ತಕ್ಷಣವೇ ಕಠಿಣ ಕಾನೂನು ಕ್ರಮ ಕೈಗೊಳ್ಳುವಂತೆ ಆಗ್ರಹ
1 min readತರೀಕೆರೆ ಉಪವಿಭಾಗಾಧಿಕಾರಿ ಕಾಂತರಾಜ್ ತಮ್ಮ ಕಚೇರಿಯಲ್ಲಿ ಕಡೂರು ವಕೀಲರಾದ ಹರೀಶ್ ಅವರನ್ನು ದಿಗ್ಬಂಧನ ವಿಧಿಸಿ, ಮಾನಸಿಕ ನಿಂದನೆಗೊಳಪಡಿಸಿರುವ ಘಟನೆಗೆ ಸಂಬಂಧಿಸಿದಂತೆ ಕಡೂರು ವಕೀಲರ ಸಂಘ ತುರ್ತು ಸಭೆ ನಡೆಸಿದ್ದು, ಈ ಘಟನೆ ವಕೀಲರ ಗೌರವ ಹಾಗೂ ಹಕ್ಕುಗಳಿಗೆ ತೀವ್ರ ಹಾನಿಯನ್ನು ಉಂಟುಮಾಡಿದೆಯೆಂದು ಸಭೆಯಲ್ಲಿ ಒಮ್ಮತದಿಂದ ನಿರ್ಧರಿಸಲಾಗಿದೆ. ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲ್ಲೂಕಿನ ತಹಶೀಲ್ದಾರ್‌ರವರಿಗೆ ಸಲ್ಲಿಸಿರುವ ಮನವಿಯಲ್ಲಿ, ಸದರಿ ಘಟನೆಯ ಕುರಿತು ತಕ್ಷಣವೇ ಕಠಿಣ ಕಾನೂನು ಕ್ರಮ ಕೈಗೊಳ್ಳುವಂತೆ ಹಾಗೂ ಇಂತಹ ಘಟನೆಗಳ ಪುನರಾವರ್ತನೆ ತಪ್ಪಿಸಲು ಸೂಕ್ತ ಕ್ರಮ ಜರುಗಿಸುವಂತೆ ಒತ್ತಾಯಿಸಲಾಯಿತು. ವಕೀಲರ ಸಂಘದ ಅಧ್ಯಕ್ಷರಾದ ಶ್ರೀ. ಬಿ.ಟಿ. ನಟರಾಜ್, ಪ್ರಧಾನ ಕಾರ್ಯದರ್ಶಿ ಕೆ.ಸಿ. ಚಂದ್ರಶೇಖರ್, ಸದಸ್ಯರು ಡಿ.ಕೆ. ಪ್ರಸನ್ನ, ಹೆಚ್.ಆರ್. ಚಂದ್ರು, ಬಿ.ಎ. ಸುರೇಶ್, ಹೆಚ್.ಕೆ. ದೇವರಾಜ್, ಹೆಚ್.ಕೆ. ರಘು, ಶ್ರೀಮತಿ ಭಾನುಮತಿ, ಅನಿಲ್ ಕುಮಾರ್, ನಿತಿನ್ ಕುವೆಲ್ಲೋ, ಹರ್ಷನಾಥ ಮತ್ತು ಇತರರು ಉಪಸ್ಥಿತರಿದ್ದರು.