ಸರ್ಕಾರದ ಕ್ರಮಕ್ಕೆ ಹಿರೇಮಗಳೂರು ರಾಮಚಂದ್ರ ಸ್ವಾಗತ
1 min readಸರ್ಕಾರದ ಕ್ರಮಕ್ಕೆ ಹಿರೇಮಗಳೂರು ರಾಮಚಂದ್ರ ಸ್ವಾಗತ.
ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಸಮುದಾಯದ ಜನರಿಗೆ ಅಪರೂಪದ ಮತ್ತು ದುಬಾರಿ ವೆಚ್ಚದ 17 ಕಾಯಿಲೆಗಳ ಕಿತ್ಸಾ ವೆಚ್ಚವನ್ನು ಕಾರ್ಪಸ್ ಫಂಡ್ ಸ್ಥಾಪಿಸಿ ಭರಿಸುವ ಯೋಜನೆ ಜಾರಿಗೊಳಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿರುವುದನ್ನು ಚಿಕ್ಕಮಗಳೂರು ಜಿಲ್ಲಾ ಕಾಂಗ್ರೆಸ್ ಕಾರ್ಯದರ್ಶಿ ಹಿರೇಮಗಳೂರು ರಾಮಚಂದ್ರ ಸ್ವಾಗತಿಸಿದ್ದಾರೆ.
ಅವರು ವಾಹಿನಿಯೊಂದಿಗೆ ಮಾತನಾಡಿ ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟಿನಲ್ಲಿ ಪರಿಶಿಷ್ಟರ ಕಲ್ಯಾಣ ಯೋಜನೆ (ಎಸ್ಸಿಎಪಿ, ಟಿಎಸ್ಪಿ ) ಅಡಿಯಲ್ಲಿ ಪ್ರಸ್ತುತ ಲಭ್ಯವಿರುವ ರೂ 47 ಕೋಟಿ ಮೊತ್ತದಲ್ಲಿ ಕಾರ್ಪಸ್ ಫಂಡ್ ಸ್ಥಾಪಿಸಿ ಅದರ ಬಡ್ಡಿಯ ಮೊತ್ತದಿಂದ ಈ ಕಾಯಿಲೆಗಳ ಚಿಕಿತ್ಸಾ ವೆಚ್ಚ ಭರಿಸಲಾಗುತ್ತದೆ ಎಂದಿದ್ದಾರೆ.
ವಿರಳ ಮತ್ತು ದುಬಾರಿ ವೆಚ್ಚದ ಒಟ್ಟು 33 ಕಾಯಿಲೆಗಳಲ್ಲಿ 16 ಕಾಯಿಲೆಗಳಿಗೆ ರಾಜ್ಯ ಸರ್ಕಾರ ಆಯುಷ್ಮಾನ್ ಭಾರತ್ ಆರೋಗ್ಯ ಕರ್ನಾಟಕ ಜೀವ ಸಾರ್ಥಕತೆ ಮುಂತಾದ ಯೋಜನೆಗಳಲ್ಲಿ ಚಿಕಿತ್ಸೆ ಒದಗಿಸಲಾಗುತ್ತಿದೆ. ಉಳಿದ 17 ಕಾಯಿಲೆಗಳ ಚಿಕಿತ್ಸಾ ವಿಧಾನಗಳ ವೆಚ್ಚವನ್ನು ಬಡ್ಡಿ ಮೊತ್ತದಲ್ಲಿ ಭರಿಸಲಾಗುವುದು ಎಂದು ಆರೋಗ್ಯ ಇಲಾಖೆ ತಿಳಿಸಿದೆ ಎಂದಿದ್ದಾರೆ.
ಮುಂದಿನ ದಿನಗಳಲ್ಲಿ ಕೇಂದ್ರ ಅಥವಾ ರಾಜ್ಯ ಸರ್ಕಾರ ಯಾವುದಾದರೂ ಯೋಜನೆಗಳಲ್ಲಿ ಎಲ್ಲಾ ಸಮುದಾಯಗಳ ಜನಸಂಖ್ಯೆಗೆ ಅನ್ವಯವಾಗುವಂತೆ ಯಾವುದಾದರೂ ಒಂದನ್ನು ಸೇರಿಸಿದರೆ ಅವುಗಳನ್ನು ಈ ಯೋಜನೆಯಿಂದ ಯೋ ಕೈ ಬಿಡಲಾಗುವುದು ಎಂದು ಇಲಾಖೆ ತಿಳಿಸಿದೆ ಎಂದು ಹೇಳಿದ್ದಾರೆ.
ಇತ್ತೀಚಿಗೆ ನಡೆದ ಸಚಿವ ಸಂಪುಟ ಸಭೆಯಲ್ಲಿ 17 ಕಾಯ್ದೆಗಳ ಚಿಕಿತ್ಸಾ ವೆಚ್ಚ ಬರಿಸುವ ಯೋಜನೆಗೆ ಸಚಿವ ಸಂಪುಟ ಸಭೆ ಒಪ್ಪಿಗೆ ನೀಡಿದ್ದು, ರೂ 7 ಲಕ್ಷ ಚಿಕಿತ್ಸಾ ವೆಚ್ಚ ತಗಲುವ ಅಸ್ತಿಮಜ್ಜೆ ಕಾಯಿಲೆ, ರೂ 3.25 ಲಕ್ಷ ವೆಚ್ಚದ ಆಂಜಿಯೋ ಪ್ಲಾಸ್ಟಿ, ಟು ನಾಲ್ಕು ಲಕ್ಷಕ್ಕೂ ಹೆಚ್ಚು ತಗಲುವ ಹೃದಯ ಸಂಬಂಧಿ ಕಾಯಿಲೆಗಳು ಈ 17 ಕಾಯಿಲೆಗಳ ಚಿಕಿತ್ಸಾ ಪಟ್ಟಿಯಲ್ಲಿದ್ದು, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ವ್ಯಕ್ತಿಗೆ ಬರುವ ಜನರು ಸದುಪಯೋಗಪಡಿಸಿಕೊಳ್ಳುವಂತೆ ಮನವಿ ಮಾಡಿದ್ದಾರೆ.