ಕರ್ನಾಟಕ ರಾಜ್ಯ ಎಸ್ಡಿಎಂಸಿ ಸಮನ್ವಯ ಕೇಂದ್ರ ವೇದಿಕೆ(ರಿ)
1 min readಜನವರಿ 26 ಗಣತಂತ್ರ ದಿವಸ.ಇಂತಹ ರಾಷ್ಟ್ರೀಯ ಹಬ್ಬದ ಯಾವುದೇ ದಿನಗಳಲ್ಲಿ ಶಾಲಾ ಎಸ್ಟಿಎಂಸಿ ಅಧ್ಯಕ್ಷರೆ ತಮ್ಮ ತಮ್ಮ ಶಾಲೆಗಳಲ್ಲಿ ಧ್ವಜಾರೋಹಣ ಮಾಡಬೇಕೆಂಬ ನಿಯಮವಿದೆ, ಇಂತಹ ನಿಯಮಗಳು ಕಾನೂನಿನ ನೀತಿ ನಿರೂಪಣೆಯಡಿಯಲ್ಲಿ ಇದ್ದರೂ ಕೂಡ ,ಎಸ್ಡಿಎಂಸಿ ಅಧ್ಯಕ್ಷರಿಂದ ದ್ವಜಾರೋಹಣ ಮಾಡಿಸಲು ವಿಮುಖತೆ ತೋರಿಸುವ ಶಾಲಾ ಮುಖ್ಯ ಶಿಕ್ಷಕರುಗಳ ವಿರುದ್ಧ ಎಸ್ಡಿಎಂಸಿ ಸಮನ್ವಯ ಕೇಂದ್ರ ವೇದಿಕೆ(ರಿ) ಚಿಕ್ಕಮಗಳೂರು ವತಿಯಿಂದ ಶಿಕ್ಷಣ ಇಲಾಖೆಯ ಮೇಲಾಧಿಕಾರಿಗಳಿಗೆ ಲಿಖಿತ ದೂರು ನೀಡಿದೆ .
ಕರ್ನಾಟಕ ರಾಜ್ಯ ಎಸ್ಡಿಎಂಸಿ ಸಮನ್ವಯ ಕೇಂದ್ರ ವೇದಿಕೆ(ರಿ) ಚಿಕ್ಕಮಗಳೂರು ಜಿಲ್ಲೆಯ ರಾಜ್ಯ ನಿರ್ದೇಶಕ ವಿಜಯಕುಮಾರ್, ಜಿಲ್ಲಾ ನಿರ್ದೇಶಕ ಪ್ರೇಮ್ ಕುಮಾರ್, ಜಿಲ್ಲಾ ನಿರ್ದೇಶಕಿ ಪ್ರಶಾಂತಿ ವಿ ಕುವೆಲ್ಲೋ ಹಾಗೂ ರಾಜ್ಯ ಸಂಚಾಲಕ ಮೊಯ್ದಿನ್ ಕುಟ್ಟಿ ಯವರ ನಿಯೋಗವು ಇಂದು ಚಿಕ್ಕಮಗಳೂರು ಜಿಲ್ಲಾ ಕಾರ್ಯನಿರ್ವಹಣಾಧಿಕಾರಿ ಜಿಲ್ಲಾ ಪಂಚಾಯತ್,ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಇಲಾಖೆಯ ಉಪನಿರ್ದೇಶಕರು(ಆಡಳಿತ), ಚಿಕ್ಕಮಗಳೂರು ತಾಲೂಕು ಶಿಕ್ಷಣಾಧಿಕಾರಿ ಕಚೇರಿಗಳಿಗೆ ಭೇಟಿ ಕೊಟ್ಟು ಸರಕಾರಿ ಶಾಲೆಯ ಎಸ್ಡಿಎಂಸಿಯವರ ಅಧಿಕಾರವನ್ನು ಮೊಟಕು ಗೊಳಿಸಿ,ಇಲಾಖಾ ಸುತ್ತೋಲೆಯನ್ನು ಉಲ್ಲಂಘಿಸಿ, ರಾಜಕೀಯ ವ್ಯಕ್ತಿಗಳಿಂದ ದ್ವಜಾರೋಹಣ ಮಾಡಿಸುತ್ತಿರುವ ಶಿಕ್ಷಕರ ಬಗ್ಗೆ ದೂರನ್ನು ನೀಡಿ,ಸೂಕ್ತ ಕ್ರಮವನ್ನು ಕೈ ಗೊಳ್ಳಲು ಒತ್ತಾಯಿಸಲಾಯಿತು. ಅಲ್ಲದೆ ಎಸ್‌ಡಿಎಂಸಿ ಅಧ್ಯಕ್ಷರಿಂದಲೇ ಧ್ವಜಾರೋಹಣವನ್ನು ಮಾಡಿಸಲು ಸಂಬಂಧಪಟ್ಟ ಶಾಲಾ ಕಾಲೇಜುಗಳಿಗೆ ಸೂಕ್ತ ನಿರ್ದೇಶನ ನೀಡಬೇಕೆಂದು ದೂರಿನಲ್ಲಿ ವಿವರಿಸಲಾಗಿದೆ.
ಅದಲ್ಲದೆ ಚಿಕ್ಕಮಗಳೂರು ಜಿಲ್ಲಾ ಸಮಗ್ರ ಶಿಕ್ಷಣ ಕರ್ನಾಟಕ ಅಧಿಕಾರಿಯನ್ನು ಭೇಟಿಯಾಗಿ ಚಿಕ್ಕಮಗಳೂರು ಜಿಲ್ಲೆಯಲ್ಲಿ ಎಸ್ಡಿಎಂಸಿಯಿಂದ ರಚಿತವಾಗಿರುವ ಎಲ್ ಕೆ ಜಿ- ಯು ಕೆ ಜಿ ಶಿಕ್ಷಕರ ಸಂಬಳದ ಬಗ್ಗೆ ಹಾಗೂ FAB ಯಲ್ಲಿ ದಾಖಲೆ ಆಗದೆ ಇರುವ ಶಾಲೆಗಳನ್ನು ಮುಂದಿನ ದಿನಗಳಲ್ಲಿ ಸೇರ್ಪಡಿಸುವ ಬಗ್ಗೆ ಚರ್ಚಿಸಲಾಗಿದೆ ಎಂದು ಎಸ್ ಡಿ ಎಂ ಸಿ ಅಧ್ಯಕ್ಷೆ ಹಾಗೂ ಎಸ್ ಡಿ ಎಂ ಸಿ ಸಮನ್ವಯ ಕೇಂದ್ರದ ಜಿಲ್ಲಾ ನಿರ್ದೇಶಕಿ ಪ್ರಶಾಂತಿ ಕುವೆಲ್ಲೋ ತಿಳಿಸಿದ್ದಾರೆ.
••••••••••••••••••••••••••••
D. M. Manjunathaswamy