ಬಾಬಾ ಸಾಹೇಬ್ ಅಂಬೇಡ್ಕರ್ ರವರ ಪರಿನಿರ್ವಾಣ ದಿನ…ಮೂಡಿಗೆರೆ.
1 min readಬಾಬಾ ಸಾಹೇಬ್ ಅಂಬೇಡ್ಕರ್ ರವರ ಪರಿನಿರ್ವಾಣ ದಿನ…ಮೂಡಿಗೆರೆ.
ಛಲವಾದಿ ಮಹಾಸಭಾ ಮೂಡಿಗೆರೆ ಇವರ ನೇತೃತ್ವದಲ್ಲಿ ಬಾಬಾ ಸಾಹೇಬ್ ಅಂಬೇಡ್ಕರ್ ರವರ ಪರಿನಿರ್ವಾಣ ದಿನ ವನ್ನು ಮೂಡಿಗೆರೆಯಲ್ಲಿ ನೂರಾರು ಸಂಖ್ಯೆಯ ಛಲವಾದಿ ಬಂಧುಗಳೊಂದಿಗೆ ಆಚರಿಸಲಾಯಿತು,
ಐಬಿ ಯಿಂದ ಕ್ಯಾಂಡಲ್ ಗಳನ್ನು ಹಿಡಿದು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮುಖಾಂತರ ಸಾಗಿ ಕೊನೆಗೆ ಲಯನ್ಸ್ ವೃತ್ತದಲ್ಲಿ ಬಾಬಾ ಸಾಹೇಬ್ ಅಂಬೇಡ್ಕರ್ ರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮುಖಾಂತರ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.
ಈ ಸಂದರ್ಭದಲ್ಲಿ ಮಹಾಸಭಾದ ಅಧ್ಯಕ್ಷರಾದ ಬೆಟ್ಟಗೆರೆ ಮಂಜುನಾಥ್,ಮಾಜಿ ಸಚಿವರಾದ ಬಿಬಿ ನಿಂಗಯ್ಯ,ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಅನಂತ್,ದೀಪಕ್ ದೊಡ್ಡಯ್ಯ ಇವರುಗಳು ಅಂಬೇಡ್ಕರ್ ವಿಚಾರಧಾರೆ ತಿಳಿಸಿದರು.
ಈ ಕಾರ್ಯಕ್ರಮದಲ್ಲಿ ಮಹಾಸಭಾದ ಅಧ್ಯಕ್ಷರಾದ ಬೆಟ್ಪಗೆರೆ ಮಂಜುನಾಥ್, ಕಾರ್ಯದರ್ಶಿ ರಾಜೇಶ್ ಬಗ್ಗಸಗೂಡು, ಖಜಾಂಚಿ ಹೆಸಗಲ್ ಗಿರೀಶ್,ಹೋಬಳಿ ಅಧ್ಯಕ್ಷರುಗಳು ಕೋಮರಾಜ್ ,ಬೈರಿಗದ್ದೆ ರಮೇಶ್,ಕೆಂಚಯ್ಯ,ಹಿರಿಯ ಪೋಷಕರಾದ ಎಂ ಎಸ್ ಕೃಷ್ಣ,ಬಕ್ಕಿ ಕುಮಾರ್,ಕೆಡಿಪಿ ಸದಸ್ಯರಾದ ಸುರೇಂದ್ರ ಉಗ್ಗೆಹಳ್ಳಿ, ಶಿವಣ್ಣ ಛಲವಾದಿ ಮಹಾಸಭಾ ಹಿರಿಯ ಹಾಗೂ ಕಿರಿಯ ನಾಯಕರು ವಿವಿಧ ಸಂಘಟನೆಗಳ ನಾಯಕರುಗಳು,ಶಾಲಾ, ಕಾಲೇಜು ಹಾಸ್ಟೆಲ್ ವಿದ್ಯಾರ್ಥಿಗಳು ಮತ್ತು ಛಲವಾದಿ ಬಂಧುಗಳು ಹಾಜರಿದ್ದರು.
ವರದಿ……
ಗಿರೀಶ್ ಹಂಡುಗುಳಿ
(ಅಧ್ಯಕ್ಷರು ಸಾಮಾಜಿಕ ಜಾಲತಾಣ ವಿಭಾಗ ಛಲವಾದಿ ಮಹಾಸಭಾ ಮೂಡಿಗೆರೆ )