ರಸ್ತೆ ಗುಂಡಿಗಳಿಗೆ ಹೂ ಮಳೆ.
1 min read
ರಸ್ತೆಯ ಗುಂಡಿಗಳಿಗೆ ಉದ್ಘಾಟನ ಬಾಗ್ಯ?????!!!
ಮೂಡಿಗೆರೆ ತಾಲೂಕು ಬಣಕಲ್ಲಿನಲ್ಲಿ ಕಳೆದ ಹಲವಾರು ವರ್ಷಗಳ ಕಾಲ ರಸ್ತೆ ದುರಸ್ತಿ ಅಗದೆ ಜನಗಳು ಪರಿತಪಿಸುವಂತಾಗಿದೆ.ಜಾನುವಾರುಗಳು ಸಹ ಸಂಚರಿಸುವಂತಿಲ್ಲ.
ಶಾಲೆಗಳಿಗೆ ಹೊಗುವ ರಸ್ತೆ….ಸಂತೆ ನಡೆಯುವಲ್ಲಿಗೆ ಹೊಗುವ ರಸ್ತೆ ಸಂಪೂರ್ಣ ಗುಂಡಿ ಬಿದ್ದಿದ್ದು ಜನಪ್ರತಿನಿದಿಗಳು ಇತ್ತ ಗಮನ ಹರಿಸಿಲ್ಲ.
ಅದ್ದರಿಂದ ಇಂದು ತೋರಣ ಕಟ್ಟಿ, ಹೋಂಡ ಗುಂಡಿ ಬಿದ್ದ ರಸ್ತೆ ಉದ್ದಕ್ಕೂ ಹೂವನ್ನು ಚೆಲ್ಲಿ ರಿಬ್ಬನ್ ಕಟ್ ಮಾಡುವ ಮೂಲಕ ವಿನೂತನ ಪ್ರತಿಭಟನೆ ಮಾಡಿದರು. ತದನಂತರ ಇ ವಿಜಯೋತ್ಸಕ್ಕೆ ಬಂದ ಸಾರ್ವಜನಿಕರಿಗೆ ಪಾನೀಯ ವಿತರಣೆ ಮಾಡಲಾಯಿತು.