ರಸಪ್ರಶ್ನೆ ಸ್ಪರ್ಧೆ : ಸುಪ್ರೀತ್-ಮಹಮ್ಮದ್ ಝಹೆರ್ ಪ್ರಥಮ
1 min read![](https://avintv.com/wp-content/uploads/2025/01/IMG_20250113_121605.jpg)
ರಸಪ್ರಶ್ನೆ ಸ್ಪರ್ಧೆ : ಸುಪ್ರೀತ್-ಮಹಮ್ಮದ್ ಝಹೆರ್ ಪ್ರಥಮ
ಕರ್ನಾಟಕ ಜ್ಞಾನವಿಜ್ಞಾನ ಸಮಿತಿ ಆನ್ಸೆನ್‌ನಲ್ಲಿ ನಡೆಸಿದ ಜಿಲ್ಲಾ ಮಟ್ಟದ ರಸಪ್ರಶ್ನೆ ಸ್ಪರ್ಧೆಯಲ್ಲಿ ನಗರದ ಕುವೆಂಪು ವಿದ್ಯಾನಿಕೇತನ ಶಾಲೆಯ ವಿದ್ಯಾರ್ಥಿ ಸುಪ್ರೀತ್, ಮೂಡಿಗೆರೆ ಬೆಥನಿ ಪ್ರೌಢಶಾಲೆಯ ವಿದ್ಯಾರ್ಥಿ ಮಹಮ್ಮದ್ ಝಹೆರ್. ಮೂಡಿಗೆರೆ ತಾಲ್ಲೂಕು ಅಂಗಡಿ ಸರ್ಕಾರಿ ಪ್ರೌಢಶಾಲೆಯ ಹರಿಪ್ರಿಯಾ ಪ್ರಥಮ ಸ್ಥಾನ ಪಡೆದಿದ್ದಾರೆ.
ನಗರದ ಕುವೆಂಪು ವಿದ್ಯಾನಿಕೇತನ ಶಾಲೆಯ ಆರ್.ಪಿ. ಧೃತಿ, ಮೂಡಿಗೆರೆ ಬೆಥನಿ ಶಾಲೆಯ ಹರ್ಷಿತ ಮತ್ತು ಅರ್ಮಾನ್ ನವಾಜ್ ದ್ವಿತೀಯ. ಕುವೆಂಪು ಶಾಲೆಯ ಟಿ.ಎಸ್. ಯಷ್ಠಿಕಾ. ಮೂಡಿಗೆರೆ ಬೆಥನಿ ಶಾಲೆಯ ರಚನಾ ಸುಧನ್. ಆಲ್ಲೂರು ಪೂರ್ಣಪ್ರಜ್ಞ ಶಾಲೆಯ ಹೆಚ್.ಎಂ. ಶ್ರಾವ್ಯ ತೃತೀಯ ಸ್ಥಾನ ಗಳಿಸಿದ್ದಾರೆ. ರಾಜ್ಯಮಟ್ಟದ ಸ್ಪರ್ಧೆಯಲ್ಲಿ ನಗರದ ಕುವೆಂಪು ವಿದ್ಯಾನಿಕೇತನ ಶಾಲೆಯ ವಿದ್ಯಾರ್ಥಿ ವಿ.ಆರ್. ಗೋವರ್ಧನ್. ಮೂಡಿಗೆರೆ ಬೆಥನಿ ಶಾಲೆಯ ಅಶ್ವಿನ್ ಹೆಚ್.ಎಸ್.ಗೌಡ ಸಮಾಧಾನಕರ
ಬಹುಮಾನ ಪಡೆದಿದ್ದಾರೆ. ನಗರದ ತಾ.ಪಂ.ಸಭಾಂಗಣದಲ್ಲಿ ಶನಿವಾರ ನಡೆದ ಸಮಾರಂಭದಲ್ಲಿ
ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ ಆನ್ಸೆನ್‌ನಲ್ಲಿ ನಡೆಸಿದ ಜಿಲ್ಲಾ ಮಟ್ಟದ ರಸಪ್ರಶ್ನೆ ಸ್ಪರ್ಧೆಯಲ್ಲಿ ವಿಜೇಯತರಿಗೆ
ಬಹುಮಾನ ನೀಡಲಾಯಿತು ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.
ಕಾರ್ಯಕ್ರಮ ಉದ್ಘಾಟಿಸಿ, ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಿ ಮಾತನಾಡಿದ ಕುವೆಂಪು ವಿದ್ಯಾನಿಕೇತನ ಶಾಲೆಯ ಕಾರ್ಯದರ್ಶಿ ಕೆ.ಸಿ. ಶಂಕರ್, ನಮ್ಮ ರಾಷ್ಟ್ರ ಎಲ್ಲಾ ಕ್ಷೇತ್ರಗಳಲ್ಲೂ ಪ್ರಗತಿ ಸಾಧಿಸಬೇಕಾದರೆ ದೇಶದ ಜನತೆ ವೈಜ್ಞಾನಿಕ ಮನೋಭಾವವನ್ನು ಬೆಳೆಸಿಕೊಳ್ಳಬೇಕು ಎಂದು ಸಲಹೆ ಮಾಡಿದರು.
ಶರಣ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ರವೀಶ್ ಕ್ಯಾತನಬೀಡು, ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿಯ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಡಿ.ಎಂ. ಮಂಜುನಾಥ ಸ್ವಾಮಿ ಮಾತನಾಡಿದರು. ರಸಪ್ರಶ್ನೆ ಸ್ಪರ್ಧೆ ವಿಜೇತ ಸಮಾರಂಭದಲ್ಲಿ ವಿದ್ಯಾರ್ಥಿಗಳಿಗೆ ಬಹುಮಾನ ನೀಡುವುದರ ಜೊತೆಗೆ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿಯ
ಜಿಲ್ಲಾ ಉಪಾಧ್ಯಕ್ಷ ಮಾವಿನಕೆರೆ ದಯಾನಂದ್ ಅಧ್ಯಕ್ಷತೆ ವಹಿಸಿದ್ದರು.ಪಿ ಎಲ್ ಡಿ ಬ್ಯಾಂಕ್ ಮಾಜಿ ಅಧ್ಯಕ್ಷ ಬೈರೇಗೌಡ, ಕಾಫಿ ಬೆಳೆಗಾರ ಪರಮೇಶ್. ಮೂಡಿಗೆರೆ ಕ.ಸಾ.ಪ. ಅಧ್ಯಕ್ಷ ಆರ್. ಪ್ರಕಾಶ್. ಶಿಕ್ಷಕ ಮಂಜಪ್ಪ ದೊಡ್ಡನಿ. ಪ್ರಶಾಂತಿ ಕುವೆಲೋ. ವೇಣಿ. ದುರ್ಗೇಶ್, ಹೆಚ್.ಎಂ. ಶಾಂತಕುಮಾರ್, ವಿ. ಆರ್. ಗೋವರ್ದನ್ ಉಪಸ್ಥಿತರಿದ್ದರು.