ಸ್ವಾಮಿ ವಿವೇಕಾನಂದರು.
1 min read![](https://avintv.com/wp-content/uploads/2025/01/IMG-20250112-WA0185.jpg)
ಸ್ವಾಮಿ ವಿವೇಕಾನಂದರು ರಾಜಕೀಯದ ಹಿಂದುತ್ವವನ್ನ ಕಟ್ಟಿದವರಲ್ಲ ; ಜಾತಿ ಧರ್ಮವನ್ನು ಮೀರಿ ಮನುಷ್ಯತ್ವದ ಹಿಂದುತ್ವವನ್ನು ಕಟ್ಟಿದವರು.
ಕೋಮು ಗಲಭೆಯ ಮೂಲಕ ಬಡ ಹಿಂದು ಯುವಕರ ಹತ್ಯೆ ಮಾಡದಿರುವ ವಿವೇಕ ಇದ್ದವರಿಗೆ,
ಜಾತಿ ಧರ್ಮ ಭೇದಗಳನ್ನು ಖಂಡಿಸುವ ವಿವೇಕ ಇದ್ದವರಿಗೆ,
ಯಾವುದೇ ಜಾತಿ ಧರ್ಮದವರೇ ಇರಲಿ ಅವರು ಬಡವರಾಗಿದ್ದರೆ ಅವರನ್ನು ಸಹಾನುಭೂತಿಯಿಂದ ಕಾಣುವ ವಿವೇಕ ಇದ್ದವರಿಗೆ,
ವೃದ್ದರನ್ನು, ರೋಗಿಗಗಳನ್ನು, ರೈತರನ್ನು, ಶ್ರಮಿಕರನ್ನು ಸಂತೈಸುವ ವಿವೇಕ ಇದ್ದವರಿಗೆ
ಜನರ ತೆರಿಗೆ ಹಣವನ್ನು ಲೂಟಿ ಹೊಡೆದು ನಾಯಕತ್ವ ಸಂಪಾದಿಸಬಾರದು ಎಂಬ ವಿವೇಕ ಇದ್ದವರಿಗೆ,
ಸ್ವಾರ್ಥ ಅಸೂಯೆ ದ್ವೇಷ ಕೊಲೆ ಸುಲಿಗೆ ಡಂಬಾಚಾರ ದಬ್ಬಾಳಿಕೆ ಧಮಕಿ ಇಂತ ಅವಿವೇಕತನಗಳಿಂದ ದೂರ ಇರುವ ವಿವೇಕ ಇದ್ದವರಿಗೆ ವಿವೇಕಾನಂದ ಸ್ವಾಮಿಯವರ ಹುಟ್ಟು ಹಬ್ಬವನ್ನು ಆಚರಿಸುವ ನೈತಿಕತೆ ಇದೆಯೇ ಹೊರತು ರಾಜಕೀಯದ ಉದ್ದೇಶದಿಂದ ಮತ್ತೊಂದು ಧರ್ಮವನ್ನು ಹೀಯಾಳಿಸಲು ವಿವೇಕಾನಂದ ಅವರನ್ನು ಭಾಷಣದಲ್ಲಿ ಉಪಯೋಗಿಸಿಕೊಳ್ಳುವ ಆತ್ಮಗೇಡಿಗಳು ಸ್ವಾಮಿ ವಿವೇಕಾನಂದ ಅವರ ಜನ್ಮ ದಿನೋತ್ಸವವನ್ನು ಆಚರಿಸದಿರುವುದೇ ವಿವೇಕಾನಂದರಿಗೆ ಗೌರವ….
ಮೌಢ್ಯಗಳ ವಿರುದ್ಧ ಮೌಲ್ಯಗಳನ್ನು ಕಟ್ಟುವ ಮೂಲಕ ಹಿಂದುತ್ವವನ್ನು ಬಂಧುತ್ವದ ಮೇರು ಶಿಖರಕ್ಕೆ ಬೆಳೆಸಿದ ಸ್ವಾಮಿ ವಿವೇಕಾನಂದರ ಹೃದಯನ್ಮಂದಿರಕ್ಕೆ ಪ್ರಣಾಮಗಳು..
ಮನಸುಳಿ ಮೋಹನ್ ತರೀಕೆರೆ..