*ಪೇಪರ್ ಲೋಟದಲ್ಲಿ ಬಿಸಿ ಚಹಾ, ಕಾಫಿ ಸೇವನೆ ಕ್ಯಾನ್ಸರ್ ಕಾರಕ*
1 min read*ಪೇಪರ್ ಲೋಟದಲ್ಲಿ ಬಿಸಿ ಚಹಾ, ಕಾಫಿ ಸೇವನೆ ಕ್ಯಾನ್ಸರ್ ಕಾರಕ*
*ನಿಷೇಧವಾಗುತ್ತಾ ಪೇಪರ್ ಲೋಟ?*
ಮನೆಯಲ್ಲಿ ಸ್ಟೀಲ್ ಲೋಟದಲ್ಲಿ ಚಹಾ, ಕಾಫಿ ಹೀರುವುದೇನೋ ಸರಿ. ಆದರೆ, ಹೋಟೆಲ್ನಲ್ಲಿ ಅಥವಾ ಅಂಗಡಿಗಳಲ್ಲಿ ಪೇಪರ್ ಲೋಟಗಳಲ್ಲಿ ಟೀ, ಕಾಫಿ ಹೀರುವವರು ಇನ್ನು ಎಚ್ಚರಿಕೆ ವಹಿಸಬೇಕಿದೆ. ಚಹಾ ಅಥವಾ ಕಾಫಿಯನ್ನು ಪೇಪರ್ ಲೋಟದಲ್ಲಿ ಕುಡಿಯುತ್ತಿದ್ದರೆ ಇವಾಗಿನಿಂದಲೇ ನಿಲ್ಲಿಸಿ. ಚಹಾ, ಕಾಫಿ ಕುಡಿದರೆ ಮನಸಿಗೆ ಹಿತವೆನಿಸುತ್ತದೆ ಎಂದು ನಾವು ಸಿಕ್ಕ ಸಿಕ್ಕ ಕಡೆ ಪೇಪರ್ ಲೋಟದಲ್ಲಿ ಬಿಸಿ ಟೀ, ಕಾಫಿ ಕುಡಿಯುತ್ತಿದ್ದರೆ ಇದೇ ನಮ್ಮ ಆರೋಗ್ಯಕ್ಕೆ ಮಾರಕವಾಗಬಹುದು.
ಪ್ಲೇಪರ್ ಲೋಟದಲ್ಲಿ ಆರೋಗ್ಯ ಹಾನಿಕಾರಕವಾಗಿರುವ ಅಂಶ ಇರುವುದು ಆಹಾರ ಸುರಕ್ಷತಾ ಇಲಾಖೆ ನಡೆಸಿದ ಪರೀಕ್ಷೆಯಿಂದ ಬಯಲಾಗಿದೆ. ಪೇಪರ್ ಲೋಟದಲ್ಲಿ ಕ್ಯಾನ್ಸರ್ ಕಾರಕ ಅಂಶ ಇದೆ ಎಂಬುದು ತಿಳಿದುಬಂದಿದೆ.
*ಆಹಾರ ಸುರಕ್ಷತಾ ಇಲಾಖೆ ವರದಿಯಲ್ಲಿ ಏನಿದೆ?*
ಆಹಾರ ಇಲಾಖೆ ಪೇಪರ್ ಲೋಟಗಳನ್ನು ಪ್ರಯೋಗಾಲಯದಲ್ಲಿ ಪರೀಕ್ಷೆ ಮಾಡಿಸಿದ್ದು, ಅವುಗಳ ಬಳಕೆಯಿಂದ ಕ್ಯಾನ್ಸರ್ ಬರುವ ಅಂಶ ಪತ್ತೆಯಾಗಿದೆ. ಪೇಪರ್ ಲೋಟದಲ್ಲಿ ಶೇಕಡಾ 20 ರಷ್ಟು ಪ್ಲಾಸ್ಟಿಕ್ ಬಳಕೆ ಮಾಡಲಾಗುತ್ತಿದೆ. ಇದರಿಂದಾಗಿ, ಅವುಗಳಲ್ಲಿ ಬಿಸಿಯಾದ ಟೀ, ಕಾಫಿ ಹಾಕಿದ್ರೆ ಪ್ಲಾಸ್ಟಿಕ್ ಕರಗುತ್ತದೆ. ಕರಗಿದ ಪ್ಲಾಸ್ಟಿಕ್ ಅಂಶ ಮನುಷ್ಯನ ದೇಹ ಸೇರಿದರೆ ಕ್ಯಾನ್ಸರ್ ಬರುವ ಸಾಧ್ಯತೆ ಅತೀ ಹೆಚ್ಚು. ಹೀಗಾಗಿ ಪ್ಲಾಸ್ಟಿಕ್ ಅಂಶ ಇಲ್ಲದ ಕಪ್ಗಳ ಬಳಕೆಗೆ ಆರೋಗ್ಯ ಇಲಾಖೆ ಸೂಚನೆ ನೀಡಿದೆ ಎಂದು ಆಹಾರ ಮತ್ತು ಸುರಕ್ಷತಾ ಇಲಾಖೆಯ ಶ್ರೀನಿವಾಸ್ ತಿಳಿಸಿದ್ದಾರೆ.
*ನಿಷೇಧವಾಗುತ್ತಾ ಪೇಪರ್ ಲೋಟ?*
ಪ್ಲಾಸ್ಟಿಕ್ ಮಿಶ್ರಿತ ಪೇಪರ್ ಕಪ್ ಅಪಾಯಕರ ಎಂಬುದು ಬೀದಿ ಬದಿ ವ್ಯಾಪಾರಿಗಳಿಗೂ ಮನದಟ್ಟಾಗಿದೆ. ಹೀಗಾಗಿ ಈಗಾಗಲೇ ಪ್ಲಾಸ್ಟಿಕ್ ಅಂಶ ಇರುವ ಪೇಪರ್ ಕಪ್ ಬಳಕೆ ಶೇಕಡ 90ರಷ್ಟು ಕಡಿಮೆ ಮಾಡಲಾಗಿದೆ ಎಂದು ಬೆಂಗಳೂರು ಬೀದಿಬದಿ ವ್ಯಾಪಾರಿಗಳ ಸಂಘದ ಅಧ್ಯಕ್ಷ ರಂಗಸ್ವಾಮಿ ತಿಳಿಸಿದ್ದಾರೆ.