AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

“ಎಸ್.ಸಿ,ಎಸ್.ಟಿ ಸಮುದಾಯದ ಕಡೆಗಣನೆ ಮಾಡಿದ ಕೈ ಸರ್ಕಾರ : ಸಚಿನ್ ಬಾನಹಳ್ಳಿ ಟೀಕೆ.”

1 min read

ಮೂಡಿಗೆರೆ (Mudigere) : ರಾಜ್ಯದಲ್ಲಿ ಅಧಿಕಾರ ಚುಕ್ಕಾಣಿ ಹಿಡಿದಿರುವ ಕಾಂಗ್ರೆಸ್ ಸರಕಾರ ಎಸ್.ಸಿ,ಎಸ್.ಟಿ ಸಮುದಾಯವನ್ನು ಸಂಪೂರ್ಣವಾಗಿ ಕಡೆಗಣಿಸಿದೆ ಎಂದು ಬಿಜೆಪಿ ಎಸ್.ಸಿ ಮೋರ್ಚಾದ ತಾಲ್ಲೂಕು ಅಧ್ಯಕ್ಷ ಸಚಿನ್ ಬಾನಹಳ್ಳಿ ಹೇಳಿದರು.

ಅವರು ದಿನಾಂಕ 23/07/2024ರ ಮಂಗಳವಾರ ನಮ್ಮ ವಾಹಿನಿಯೊಂದಿಗೆ ಮಾತನಾಡಿ,ಬಿಜೆಪಿ ಸರಕಾರ ಎಸ್.ಸಿ,ಎಸ್.ಟಿ ಸಮುದಾಯ ಮಾತ್ರವಲ್ಲ ತಾರತಮ್ಯ ಮಾಡದೇ ಎಲ್ಲಾ ಸಮುದಾಯಗಳ ಅಭಿವೃದ್ಧಿಗಾಗಿ ಶ್ರಮಿಸಿದೆ.ಆದರೆ ಕಾಂಗ್ರೆಸ್ ಸರಕಾರ ಎಸ್.ಸಿ,ಎಸ್.ಟಿ ಸಮುದಾಯದ ಅಭಿವೃದ್ಧಿ ಬಗ್ಗೆ ಕಿಂಚಿತ್ತೂ ಕಾಳಜಿ ಇಲ್ಲದೇ ಎಸ್.ಸಿ ಎಸ್.ಟಿ ಗೆ ಮೀಸಲಿಡಬೇಕಾದ ಅನುದಾನವನ್ನು ಬೇರೆ ಯೋಜನೆಗಳಿಗೆ ಬಳಕೆ ಮಾಡಿಕೊಂಡು ಅಧಿಕಾರ ದುರ್ಬಳಕೆ ಮಾಡಿಕೊಳ್ಳುತ್ತಿದೆ.ಕಾಂಗ್ರೆಸ್‌ನವರು ನಾವು ಯಾವಾಗಲೂ ದಲಿತರ ಹಾಗೂ ರೈತರ ಪರವಾಗಿ ಕೆಲಸ ಮಾಡುತ್ತೇವೆಂದು ಅಧಿಕಾರಕ್ಕೆ ಬಂದ ಬಳಿಕ ದಲಿತರನ್ನು ಸಂಪೂರ್ಣ ಕಡೆಗಣಿಸಿದ್ದಾರೆ.ಎಸ್‌.ಇ.ಪಿ,ಟಿ.ಎಸ್‌.ಪಿಗೆ ಬರುವ ಅನುದಾನ ಇಂದಿಗೂ ಬಿಡುಗಡೆ ಮಾಡಿಲ್ಲ. ಇದರಿಂದ ದಲಿತ ಸಮಾಜದ ಅಭಿವೃದ್ಧಿ ಕುಂಟಿತವಾಗಿದೆ ಎಂದು ದೂರಿದರು.ತಾಲ್ಲೂಕಿನಲ್ಲಿ ಮಳೆ ಆರ್ಭಟಕ್ಕೆ ರಸ್ತೆ ಸೇತುವೆ ಹಾಳಾಗಿದೆ.100ಕ್ಕೂ ಅಧಿಕ ಮನೆ ಕುಸಿದು ಬಿದ್ದಿದೆ. ಅದರಲ್ಲಿ ದಲಿತರ ಮನೆಯೇ ಹೆಚ್ಚಾಗಿ ಕುಸಿದಿದೆ. ಅವರಿಗೆ ಪರಿಹಾರ ಕೊಡಲು ಸರಕಾರದಲ್ಲಿ ಹಣವಿಲ್ಲ. ಹಿಂದೆ ಬಿಜೆಪಿ ಸರಕಾರ ಸಂಪೂರ್ಣ ಬಿದ್ದ ಮನೆಗೆ 5 ಲಕ್ಷ ರೂ ಪರಿಹಾರ ನೀಡಿತ್ತು. ಆದರೆ ಕಾಂಗ್ರೆಸ್ ಅಧಿಕಾರಕ್ಕೆ ಬಂದ ಮೇಲೆ ಸಂಪೂರ್ಣವಾಗಿ ಕುಸಿದ ಮನೆಗೆ ಕೇವಲ 1.2 ಲಕ್ಷ ರೂ ಪರಿಹಾರ ನೀಡಲಾಗುತ್ತಿದೆ. ಈ ಬಗ್ಗೆ ಕಾಂಗ್ರೆಸ್ ಶಾಸಕರೇ ಸದನದಲ್ಲಿ ಅನುದಾನ ಹೆಚ್ಚು ನೀಡಬೇಕೆಂದು ಕೇಳಿಕೊಂಡಿರುವುದು ದುರ್ದೈವ. ಭ್ರಷ್ಟಾಚಾರ ರಹಿತ ಆಡಳಿತ ನೀಡುತ್ತೇವೆಂದು ಕೇವಲ ಒಂದು ವರ್ಷದಲ್ಲಿ ವಾಲ್ಮಿಕಿ ಹಾಗೂ ಮುಡಾ ಹಗರಣದಲ್ಲಿ ಕಾಂಗ್ರೆಸ್ ಸರಕಾರ ಭಾಗಿಯಾಗಿರುವುದು ಬಯಲಿಗೆ ಬಂದಿದೆ. ದಾಖಲಾತಿ ತಿದ್ದುಪಡಿ ಮಾಡಿ ದಲಿತರಿಗೆ ನೀಡಬೇಕಾದ ನಿವೇಶನವನ್ನು ರಾಜಕಾರಣಿಗಳು ಪಡೆದಿರುವುದು ನಾಚಿಗೇಡಿನ ಸಂಗತಿ.ವಾಲ್ಮಿಕಿ ಮತ್ತು ಮುಡಾ ಹಗರಣ ಸಿಬಿಐ ತನಿಖೆಯಾಗಬೇಕೆಂದು ಒತ್ತಾಯಿಸಿದರು.

✍️ಬರಹ ಕೃಪೆ.✍️

ಸಿದ್ದಿಕ್ ಚಕ್ಕಮಕ್ಕಿ.

7847891857.

🎙️ವರದಿ.🎙️

ಮಗ್ಗಲಮಕ್ಕಿ ಗಣೇಶ್.

ಬ್ಯೂರೋ ನ್ಯೂಸ್,ಅವಿನ್ ಟಿವಿ.

9448305990.

About Author

Leave a Reply

Your email address will not be published. Required fields are marked *