ಅಧಿಕಾರವನ್ನು ಸದ್ಬಳಕೆ ಮಾಡಿಕೊಳ್ಳಿ: ಕೆ.ಟಿ.ರಾಧಾಕೃಷ್ಣ
1 min readಅಧಿಕಾರವನ್ನು ಸದ್ಬಳಕೆ ಮಾಡಿಕೊಳ್ಳಿ: ಕೆ.ಟಿ.ರಾಧಾಕೃಷ್ಣ
ಚಿಕ್ಕಮಗಳೂರು,ಜ.20:- ಸಂವಿಧಾನ ತಮಗೆ ಅಧಿಕಾರವನ್ನು ಕೊಟ್ಟಿದ್ದು, ಅದನ್ನು ಸದ್ಬಳಕೆ
ಮಾಡಿಕೊಳ್ಳುವಂತೆ ಜಿಲ್ಲಾ ಸಹೋದರತ್ವ ಸಮಿತಿ ಅಧ್ಯಕ್ಷರು, ದಲಿತ ನಾಯಕರು ಹಾಗೂ ಬಿ.ಎಸ್.ಪಿ ರಾಜ್ಯ ಪ್ರಧಾನ ಕಾರ್ಯದರ್ಶಿಗಳು ಆದ ಕೆ.ಟಿ.ರಾಧಾಕೃಷ್ಣ ಹೇಳಿದರು.
ಅವರು ಭಾನುವಾರ ಇತ್ತೀಚೆಗೆ ನಡೆದ ಚಿಕ್ಕಮಗಳೂರು ಟೌನ್ ಕೋ ಆವರೇಟಿವ್ ಸೊಸೈಟಿ ಚುನಾವಣೆಯಲ್ಲಿ ನೂತನವಾಗಿ ಆಡಳಿತ ಮಂಡಳಿಗೆ ಚುನಾಯಿತರಾದ ಹಿರೇಮಗಳೂರು ಹಾಲಮ್ಮ ರಾಮಚಂದ್ರ ಅವರ ನಿವಾಸಕ್ಕೆ ತೆರಳಿ ಅವರನ್ನು ಗೌರವಿಸಿ ಮಾತನಾಡಿದರು.
ಚಿಕ್ಕಮಗಳೂರು ಟೌನ್ ಕೋ ಆಪರೇಟಿವ್ ಸೊಸೈಟಿಯಲ್ಲಿ ಅನೇಕ ಸವಲತ್ತುಗಳು ಇದ್ದು, ಅವುಗಳನ್ನು ಸಂಬಂಧಿಸಿದವರಿಗೆ ಪ್ರಾಮಾಣಿಕವಾಗಿ ತಲುಪಿಸುವ ಕೆಲಸವನ್ನು ಮಾಡುವ ಮೂಲಕ ಸಂವಿಧಾನದ ಆಶಯಗಳನ್ನು ಈಡೇರಿಸುವಂತೆ ಮನವಿ ಮಾಡಿದರು.
ಇದೇ ಮೊದಲ ಬಾರಿಗೆ ಸಹಕಾರ ಕ್ಷೇತ್ರದಲ್ಲಿ ಚುನಾವಣೆ ಮೂಲಕ ಚುನಾಯಿತರಾಗಿ ಜಯ ಗಳಿಸಿದ್ದು, ನಾವೇ ಜಯ ಗಳಿಸಿದಷ್ಟೇ ಸಂತೋಷವನ್ನು ಉಂಟು ಮಾಡಿದೆ. ಮುಂದಿನ ನಿಮ್ಮ ಸಾರ್ವಜನಿಕ ಜೀವನದಲ್ಲಿ ಇನ್ನೂ ಹೆಚ್ಚಿನ ಯಶಸ್ಸು ಸಿಗಲಿ ಎಂದು ಹಾರೈಸಿದರು.
ಈ ಸಂದರ್ಭದಲ್ಲಿ ಬಿ.ಎಸ್.ಪಿ ರಾಜ್ಯ ಕಾರ್ಯದರ್ಶಿ ಕೆ.ಬಿ.ಸುಧಾ, ಸಹೋದರತ್ವ ಸಮಿತಿ ಸದಸ್ಯರ ಮಂಜುಳಾ, ರತ್ನ, ಸಿದ್ದಯ್ಯ, ವಸಂತ, ವಿಜಯಕುಮಾರ್. ವೆಂಕಟೇಶ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.