AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

“ಹೆಣ್ಣು ಮಕ್ಕಳು ಕಾನೂನಿನ ಬಗ್ಗೆ ಸಾಮಾನ್ಯ ಜ್ಞಾನ ತಿಳಿದಿರಬೇಕು : ವಿಶಾಲ ನಾಗರಾಜು.”

1 min read

ಹೆಣ್ಣು ಮಕ್ಕಳಿಗೆ ಕಾನೂನಿನಲ್ಲಿ ವಿಷೇಶ ಸ್ಥಾನ ಇರುವುದರಿಂದ ಇದರ ಸದುಪಯೋಗ ಎಲ್ಲಾ ಮಹಿಳೆಯರು ಪಡೆದುಕೊಳ್ಳಬೇಕೆಂದು ವಕೀಲೆ ವಿಶಾಲ ನಾಗರಾಜ್ ಹೇಳಿದರು.

 

 

ಅವರು ಇತ್ತೀಚೆಗೆ ಲೇಡಿ ಜೇಸಿ ವತಿಯಿಂದ ಪಟ್ಟಣದ ಬಾಲಕೀಯ ಪದವಿಪೂರ್ವ ಕಾಲೇಜು ಪ್ರೌಢಶಾಲೆ ಯಲ್ಲಿ ಹಮ್ಮಿಕೊಂಡಿದ್ದ ರಾಷ್ಟ್ರೀಯ ಹೆಣ್ಣು ಮಕ್ಕಳ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿ,ಹೆಣ್ಣು ಮಕ್ಕಳು ತಮ್ಮ ಹಕ್ಕನ್ನು ಚಲಾಯಿಸಲು ಕಾನೂನಿನಲ್ಲಿ ನೂರಾರು ಅವಕಾಶವಿದೆ.ವಿದ್ಯಾರ್ಥಿ ದೆಸೆಯಿಂದಲೇ ಪಠ್ಯ ಪುಸ್ತಕದೊಂದಿಗೆ ಕಾನೂನಿನ ಬಗ್ಗೆ ಕೂಡ ಅರಿತುಕೊಂಡಿರಬೇಕೆಂದು ಹೇಳಿದರು.

ಶಾಲೆ ಮುಖ್ಯ ಶಿಕ್ಷಕ ಶಿವರಾಮೇಗೌಡ ಮಾತನಾಡಿ, ಹೆಣ್ಣು ಮಕ್ಕಳ ಶಾಲೆಯಲ್ಲಿ ಜೇಸಿ ಸಂಶ್ಥೆ ರಾಷ್ಟ್ರೀಯ ಮಹಿಳಾ ದಿನಾಚರಣೆ ಅಚರಿಸುತ್ತಿರುವುದು ಉತ್ತಮ ಬೆಳವಣಿಗೆಯಾಗಿದೆ.ಹಿಂದೆ ಹೆಣ್ಣು ಮಕ್ಕಳೆಂದರೆ ತಾತ್ಸಾರ ಮನೋಭಾವ ಇತ್ತು.ಆದರೆ ಪ್ರಸಕ್ತ ಕಾಲದಲ್ಲಿ ಅದು ತೊಲಗಿದ್ದರೂ ಕೆಲ ಕಡೆ ಭ್ರೂಣ ಹತ್ಯೆ ಮಾಡುವುದು ನಡೆಯುತ್ತಿದೆ.ಇದಕ್ಕೆ ಕಡಿವಾಣ ಹಾಕಬೇಕಿದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಜೇಸಿ ಅಧ್ಯಕ್ಷ ಸುಪ್ರಿತ್ ಕಾರ್ ಬೈಲ್,ಜೇಸಿರೇಟ್ ಅಧ್ಯಕ್ಷೆ ದಿವ್ಯಾ ಸುಪ್ರಿತ್, ಕಾರ್ಯದರ್ಶಿ ದೀಕ್ಷಿತ್ ಕಣಚೂರು, ಕವಿತಾ ಸಂತೋಷ್,ನಿಶ್ಚಿತಾ ಯತೀಶ್,ಹಮೀದ್ ಸಬ್ಬೇನಹಳ್ಳಿ,ಸುನಿಲ್,ಪ್ರೇಮಾ ಪುಣ್ಯಮೂರ್ತಿ,ಶೃತಿ ಸಂಪತ್,ಶೃತಿ ದೀಕ್ಷಿತ್ ಉಪಸ್ಥಿತರಿದ್ದರು.

🎙️ವರದಿ.🎙️

ಮಗ್ಗಲಮಕ್ಕಿ ಗಣೇಶ್.

ಬ್ಯೂರೋ ನ್ಯೂಸ್,ಅವಿನ್ ಟಿವಿ.

9448305990.

About Author

Leave a Reply

Your email address will not be published. Required fields are marked *