ದೆಹಲಿ ಗಣರಾಜ್ಯೋತ್ಸವ ಪರೇಡ್‌ನಲ್ಲಿ ಭಾಗವಹಿಸಲು ಕಾರ್ಕಳ ಭುವನೇಂದ್ರ ಕಾಲೇಜಿನ ಇಬ್ಬರು ವಿದ್ಯಾರ್ಥಿಗಳು ಆಯ್ಕೆ
1 min readದೆಹಲಿ ಗಣರಾಜ್ಯೋತ್ಸವ ಪರೇಡ್‌ನಲ್ಲಿ ಭಾಗವಹಿಸಲು ಕಾರ್ಕಳ ಭುವನೇಂದ್ರ ಕಾಲೇಜಿನ ಇಬ್ಬರು ವಿದ್ಯಾರ್ಥಿಗಳು ಆಯ್ಕೆ
ದೆಹಲಿಯಲ್ಲಿ ಜ. 26ರಂದು ನಡೆಯುವ
ಗಣರಾಜ್ಯೋತ್ಸವ ಸಮಾರಂಭದ ಪರೇಡ್‌ನಲ್ಲಿ ಪ್ರಧಾನಿಯವರ ರ್ಯಾಲಿಯಲ್ಲಿ ಭಾಗವಹಿಸಲು ಶ್ರೀ ಭುವನೇಂದ್ರ ಕಾಲೇಜಿನ ಎನ್‌ಸಿಸಿ ವಿದ್ಯಾರ್ಥಿಗಳಾದ ಪನ್ನಗ ಆರ್. ಮತ್ತು ದೀಕ್ಷಿತಾ ಎಸ್. ಆಯ್ಕೆಯಾಗಿದ್ದಾರೆ. ಪನ್ನಗ ತೃತೀಯ ವರ್ಷದ ಬಿ.ಸಿ.ಎ. ವಿದ್ಯಾಭ್ಯಾಸ ಮಾಡುತ್ತಿದ್ದು, ಕಳಸದ ರಮೇಶ್ ರಾವ್ ಹೆಚ್. ಎನ್. ಮತ್ತು ಗಿರೀಜಾ ಎಸ್. ದಂಪತಿ ಪುತ್ರ. ದೀಕ್ಷಿತಾ ಎಸ್. ತೃತೀಯ.ವರ್ಷದ ವಿದ್ಯಾರ್ಥಿನಿ.ಗಿರಿಧರ್
ಶೆಟ್ಟಿಗಾರ್ ಮತ್ತು ವಿಶಾಲಾಕ್ಷಿ ದಂಪತಿ ಪುತ್ರಿ.