……ನಿಧನ….
1 min read*ತಿಪ್ಪನಹಳ್ಳಿ ಎಸ್ಟೇಟ್ ಅರಳುಗುಪ್ಪೆ ಮನೆತನದ ಎ.ಬಿ.ಮಲ್ಲಿಕಾರ್ಜುನ್ ನಿಧನ*
ಚಿಕ್ಕಮಗಳೂರು ಕೈಮರ ಸಮೀಪದ ತಿಪ್ಪನಹಳ್ಳಿ ಎಸ್ಟೇಟಿನ ಎ.ಬಿ.ಮಲ್ಲಿಕಾರ್ಜುನ್ ಅವರು ಇಂದು ಬೆಳಿಗ್ಗೆ ಘಂಟೆ 11.20ರ ವೇಳೆಗೆ ಬೆಂಗಳೂರಿನಲ್ಲಿ ನಿಧನರಾಗಿದ್ದಾರೆ .
ತಿಪ್ಪನಹಳ್ಳಿಯ ಅರಳುಗುಪ್ಪೆ ಮನೆತನದ ಮಾಜಿಶಾಸಕ ಎ.ಎಂ.ಬಸವೇಗೌಡ ಮತ್ತು ಎ.ಬಿ.ಗೌರಮ್ಮಬಸವೇಗೌಡ ಅವರ ಪ್ರಥಮ ಪುತ್ರರಾಗಿದ್ದ ಮಲ್ಲಿಕಾರ್ಜುನ್, ಕಳೆದ ನಾಲ್ಕು ದಶಕಗಳಿಂದ ಬೆಂಗಳೂರಿನಲ್ಲಿ ಕೈಗಾರಿಕೋದ್ಯಮಿಯಾಗಿ ನೆಲೆಸಿದವರು. ಸಮಾಜಿಕ ಮತ್ತು ಧಾರ್ಮಿಕ ಸೇವಾ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದ ಮಲ್ಲಿಕಾರ್ಜುನ್ ಅವರು ಯಶಸ್ವಿ ಉದ್ಯಮಿಯಾಗಿ, ಹಲವು ಸಂಘ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸಿದ್ದರು. ಕೆಲ ದಿನಗಳಿಂದ ದೈಹಿಕ ತೊಂದರೆಯಿoದ ಬಳಲುತ್ತಿದ್ದ ಅವರು,ಇಂದು ಮಧ್ಯಾಹ್ನ ವಿಧಿವಶರಾದರೆಂದು ಅವರ ಸಹೋದರ ಎ.ಬಿ.ಸುದರ್ಶನ್ ತಿಳಿಸಿದ್ದಾರೆ.
ಇಂದು ರಾತ್ರಿ ವೇಳೆಗೆ ಅವರ ಪಾರ್ಥಿವ ಶರೀರವನ್ನು ಚಿಕ್ಕಮಗಳೂರು ಸಮೀಪದ ತಿಪ್ಪನಹಳ್ಳಿ ಎಸ್ಟೇಟಿನ ತೋಟದ ಮನೆಗೆ ತರಲಾಗುತ್ತದೆ,
ನಾಳೆ ಬೆಳಗ್ಗೆ ಮೃತರ ಅಂತಿಮ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ.
ನಾಳೆ ಮಧ್ಯಾಹ್ನ 3-00 ಘಂಟೆಯ ನಂತರ ತಿಪ್ಪನಹಳ್ಳಿ ಎಸ್ಟೇಟ್ ತೋಟದ ಮನೆಯ ಆವರಣದಲ್ಲಿ ಅಂತಿಮ ಸಂಸ್ಕಾರ ನೆರವೇರಿಸಲಾಗುವುದು ಎಂದು ಕುಟುಂಬದ ಮೂಲಗಳು ತಿಳಿಸುವೆ.
ದಿವಂಗತರು ಪತ್ನಿ ಮಂಗಳಾ, ಪುತ್ರ ರಾಘವೇಂದ್ರ, ಪುತ್ರಿಯರಾದ ರಚನಾ ಮತ್ತು ಮೋಹಿತಾ ಸೇರಿದಂತೆ ಅಪಾರಬಂಧು-ಮಿತ್ರರನ್ನು ಅಗಲಿದ್ದಾರೆ.
ಸರಳ ಸಜ್ಜನಿಕೆಯೊಂದಿಗೆ ಮಿತ ಭಾಷೆಯಾಗಿದ್ದ ಮಲ್ಲಿಕಾರ್ಜುನ್ ಅವರ ಈ ಅಗಲಿಕೆ ಅತ್ಯಂತ ನೋವಿನ ಸಂಗತಿ ಮತ್ತು ತುಂಬಲಾರದ ನಷ್ಟವಾಗಿದೆ.
ಸಮಾಜಿಕವಾಗಿ, ಸಾಂಸ್ಕೃತಿಕವಾಗಿ, ಧಾರ್ಮಿಕವಾಗಿ ಹತ್ತು ಹಲವು ಚಟುವಟಿಕೆಗಳಿಗೆ ಕೊಡಗೈದಾನಿಗಳಾಗಿ ಸಲಹೆ ಸಹಕಾರ ನೀಡುತ್ತಿದ್ದ ಮಲ್ಲಿಕಾರ್ಜುನ್ ರವರ ಈ ಅಗಲಿಕೆ ಮರೆಯಲಾಗದ ನೆನಪಾಗಿ ನಮ್ಮೊಳಗೆ ಒಳಿದಿದೆ.
ಅಗಲಿದ ಈ ಹಿರಿಯ ಚೇತನಕ್ಕೆ ಚಿಕ್ಕಮಗಳೂರು ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು, ಮತ್ತು ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ ಹಾಗೂ ಕದಳಿ ಮಹಿಳಾ ಜಿಲ್ಲಾ ವೇದಿಕೆಯ ಪರವಾಗಿ ಭಾವಪೂರ್ಣ ನಮನಗಳು.
*ಸಂತಾಪಗಳೊಂದಿಗೆ,,,*🙏🌹
✒️ಡಿ.ಎಂ. ಮಂಜುನಾಥಸ್ವಾಮಿ