ಆಧಾರ್ ಇಲ್ಲದೆ ಪರದಾಟ ಸುಗ್ರಾಮ ಒಕ್ಕೂಟದಿಂದ ಸಹಾಯ.
1 min read![](https://avintv.com/wp-content/uploads/2025/01/IMG-20241231-WA03021.jpg)
ಆಧಾರ್ ಇಲ್ಲದೆ ಪರದಾಟ ಸುಗ್ರಾಮ ಒಕ್ಕೂಟದಿಂದ ಸಹಾಯ.…. ಮೂಡಿಗೆರೆ ತಾಲೂಕಿನ ಹಳೆಮೂಡಿಗೆರೆ ಪಂಚಾಯಿತಿ ವ್ಯಾಪ್ತಿಯ ಲೋಕವಳ್ಳಿ ಗ್ರಾಮದ ರಮೇಶ್ ಎಂಬುವವರು ಪೋಲಿಯೋ ಕಾಯಿಲೆಯಿಂದ 38 ವರ್ಷದಿಂದ ಬಳಲುತ್ತಿದ್ದು ಸರ್ಕಾರದಿಂದ ವಿವಿಧ ಯೋಜನೆಗಳ ಪ್ರಯೋಜನವನ್ನು ಪಡೆಯಲು ಆಧಾರ್ ಕಾರ್ಡ್ ಬಳಕೆ ಮಾಡಲಾಗುತ್ತಿದ್ದು ರಮೇಶ್ ರವರಿಗೆ ಆಧಾರ್ ಯೋಜನೆ ಪ್ರಾರಂಭವಾಗಿ ಇಲ್ಲಿಯವರೆಗೂ ಆಧಾರ್ ಕಾರ್ಡ್ ನೋಂದಾವಣೆ ಆಗಿರುವುದಿಲ್ಲ ಅವರ ಕೈ ಮತ್ತು ಕಾಲುಗಳು ಜಮ್ಮಗಟ್ಟಿದ್ದು ಸುಮಾರು ನಾಲ್ಕು ಐದು ಬಾರಿ ತಾಲೂಕಿನಲ್ಲಿ ಆಧಾರ್ ಮಾಡಿಸಲು ಪ್ರಯತ್ನಿಸಲಾಗಿತ್ತಾದರೂ ಬೆರಳಚ್ಚು ಸಿಗದೇ ಅರ್ಜಿಗಳು ತಿರಸ್ಕಾರಗೊಂಡಿದ್ದವು ಅವರಿಗೆ ಆಧಾರ್ ಕಾರ್ಡ್ ಸಿಗದ ಕಾರಣ ಅಂಗವಿಕಲರ ಮಾಸಿಕ ಪಿಂಚಣಿ ಮತ್ತು ರೇಷನ್ ಕಾರ್ಡ್ ಗಳಲ್ಲಿ ತಿದ್ದುಪಡಿ ಮಾಡಲಾಗದೆ ಅದರಿಂದ ವಂಚಿತರಾಗಿದ್ದರು ಈ ಸಮಸ್ಯೆಯನ್ನು ಸುಗ್ರಾಮ ಗ್ರಾಮ ಪಂಚಾಯಿತಿ ಚುನಾಯಿತ ಮಹಿಳಾ ಸದಸ್ಯರಾದ ಮತ್ತು ಹಳೆ ಮೂಡಿಗೆರೆ ಗ್ರಾಮ ಪಂಚಾಯಿತಿಯ ಸದಸ್ಯರಾದ ಜ್ಯೋತಿ ಸಲ್ದಾನ ಹಾಗೂ ಸೋನಿಯಾ ರವರು ಆಧಾರ್ ಮಾಡಿಸುವ ನಿಟ್ಟಿನಲ್ಲಿ ಪ್ರಯತ್ನಿಸಿದ್ದು ಜಿಲ್ಲಾಧಿಕಾರಿ ಮೀನಾ ನಾಗರಾಜ್ ರವರನ್ನು ಭೇಟಿ ಮಾಡಿ ಸಮಸ್ಯೆಗಳ ಬಗ್ಗೆ ಮನವಿಯನ್ನು ನೀಡಿದ್ದು ಮನವಿಗೆ ಸ್ಪಂದಿಸಿದ ಜಿಲ್ಲಾಧಿಕಾರಿಯವರು ಆಧಾರ್ ಮಾಡುವಂತೆ ಕ್ರಮ ಕೈಗೊಂಡಿರುತ್ತಾರೆ ಮೂಡಿಗೆರೆಯಿಂದ ರಮೇಶ್ ರವರು ಆಧಾರ್ ಮಾಡಿಸಲು ಆಂಬುಲೆನ್ಸ್ ಮೂಲಕ ಚಿಕ್ಕಮಗಳೂರಿಗೆ ವ್ಯವಸ್ಥೆ ಮಾಡಲಾಗಿದ್ದು ಆಧಾರ್ ನೋಂದಾವಣೆ ಕಚೇರಿಯಲ್ಲಿ ನೊಂದಾವಣೆ ಮಾಡಲಾಗಿದೆ ಬಹುತೇಕ ಆಧಾರ್ ಕಾರ್ಡ್ ಸಿಗುವ ನಿರೀಕ್ಷೆಯಲ್ಲಿದ್ದಾರೆ ಈ ಕಾರ್ಯಕ್ಕೆ ಸುಗ್ರಾಮ ಸಂಯೋಜಕರಾದ ನವೀನ್ ಆನೆದಿಬ್ಬ ಕಾಫಿ ನಾಡು ಸಮಾಜ ಸೇವಾ ಸಂಘದ ಅಧ್ಯಕ್ಷರಾದ ಹಸೈನಾರ್ ಬಿಳಗುಳ VRW ಪುಷ್ಪ.ಸಮಾಜ ಸೇವಕರಾದ ಅಬ್ದುಲ್ ರೆಹಮಾನ್ ಜಾಗೃತಿ ವೇದಿಕೆ ಸದಸ್ಯರಾದ ರೇವತಿ ಲೋಕವಳ್ಳಿ ಮತ್ತು ಜಗದೀಶ್ ಅಂಬುಲೆನ್ಸ್ ಚಾಲಕ ರವೀಂದ್ರ ಹಾಗೂ ಗ್ರಾಮಸ್ಥರು ಕೈಜೋಡಿಸಿದ್ದರು💐