಿಸುತ್ತಿದೆ. ಇದರಿಂದ ಗ್ರಾಮೀಣ ಭಾಗದ ಜನರಿಗೆ ಬಹಳ ಪ್ರಯೋಜನಕಾರಿಯಾಗುತ್ತಿದೆ ಎಂದು ನುಡಿದರು. ಇದೇ ಸಂದರ್ಭದಲ್ಲಿ ಪ್ರಧಾನಮಂತ್ರಿ ಸ್ವನಿಧಿ (ಪಿಎಂ ಸ್ಟ್ರೀಟ್ ವೆಂಡರ್ಸ್ ಆತ್ಮ ನಿರ್ಭರ್ ನಿಧಿ) ಯೋಜನೆಯಡಿಯಲ್ಲಿ ಬೀದಿ ಬದಿ ವ್ಯಾಪಾರಸ್ಥರಿಗೆ ಚೆಕ್ ವಿತರಿಸಿದರು.
ಸಮಾರಂಭದಲ್ಲಿ ಪ್ರಧಾನ ವ್ಯವಸ್ಥಾಪಕರಾದ ಶ್ರೀ ಅಲೋಕ್ ಕುಮಾರ್, ಬ್ಯಾಂಕ್ ಮ್ಯಾನೇಜರ್ ಶ್ರೀ ಶ್ರೀನಿವಾಸ ರಾವ್ ಹಾಗೂ ಗಣ್ಯರು ಉಪಸ್ಥಿತರಿದ್ದರು.
बेंगळूरू
“आर्थिक विकासात बँकांची भूमिका अपार”
आज बेंगळूरुच्या हैन्स रोड येथे युनियन बँकेच्या नवीन शाखेची राज्य महिला व बालविकास विभाग,अपंगत्व आणि ज्येष्ठ नागरिकांचे सशक्तिकरण विभागाच्या मंत्री सौ. शशिकला जोल्ले जी(वहिनी) आणि चिक्कोडी लोकसभेचे खासदार माननीय श्री अण्णासाहेब जोल्ले,जी यांनी उद्घाटन करून, सत्कार स्वीकारून, शुभेच्छा देऊन, कार्यक्रमास उद्देशून संबोधित केले.
देशाच्या आर्थिक प्रगतीत बँकांचे योगदान मोठे आहे. पंतप्रधान श्री नरेंद्र मोदी जी, यांच्या महत्वाकांक्षी आत्मनिर्भर भारत आणि पंतप्रधान स्वनिधी (पीएम स्ट्रीट वेंडर्स आत्म निर्भर फंड) लाभार्थ्यांपर्यंत योजनांना पोचविण्याचे युनियन बँकेचे काम कौतुकास्पद आहे. ही बँक चांगली कामगिरी करीत असून ग्राहकांना चांगली सेवा देत आहे. यासाठी ग्रामीण भागातील लोकांसाठी खूप फायदेशीर ठरेल असे सांगितले. याच दरम्यान पंतप्रधान स्वनिधी(पीएम स्ट्रीट वेंडर्स आत्म निर्भर फंड) योजनेंतर्गत भाजीपाला विक्रेत्यांना धनादेश पत्र वाटप केले.
समारंभात प्रधान व्यवस्थापक श्री अलोक कुमार, बँक मॅनेजर श्री श्रीनिवास राव आणि मान्यवर उपस्थित होते.

About Author