ಸ್ಟೇಟ್ ಲೆವೆಲ್ ಬ್ಯಾಂಕರ್ಸ್ ಕಮಿಟಿ ಸಭೆ.
1 min readಸ್ಟೇಟ್ ಲೆವೆಲ್ ಬ್ಯಾಂಕರ್ಸ್ ಕಮಿಟಿ ಸಭೆ.
ದಿನಾಂಕ 21.01.2025 ನೇ ಮಂಗಳವಾರದಂದು ಬೆಂಗಳೂರಿನ ಕಾಫಿ ಮಂಡಳಿಯಲ್ಲಿ ಕಾಫಿ ಮಂಡಳಿಯ ಅಧ್ಯಕ್ಷರಾದ ಶ್ರೀ ಎಂ ಜೆ ದಿನೇಶ್ ರವರು ಹಾಗೂ ಕಾರ್ಯದರ್ಶಿಯವರಾದ ಡಾಕ್ಟರ್ ಕೆ ಜಿ ಜಗದೀಶ್ ರವರು ಸ್ಟೇಟ್ ಲೆವೆಲ್ ಬ್ಯಾಂಕರ್ಸ್ ಕಮಿಟಿ ಸಭೆಯನ್ನು ಆಯೋಜಿಸಿದ್ದರು.
ಈ ಸಭೆಗೆ ಕರ್ನಾಟಕ ಬೆಳೆಗಾರರ ಒಕ್ಕೂಟದ ಅಧ್ಯಕ್ಷರಾದ ಶ್ರೀ ಹಳಸೆ ಶಿವಣ್ಣ ಹಾಗೂ ತಂಡ ಮತ್ತು ಒಕ್ಕೂಟದ ಅಡಿಯಲ್ಲಿ ಬರುವ ಸಹ ಸಂಘಟನೆಗಳು, ಮತ್ತು ಕರ್ನಾಟಕ ಪ್ಲಾಂಟರ್ಸ್ ಅಸೋಸಿಯೇಷನ್, ಯುನೈಟೆಡ್ ಪ್ಲಾಂಟರ್ಸ್ ಅಸೋಸಿಯೇಷನ್ ಆಫ್ ಇಂಡಿಯಾ, ಕೊಡಗು ಪ್ಲಾಂಟರ್ಸ್ ಅಸೋಸಿಯೇಷನ್ ಸಂಘಟನೆಗಳು ಭಾಗವಹಿಸಿದ್ದರು.
ಸಭೆಯಲ್ಲಿ ಭಾಗವಹಿಸಿದ ಬ್ಯಾಂಕ್ ಅಧಿಕಾರಿಗಳ ಜೊತೆ ಸರ್ಫ್ಯಾಸಿ ಹಾಗೂ ಓ ಟಿ ಎಸ್ ಸೌಲಭ್ಯದ ಬಗ್ಗೆ ಚರ್ಚೆ ಆಯಿತು.
ಕೆನರಾ ಬ್ಯಾಂಕಿನ ಅಧಿಕಾರಿಗಳು ಸಾಲ ಮರುಪಾವತಿಗಾಗಿ ಡಿಮ್ಯಾಂಡ್ ಮಾಡಿದಾಗ ಬೆಳೆಗಾರರ ನ್ಯೂನತೆಗಳ ಬಗ್ಗೆ ತಿಳಿಸಿ ಮನವರಿಕೆ ಮಾಡಲಾಯಿತು.
ಬೇರೆ ಬ್ಯಾಂಕುಗಳ ಅಧಿಕಾರಿಗಳು ಮೇಲಾಧಿಕಾರಿಗಳಿಗೆ ತಿಳಿಸಿ ಸರ್ಪಾಸಿ ನೋಟಿಸ್ ನೀಡದೆ , ಬೆಳೆಗಾರರಿಗೆ ತಿಳಿಸಿ ಸರಿಪಡಿಸಿಕೊಳ್ಳುವುದಾಗಿ ತಿಳಿಸಿದರು.
ಒಕ್ಕೂಟದ ವತಿಯಿಂದ ತೋಟಗಳ ಹರಾಜುನ್ನು ಸರ್ಫೇಸಿ ನೋಟಿಸ್ ನೀಡಿ ಸಾಲಕ್ಕಿಂತ ಹೆಚ್ಚಿನ ಮೌಲ್ಯದ ಜಮೀನನ್ನು ಹರಾಜು ಮಾಡುವ ಪ್ರಕ್ರಿಯೆಯನ್ನು ಖಂಡಿಸಲಾಗಿ ಬ್ಯಾಂಕುಗಳು ಒಪ್ಪಿಕೊಂಡು
ಹಾಗೂ ಮುಂದಿನ ದಿನಗಳಲ್ಲಿ ಸರ್ಫೇಸಿ ಬಗ್ಗೆ ಬೆಳೆಗಾರರಿಗೆ ಆದಷ್ಟು ತಿಳಿಸಿ ಮನವೊಲಿಸಿ ತಿಳಿ ಹೇಳುವುದಾಗಿ ತಿಳಿಸಿರುತ್ತಾರೆ.
ಈ ಸಭೆಯಲ್ಲಿ 9 ಬ್ಯಾಂಕುಗಳು ಭಾಗವಹಿಸಿ ಸಭೆ ಫಲಪ್ರದ ವಾಯಿತು.
ಬ್ಯಾಂಕ್ ನ್ಯೂನತೆಗಳ ಬಗ್ಗೆ ಚರ್ಚೆಯಾಗಿ ಬ್ಯಾಂಕುಗಳಲ್ಲಿ ಕನ್ನಡ ಗೊತ್ತಿರುವವರನ್ನು ಕನಿಷ್ಠ ಇಬ್ಬರು ಸಿಬ್ಬಂದಿಗಳನ್ನು ನೇಮಿಸಬೇಕು ಹಾಗೂ ಅರ್ಜಿ ನಮೂನೆಗಳು ಕನ್ನಡದಲ್ಲಿ ಮುದ್ರಿತವಾಗಿರಬೇಕು ಎಂದು ಒಕ್ಕೂಟದ ಅಧ್ಯಕ್ಷರಾದ ಶ್ರೀ ಹಳಸೆ ಶಿವಣ್ಣ ನವರು ತಿಳಿಸಿದಾಗ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ.
ಹಾಗೂ ಆಗಿOದ್ದಾಗ್ಗೆ ಗ್ರಾಹಕರ ಸಭೆಗಳನ್ನು ಕರೆಯಬೇಕೆಂದು ತಿಳಿಸಲಾಯಿತು .
ಬ್ಯಾಂಕ್ ನ ವ್ಯವಸ್ಥಾಪಕರು ವರ್ಗಾವಣೆಯಾಗುವ ಸಮಯದಲ್ಲಿ ಆ ಬ್ಯಾಂಕಿಗೆ ಬರುವ ಮುಂದಿನ ವ್ಯವಸ್ಥಾಪಕರಿಗೆ ಗ್ರಾಹಕರ ಪರಿಚಯ ಮಾಡಿಕೊಡಬೇಕು ಎಂದು ಒಕ್ಕೂಟದ ಅಧ್ಯಕ್ಷರಾದ ಶ್ರೀ ಹಳಸೆ ಶಿವಣ್ಣ ನವರು ತಿಳಿಸಿದರು.
ಬ್ಯಾಂಕುಗಳು ಸರ್ವಿಸ್ ಶುಲ್ಕವನ್ನು ಹೆಚ್ಚು ಮಾಡಬಾರದಾಗಿ ಒಕ್ಕೂಟದ ಅಧ್ಯಕ್ಷರು ತಿಳಿಸಿದರು .
ಸಾಲ ನೀಡುವ ಸಂದರ್ಭದಲ್ಲಿ ಸರಳಿಕರಣ ಸಾಲ ನೀಡುವಂತೆ ಅಂದರೆ ಹೆಚ್ಚಿನ ದಾಖಲಾತಿಗಳನ್ನು ನೀಡುವಂತೆ ಒತ್ತಡ ಹೇರಬಾರದಾಗಿ ತಿಳಿಸಲಾಯಿತು ಹಾಗೂ ಬ್ಯಾಂಕ್ ಸಾಲ ಪಡೆದರೆ ದಾಖಲಾತಿಗಳು ಅಲ್ಲಿಯೇ ಇರುವುದರಿಂದ ಪ್ರತಿವರ್ಷ ಕೇಳುವ ಅಗತ್ಯವಿಲ್ಲ ಎಂಬುದಾಗಿ ಒಕ್ಕೂಟದ ಅಧ್ಯಕ್ಷರು ತಿಳಿಸಿದಾಗ ಸಕಾರಾತ್ಮಕವಾಗಿ ಬ್ಯಾಂಕ್ ನ ಅಧಿಕಾರಿಗಳು ಪ್ರತಿಕ್ರಿಯೆ ನೀಡಿರುತ್ತಾರೆ.
ಇದೇ ಸಂದರ್ಭದಲ್ಲಿ ಕಾಫಿ ಮಂಡಳಿ ಅಧ್ಯಕ್ಷರಾದ ಶ್ರೀ ಎಂ ಜೇ ದಿನೇಶ್ ರವರಿಗೆ ಕರ್ನಾಟಕ ಬೆಳೆಗಾರರ ಒಕ್ಕೂಟದ ವತಿಯಿಂದ ಅಧ್ಯಕ್ಷರಾದ ಶ್ರೀ ಹಳಸೆ ಶಿವಣ್ಣ ಹಾಗೂ ತಂಡದವರು ಅಭಿನಂದನೆ ಸಲ್ಲಿಸಿದರು.
ಈ ಸಭೆಗೆ ಕರ್ನಾಟಕ ಬೆಳೆಗಾರರ ಒಕ್ಕೂಟದ ಅಧ್ಯಕ್ಷರಾದ ಶ್ರೀ ಹಳಸೆ ಹೆಚ್ ಬೀ ಶಿವಣ್ಣ, ಉಪಾಧ್ಯಕ್ಷರಾದ ಶ್ರೀ ಕೆ ಕೆ ವಿಶ್ವನಾಥ್, ಸಂಘಟನಾ ಕಾರ್ಯದರ್ಶಿಯಾದ ಶ್ರೀ ಅಶೋಕ್ ಸೂರಪ್ಪನಹಳ್ಳಿ ,ಮಾಜಿ ಅಧ್ಯಕ್ಷರಾದ ಶ್ರೀ ಬಿ ಎಸ್ ಜೈರಾಂ
ಹಾಸನ ಜಿಲ್ಲಾ ಪ್ಲಾಂಟರ್ಸ್ ಸಂಘದ ಅಧ್ಯಕ್ಷರಾದ ಶ್ರೀ ಏ ಎಸ್ ಪರಮೇಶ್, ಗೌರವ ಕಾರ್ಯದರ್ಶಿ ಶ್ರೀ ಕೆ ಬಿಲೋಹಿತ್ , ಮೂಡಿಗೆರೆ ತಾಲೂಕು ಬೆಳೆಗಾರರ ಸಂಘದ ಅಧ್ಯಕ್ಷರಾದ ಶ್ರೀ ಬಿ ಆರ್ ಬಾಲಕೃಷ್ಣ, ಕಾರ್ಯದರ್ಶಿ ಶ್ರೀ ಕೆ ಡಿ ಮನೋಹರ್, ಕೊಡಗು ಪ್ಲಾಂಟರ್ಸ್ ಅಸೋಸಿಯೇಷನ್ ಶ್ರೀ ಪ್ರದೀಪ್ ಪೂವಯ್ಯ ಹಾಗೂ ಇತರರು ಈ ಸಭೆಯಲ್ಲಿ ಇದ್ದರು.