AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

“ಅದ್ಧೂರಿಯಾಗಿ ನಡೆದ ಮೂರನೇ ದಿನದ ಸಂವಿಧಾನ ಜಾಗೃತಿ ಜಾಥಾ.”

1 min read

ಸಂವಿಧಾನ ಜಾಗೃತಿ ಜಾಥಾ ಮೂರನೇ ದಿನವು ಸಹ ಅದ್ಧೂರಿಯಾಗಿ ನಡೆಯಿತು.

ಸಂಚರಿಸಿದ ಎಲ್ಲಾ ಗ್ರಾಮ ಪಂಚಾಯತಿಗಳಲ್ಲಿಯು ಸಹ ಅದ್ಧೂರಿ ಸ್ವಾಗತ ನೀಡಲಾಯಿತು.

ಶಾಲಾ ಮಕ್ಕಳು,ಸಾರ್ವಜನಿಕರು,ಗ್ರಾಮ ಪಂಚಾಯಿತಿಯ ಚುನಾಯಿತ ಜನಪ್ರತಿನಿಧಿಗಳು,ಅಧಿಕಾರಿಗಳು,ನೌಕರರು ಬಹಳ ಉತ್ಸುಕರಾಗಿದ್ದರು.

ನೇತೃತ್ವ ವಹಿಸಿದ್ದ ಮೂಡಿಗೆರೆ ತಾಲ್ಲೂಕು ಸಮಾಜ ಕಲ್ಯಾಣ ಅಧಿಕಾರಿಯಾದ ಸೋಮಶೇಖರ್ ಕಾರ್ಯಕ್ರಮವನ್ನು ಬಹಳ ಅಚ್ಚುಕಟ್ಟಾಗಿ ನಡೆಸಿಕೊಟ್ಟರು.ಜೊತೆಗೆ

ಬಕ್ಕಿಮಂಜು ಮತ್ತು ಬಕ್ಕಿರವಿಯವರ ನೇತೃತ್ವದ ಕಲಾ ತಂಡ ಜೊತೆಯಲ್ಲಿದ್ದುದ್ದು ಒಂದು ವಿಶೇಷವಾಗಿತ್ತು.

ಈ ಜಾಥಾದ ಉದ್ದೇಶ ನಮ್ಮ ದೇಶದ ಆಧಾರ ಸ್ತಂಭವಾದ ಸಂವಿಧಾನ ಇದನ್ನು ತಿಳಿದುಕೊಳ್ಳುವ ಮತ್ತು ಉಳಿಸುವ,ಅದರಂತೆ ಬದುಕುವ ಮಾಹಿತಿಯನ್ನು ಪ್ರತಿಯೊಬ್ಬ ಭಾರತೀಯನ ಜವಾಬ್ದಾರಿ ಎಂದು ತಿಳಿಸುವುದಾಗಿದೆ.ಡಾ.ಬಿ.ಆರ್.ಅಂಬೇಡ್ಕರ್ ಅವರು ರಚಿಸಿದ ಹಾಗೂ ನಮ್ಮ ಭಾರತಕ್ಕೆ ಕೊಟ್ಟ ಚೌಕಟ್ಟಾಗಿದೆ ನಮ್ಮ ಸಂವಿಧಾನ ಹಾಗೂ ಇದು ಸರ್ವ ಭಾರತೀಯರಿಗೆ ನ್ಯಾಯದ,ಕಾನೂನಿನ,ನೊಂದ ಜನರ ಪವಿತ್ರ ಗ್ರಂಥ ನಮ್ಮ ಭಾರತದ ಮೂಲ ಸಂವಿಧಾನ ಇದನ್ನು ಎಲ್ಲರೂ ಅರಿತು ಅದರಂತೆ ಬದುಕುವಂತೆ ಮಾಡುವುದಾಗಿದೆ ಈ ಜಾಥಾದ ಮೂಲ ಮಂತ್ರ.

🎙️ವರದಿ.🎙️

ಮಗ್ಗಲಮಕ್ಕಿ ಗಣೇಶ್.

ಬ್ಯೂರೋ ನ್ಯೂಸ್,ಅವಿನ್ ಟಿವಿ.

9448305990.

About Author

Leave a Reply

Your email address will not be published. Required fields are marked *