
ಮಾನ್ಯ ಪೋಲೀಸ್ ಅಧೀಕ್ಷಕರು.
ಚಿಕ್ಕಮಗಳೂರು.
ಚಿಕ್ಕಮಗಳೂರು ಜಿಲ್ಲೆ
- ಮಾನ್ಯರೇ,
ನನ್ನ ಹೆಸರು ಎಂ.ಮಂಜುನಾಥ, ವಯಸ್ಸು 76 ವರ್ಷ, ನಾನು ಭಗೀರಥ ಎಸ್ಟೇಟ್ ಬಿಳ್ಳೂರಿನಲ್ಲಿ ಸುಮಾರು 72 ವಯಸ್ಸಿನ ಪತ್ನಿ ವಾಸವಾಗಿದ್ದೇನೆ. ದಿನಾಂಕ 04-02-2025 ರಂದು ಪಿ.ಪಿ.ಪುಟ್ಟಸ್ವಾಮಿಗೌಡ ಮತ್ತು 10-15 ಜನರ ಗುಂಪು ನಾನು ಕಾಫಿ ಕಣದಲ್ಲಿ ಕಾಪಿ ಹರಡುತ್ತಿದ್ದಾಗ ಕಾಫಿ ಕಣಕ್ಕೆ ನುಗ್ಗಿ ನನ್ನ ಮೇಲೆ ಹಲ್ಲೆ ಮಾಡಿದ ದವಡೆ ಮೂಳೆ ಮತ್ತು ಮೂಗಿನ ಮೂಳೆಗಳು ಹಾನಿಗೆ ಒಳಗಾಗುತ್ತವೆ. ಇದಕ್ಕೆ ಪೂರಕವಾದ ಪ್ರಶ್ನೆಗಳು ಕೆಳಕಂಡಂತೆ ಇರುತ್ತವೆ.
1. 02-02-2025. ರಂದು ನನ್ನ ತೋಟಕ್ಕೆ ಪೊಲೀಸ್ ಜೀಪಿನಲ್ಲಿ ಬಂದ ಪೊಲೀಸ್ ಅಧಿಕಾರಿಗಳು .ಏಕೆ ಬಂದಿದ್ದರು?
2. ದಿನಾಂಕ 02-02-2025 ರಂದು ಒಂದು ಗಂಟೆ ಐವತ್ತೆಂಟು ನಿಮಿಷದಲ್ಲಿ ಸಬ್ ಇನ್ ಸ್ಪೆಕ್ಷರು ದೂರವಾಣಿ ಮೂಲಕ ನನ್ನ ತೋಟಕ್ಕೆ ಬಂದ ಪೋಲೀಸ್ ಬಗ್ಗೆ ನನಗೆ ನೀಡಿದ ಮಾಹಿತಿ ಏನು?
3. ಬಣಕಲ್ ಠಾಣೆಯಲ್ಲಿ ಸಿ.ಸಿ.ಕ್ಯಾಮರ ಅಳವಡಿಕೆಯಾಗಿದೆಯೇ?
4. ದಿನಾಂಕ 03-02-2025 ರಂದು ನನ್ನ ತೋಟದಲ್ಲಿ ಕಾಫಿ ಗಿಡದ ಬಗ್ಗೆ ನೀಡಿದ ದೂರನ್ನು ಠಾಣೆಯಲ್ಲಿ ಏಕೆ ದಾಖಲಿಸಿಕೊಂಡು ಕ್ರಮ ವಹಿಸಿಲ್ಲ?
5. ದಿನಾಂಕ 03-02-2025 ರಂದು ನಾನು ಬಣಕಲ್ ಠಾಣೆಗೆ ಭೇಟಿ ನೀಡಿದ್ದನ್ನು ಸಿ.ಸಿ.ಕ್ಯಾಮರ ದಾಖಲಿಸಿದ್ದಾರೆಯೇ?
6. ಬಣಕಲ್ ಠಾಣೆಯಲ್ಲಿ ಸಂದರ್ಶಕರ ರಿಜಿಸ್ಟರ್ ನಿರ್ವಹಣೆ ಮಾಡಲಾಗುತ್ತಿದೆಯೇ?
7. ದಿನಾಂಕ 03-02-2025 ರಂದು ನನ್ನ ದೂರನ್ನು ಸ್ವೀಕರಿಸಿಕೊಂಡು ಪೋಲೀಸರು ಮುಂಜಾಗ್ರತೆ ಕ್ರಮ ವಹಿಸಿದ್ದಾರೆ ದಿನಾಂಕ 04-02-2025 ರ ಆ ಕೃತ್ಯ ನಡೆಯಲು, ತಡೆಯಬಹುದಾಗಿತ್ತು ಎಂದು ಹೇಳಬಹುದೇ?
8. ದಿನಾಂಕ 02-02-2025 ರಂದು ಪೋಲೀಸರು ನನ್ನ ತೋಟಕ್ಕೆ ಬಂದಂತೆ 03-02-2025 ರಂದು ನನ್ನ ತೋಟಕ್ಕೆ ಬಂದು ಗಿಡ ಕಡಿದ ಬಗ್ಗೆ ಸತ್ಯಾಂಶ ತಿಳಿದುಕೊಳ್ಳುವ ಕರ್ತವ್ಯ ಏಕೆ ಮಾಡಲಿಲ್ಲ?
9. ಮೂಗಿನ ಮತ್ತು ದವಡೆ ಮೂಳೆ ಮುರಿದಿರುವ ಪ್ರಕರಣಗಳಲ್ಲಿ ಪೊಲೀಸರು ಯಾವ ಸೆಕ್ಷನ್ ಅಡಿ ಪ್ರಕರಣ ದಾಖಲಿಸುತ್ತಾರೆ? ಕತ್ತಿಯಿಂದ ಹಲ್ಲೆ ಮಾಡಿದರೆ ಯಾವ ಸೆಕ್ಷನ್ ದಾಖಲಿಸಬೇಕು.
10. ದಿನಾಂಕ 12-02-2025 ರಂದು ನನ್ನ ಮನೆಯ ಸಿ.ಸಿ.ಸಿ.ಕ್ಯಾಮರಾದಲ್ಲಿ ದಾಖಲಾಗಿರುವ ಹಲ್ಲೆ ದೃಶ್ಯಗಳ ದಾಖಲೆಯನ್ನು ಬಣಕಲ್ ಠಾಣೆಯಲ್ಲಿ ಏಕೆ ದಾಖಲಿಸಲಾಗಿದೆ ಸ್ವೀಕರಿಸಲಿಲ್ಲ. ಭೇಟಿಯನ್ನು ಏಕೆ ದಾಖಲಿಸಿಕೊಂಡಿಲ್ಲ.
11. ದಿನಾಂಕ 03-02-2025 ರಂದು ಮತ್ತು ದಿನಾಂಕ 12-02-2025 ರಂದು ನಾನು ಬಣಕಲ್ ಠಾಣೆಗೆ ಬಂದಿಲ್ಲ, ದೂರು ನೀಡಿಲ್ಲ ಎಂಬ ಪೋಲೀಸರ ವಾದ ಸರಿಯೇ?
ನನ್ನ ಎಲ್ಲಾ 11 ಪ್ರಶ್ನೆಗಳ ಬಗ್ಗೆ ತನಿಖೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳಲು ಧರಣಿ ಸತ್ಯಾಗ್ರಹದ ಮೂಲಕ ನೋಡುತ್ತೇನೆ.
2: 17-02-2025
ಚಿಕ್ಕಮಗಳೂರು.
( ಶ್ರೀ ಎಂ. ಮಂಜುನಾಥ್ ಭಗೀರಥ ಎಸ್ಟೇಟ್ ಬಿಳ್ಳೂರು ವಾಸಿ ಮತ್ತು ಅಂಚೆ, ಮೂಡಿಗೆರೆ ತಾಲ್ಲೂಕು.
9448555639