ಮಲೆನಾಡಿಗೆ ಕೀರ್ತಿ ತಂದ ವಿದ್ವಾನ್.
1 min read![](https://avintv.com/wp-content/uploads/2025/02/Screenshot_20250209_193706-1024x975.jpg)
ಮಲೆನಾಡಿಗೆ ಕೀರ್ತಿ ತಂದ ವಿದ್ವಾನ್.
ಸಿಎ ಪರೀಕ್ಷೆಯಲ್ಲಿ ಅತ್ಯುನ್ನತ ಶ್ರೇಣಿಯಲ್ಲಿ ತೇರ್ಗಡೆ ; ಕಾಫಿನಾಡು ವಿದ್ಯಾರ್ಥಿಯ ಸಾಧನೆ.
ಕಠಿಣವಾದ ಚಾರ್ಟಡ್್ರ ಅಕೌಂಟೆಂಟ್ (ಸಿಎ) ಪ್ರವೇಶ ಪರೀಕ್ಷೆಯಲ್ಲಿ ಪ್ರಥಮ ಪ್ರಯತ್ನದಲ್ಲಿಯೇ ಅತ್ಯುನ್ನತ ಶ್ರೇಣಿಯಲ್ಲಿ ತೇರ್ಗಡೆ ಹೊಂದಿ ಕಾಫಿನಾಡಿನ ವಿದ್ಯಾರ್ಥಿ ಸಾಧನೆ ಮಾಡಿದ್ದಾರೆ.
ಬೆಂಗಳೂರಿನ ಪ್ರತಿಷ್ಟಿತ ಕ್ರೈಸ್ಟ್ ಕಾಲೇಜ್ ನಲ್ಲಿ ಪದವಿ ವ್ಯಾಸಂಗ ಮಾಡುತ್ತಿರುವ ವಿದ್ವಾನ್ ಈ ಸಾಧನೆ ಮಾಡಿರುವ ವಿದ್ಯಾರ್ಥಿ.
ವಿದ್ವಾನ್ ಮೂಡಿಗೆರೆ ತಾಲ್ಲೂಕಿನ ಜಕ್ಕಳಿ ಗ್ರಾಮದ ಜೆ.ಪಿ. ವಿರೇಶ್ ಮತ್ತು ಶ್ರೀಮತಿ ಶಿಲ್ಪಾ ದಂಪತಿಗಳ ಪುತ್ರ. ವೀರೇಶ್ ಅವರು ಬೆಂಗಳೂರಿನಲ್ಲಿ ಉದ್ಯಮಿಯಾಗಿದ್ದು, ಮೂಡಿಗೆರೆ ತಾಲ್ಲೂಕಿನ ದಾರದಹಳ್ಳಿ ಸಮೀಪ ಕಡಿದಾಳು ಗ್ರಾಮದ ವೀರಭದ್ರೇಶ್ವರ ಕಾಫಿ ಎಸ್ಟೇಟ್ ಮಾಲೀಕರಾಗಿದ್ದಾರೆ. ಇವರು ವಿವಿಧ ಸಂಘ ಸಂಸ್ಥೆಗಳ ಮೂಲಕ ಸಮಾಜಸೇವೆಯಲ್ಲಿಯೂ ತಮ್ಮನ್ನು ತೊಡಗಿಸಿಕೊಂಡಿರುತ್ತಾರೆ.
ವಿರೇಶ್ ಶಿಲ್ಪಾ ದಂಪತಿಗಳ ಪುತ್ರ ವಿದ್ವಾನ್ ತನ್ನ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣವನ್ನು ಬೆಂಗಳೂರಿನ ದೆಹಲಿ ಪಬ್ಲಿಕ್ ಸ್ಕೂಲ್, ಅರ್ಥ್ಯ ಅಕಾಡೆಮಿಗಳಲ್ಲಿ ಪೂರೈಸಿದ್ದಾರೆ.
en The Institute of Chartered accountant of India e ជ ರಾಷ್ಟ್ರಮಟ್ಟದ ಸಿಎ ಪ್ರವೇಶ ಪರೀಕ್ಷೆಯಲ್ಲಿ ಪ್ರಥಮ ಪ್ರಯತ್ನದಲ್ಲಿಯೇ ಅತ್ಯುನ್ನತ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ್ದಾರೆ. ವಿದ್ವಾನ್ ಸಾಧನೆಗೆ ಪೋಷಕರು, ಶಿಕ್ಷಕರು ಸಂತಸ ವ್ಯಕ್ತಪಡಿಸಿದ್ದಾರೆ.