ಚಿಕ್ಕಮಗಳೂರು ನಾಲ್ಕು ಜನ ಶಿಕ್ಷಕರಿಗೆ ಪ್ರಸಸ್ತಿ….
1 min readಚಿಕ್ಕಮಗಳೂರು ನಾಲ್ಕು ಜನ ಶಿಕ್ಷಕರಿಗೆ ಪ್ರಸಸ್ತಿ….
ಅಕ್ಷರ ಕ್ರಾಂತಿಯ ಹರಿಕಾರರಾದ ಸಾವಿತ್ರಿಬಾಯಿ ಪುಲೆ~ ಜ್ಯೋತಿಬಾ ಪುಲೆ ರಾಜ್ಯಮಟ್ಟದ ಉತ್ತಮ ಶಿಕ್ಷಕ/ಶಿಕ್ಷಕಿ ಪ್ರಶಸ್ತಿಗೆ ಚಿಕ್ಕಮಗಳೂರು ಜಿಲ್ಲೆಯ ನಾಲ್ಕು ಜನ ಶಿಕ್ಷಕರು ಭಾಜನ*
ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ ಬೆಂಗಳೂರು ರಾಜ್ಯ ಘಟಕ ಮತ್ತು ವಿಜಯಪುರ ಜಿಲ್ಲಾ ಘಟಕದ ಸಹಯೋಗದಲ್ಲಿ, ಅಕ್ಷರದ ಹರಿಕಾರರಾದ ಸಾವಿತ್ರಿಬಾಯಿ ಫುಲೆ ಮತ್ತು ಜ್ಯೋತಿಬಾ ಪುಲೆ ಹೆಸರಿನಲ್ಲಿ ಕೊಡ ಮಾಡುವ 2024 ನೇ ಸಾಲಿನ ರಾಜ್ಯಮಟ್ಟದ ಉತ್ತಮ ಶಿಕ್ಷಕ/ಕಿ ಪ್ರಶಸ್ತಿಗೆ ಚಿಕ್ಕಮಗಳೂರು ಜಿಲ್ಲೆ ಎನ್ ಆರ್ ಪುರ ಪಟ್ಟಣದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕಿ *ರಾಜೇಶ್ವರಿ* ಮತ್ತು ಎನ್ ಆರ್ ಪುರ ಮೋಹಲ್ಲಾ ಕ್ಯಾಂಪಿನ ಉರ್ದು ಸರ್ಕಾರಿ ಪ್ರಾಥಮಿಕ ಶಾಲೆಯ ಶಿಕ್ಷಕಿ *ಮಹಾ ಜಬೀನಾ* ಅವರು ಅಕ್ಷರದವ್ವ ಸಾವಿತ್ರಿಬಾಯಿ ಫುಲೆ ಪ್ರಶಸ್ತಿಗೆ ಭಾಜನರಾದರು.
ಕಡೂರು ತಾಲೂಕಿನ ದೊಡ್ಡ ಪಟ್ಟಣಗೆರೆ ಕಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕ *ಸಿ.ಆರ್. ಜಯಣ್ಣ* ಮತ್ತು ಕರೆ ಕಲ್ಲಹಳ್ಳಿ ಕಿರಿಯ ಪ್ರಾರ್ಥಮಿಕ ಶಾಲೆಯ *ಯೋಗೇಶ್ ಹೆಚ್.ಪಿ* ಅವರು ಜ್ಯೋತಿ ಬಾಪುಲೆ ರಾಜ್ಯಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಗೆ ಪುರಸ್ಕೃತರಾದರು.
ಇತ್ತೀಚಿಗೆ ಉತ್ತರ ಕರ್ನಾಟಕದ ವಿಜಯಪುರದಲ್ಲಿ ಎಕ್ಸಲೆಂಟ್ ಪಿಯು ಕಾಲೇಜ್ ಸಭಾಂಗಣದಲ್ಲಿ ಈ ಪ್ರಶಸ್ತಿ ಪ್ರಧಾನ ಸಮಾರಂಭ ನಡೆಯಿತು, ರಾಜ್ಯದಾದ್ಯಂತ ಒಟ್ಟು ಐವತ್ತು ಶಿಕ್ಷಕ/ ಶಿಕ್ಷಕಿಯರು ಈ ಪ್ರಶಸ್ತಿಗೆ ಭಾಜನರಾಗಿದ್ದು, ಇದರಲ್ಲಿ ಚಿಕ್ಕಮಗಳೂರು ಜಿಲ್ಲೆಯ ನಾಲ್ಕು ಜನ ಶಿಕ್ಷಕರು ಈ ಗೌರವವನ್ನು ಸ್ವೀಕರಿಸಿದ್ದಾರೆ.
ವಿಜಯಪುರ ಜಿಲ್ಲಾ ಕೆಜೆವಿಎಸ್ ಘಟಕದ ಅಧ್ಯಕ್ಷರಾದ ಜಿ.ಎಸ್.ಕಾಂಬ್ಳೆ ಮತ್ತು ಕಾರ್ಯದರ್ಶಿ ರಮೇಶ್ ನಾಯಕ್ ಹಾಗೂ ಉಪನ್ಯಾಸಕ ಪ್ರೊ. ಶಿವಾನಂದ್ ಕಲ್ಯಾಣಿ ಅವರು ಪ್ರಶಸ್ತಿ ಪ್ರಧಾನ ಮಾಡಿದರು.
ಈ ಎಲ್ಲ ಪ್ರಶಸ್ತಿ ಪುರಸ್ಕೃತರಿಗೆ ಮತ್ತು ಆಯೋಜಕರಿಗೆ ಚಿಕ್ಕಮಗಳೂರು ಜಿಲ್ಲಾ ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿಯ ಪ್ರಧಾನ ಕಾರ್ಯದರ್ಶಿ ಡಿ.ಎಂ ಮಂಜುನಾಥಸ್ವಾಮಿ ಈ ಮೂಲಕ ಅಭಿನಂದನೆಗಳನ್ನು ತಿಳಿಸಿದ್ದಾರೆ .