ಚಿಕ್ಕಮಗಳೂರ : ಭೀಮಾ ಕೋರೆಗಾಂವ್ ವಿಜಯೋತ್ಸವ….
1 min readಚಿಕ್ಕಮಗಳೂರ : ಭೀಮಾ ಕೋರೆಗಾಂವ್ ವಿಜಯೋತ್ಸವ
ಭೀಮಾ ಕೋರೆಗಾಂವ್ ವಿಜಯೋತ್ಸವದ ಅಂಗವಾಗಿ ದಲಿತ ಸಂಘರ್ಷ ಸಮಿತಿ ಹಾಗೂ ಸಮಾನ ಮನಸ್ಕರ ಮುಖಂಡರು ಇಲ್ಲಿನ ಆಜಾದ್‌ಪಾರ್ಕ್ ವೃತ್ತದಲ್ಲಿ ಕೇಕ್ ಕತ್ತರಿಸಿ ಪಟಾಕಿ ಸಿಡಿಸಿ ವಿಜಯೋತ್ಸವ ಅತ್ಯಂತ ಆಚರಿಸಿದರು.
ಬಿಎಸ್ಪಿ ರಾಜ್ಯ ಕಾರ್ಯದರ್ಶಿ ಕೆ.ಟಿ.ರಾಧಾಕೃಷ್ಣ ಮಾತನಾಡಿ ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪನಿ ಮತ್ತು ಪೇಶ್ವೆಗಳ ನಡುವೆ ಭೀಮಾ ಕೋರೆಗಾಂವ್ ನಲ್ಲಿ ಜನವರಿ ೧, ೧೮೧೮ರಲ್ಲಿ ಐತಿಹಾಸಿಕ ಯುದ್ದ ದಲ್ಲಿ ಐನೂರು ಮಂದಿ ದಲಿತ ಹೋರಾಟಗಾರರು ಆಹಾರ, ನೀರು ಹಾಗೂ ವಿಶ್ರಾಂತಿಯಿಲ್ಲದೆ ಸಾವಿರಾರು ಮಂದಿ ಸೈನ್ಯದ ವಿರುದ್ಧ ಕಾದಾಡಿದ ಕ್ಷಣವು ಎಲ್ಲರಿಗೂ ಸ್ಪೂರ್ತಿದಾಯಕ ಎಂದರು.
ಪರಿಶಿಷ್ಟರು, ಹಿಂದುಳಿದ ಮತ್ತು ಶೋಷಿತರ ಶೌರ್ಯದ ಸಂಕೇತವೇ ಭೀಮಾ ಕೋರೆಗಾಂವ್ ಯುದ್ಧವಾಗಿದೆ. ಪೇಶ್ವೆಗಳ ಆಡಳಿತದಲ್ಲಿದ್ದ ಜಾತಿ, ಅಸ್ಪೃಶ್ಯತೆ, ಮೇಲುಕೀಳುಗಳ ವಿರುದ್ಧ ನಿಂತು ಮಾನವೀ ಯ ವೌಲ್ಯಗಳನ್ನು ಪಡೆದು ಕೊಳ್ಳಲು ಹಂಬಲಿಸುವ ಮಹಾರ್ ಸೈನಿಕರ ಧೈರ್ಯ ಸಾಹಸ, ಕೆಚ್ಚೆದೆಯ ಹೋ ರಾಟವಾಗಿದೆ ಎಂದು ಹೇಳಿದರು.
ದಸಂಸ ವಿಭಾಗೀಯ ಸಂಚಾಲಕ ಮರ್ಲೆ ಅಣ್ಣಯ್ಯ ದಸಂಸ ಮುಖಂಡರಾ ಬಾಲಕೃಷ್ಣ ಬಿಳೇಕಲ್ಲು, ಸಂತೋಷ್ ಲಕ್ಯಾ, ಹಿರೇ ಮಗಳೂರು ರಾಮಚಂದ್ರ, ಹರಿಯಪ್ಪ, ಜವರಯ್ಯ, ವೀರಭದ್ರಯ್ಯ, ಪಿ.ಪರಮೇಶ್ ಮತ್ತಿತರರಿದ್ದರು.
ಬಿಎಸ್ಪಿ ಯಿಂದ ಭೀಮಾ ಕೋರೆಗಾಂವ್ ವಿಜಯೋತ್ಸವ
ಚಿಕ್ಕಮಗಳೂರು :- ಭೀಮಾ ಕೋರೆಗಾಂವ್ ವಿಜಯೋತ್ಸವದ ಪ್ರಯುಕ್ತ ಇಲ್ಲಿನ ಆಜಾ ದ್ ಪಾರ್ಕ್ ವೃತ್ತದಲ್ಲಿ ಭೋಜನ ಸಮಾಜ ಮುಖಂಡರು ಕೇಕ್ ಕತ್ತರಿಸಿ ಸಿಹಿ ಹಂಚುವ ಮೂಲಕ ವಿಜ ಯೋತ್ಸವ ಆಚರಿಸಿದರು.
ಬಿಎಸ್ಪಿ ರಾಜ್ಯ ಕಾರ್ಯದರ್ಶಿ ಕೆ.ಟಿ.ರಾಧಾಕೃಷ್ಣ, ದಸಂಸ ಜಿಲ್ಲಾ ಸಂಚಾಲಕ ಕಬ್ಬಿಕೆರೆ ಮೋಹನ್ ಕುಮಾರ್, ಮಹಿಳಾ ತಾಲೂಕು ಸಂಚಾಲಕಿ ಗೀತಾ, ಬಿಎಸ್ಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಕೆ ಟಿ ರಾಧಾಕೃಷ್ಣ, ಮುಖಂಡರಾದ ಗಂಗಾಧರ್, ಹರೀಶ್, ಸುಧಾ, ಮಂಜುಳಾ, ಭೀಮಯ್ಯ, ವಕೀಲ ದೊಡ್ಡಯ್ಯ ಗಣೇಶ್ ಇದ್ದರು.