AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

“ಜನವರಿ 30ರಿಂದ ಪ್ರತಿ ಗ್ರಾ.ಪಂ. ವ್ಯಾಪ್ತಿಯಲ್ಲಿ ಸಂವಿಧಾನ ಜಾತಾ : ನಯನಾ ಮೋಟಮ್ಮ.”

1 min read

ರಾಜ್ಯ ಸರಕಾರ ಘೋಷಿಸಿರುವ 5 ಗ್ಯಾರಂಟಿಯನ್ನು ಒಂದು ವರ್ಷದೊಳಗೆ ಜಾರಿಗೆ ತಂದಿದೆ. ನಮ್ಮ ಸರಕಾರ ಇರುವವರೆಗೂ ಈ 5 ಗ್ಯಾರಂಟಿ ಯಾವುದೇ ಕಾರಣಕ್ಕೂ ರದ್ದಾಗುವುದಿಲ್ಲವೆಂದು ಶಾಸಕಿ ನಯನಾ ಮೋಟಮ್ಮ ಹೇಳಿದರು.
ಅವರು ದಿನಾಂಕ 26/01/2024ರ ಶುಕ್ರವಾರದಂದು ಮೂಡಿಗೆರೆ ಪಟ್ಟಣದ ಹೊಯ್ಸಳ ಕ್ರೀಡಾಂಗಣದಲ್ಲಿ ತಾಲ್ಲೂಕು ಆಡಳಿತದಿಂದ ಏರ್ಪಡಿದ್ದ 75ನೇ ಗಣ ರಾಜ್ಯೋತ್ಸವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಶಾಸಕಿಯಾಗಿರುವ ನನಗೆ ತಾಲ್ಲೂಕಿನ ಸಮಸ್ಯೆ ಬಗೆಹರಿಸುವುದು ಹಾಗೂ ಜನರ ಬದುಕು ರೂಪಿಸುವುದು ನನ್ನ ಕರ್ತವ್ಯವಾಗಿದೆ.ಅನೇಕ ವರ್ಷದಿಂದ ತಾಲ್ಲೂಕಿನಲ್ಲಿ ನಿವೇಶನ ಸಮಸ್ಯೆ ಎದುರಿಸುತ್ತಿದ್ದಾರೆ.ಇದನ್ನು ನಿವಾರಿಸಲು ನಮ್ಮ ಕ್ಷೇತ್ರದ ಜನರೇ ಅಡ್ಡಿಯಾಗುತ್ತಿರುವುದು ದುರಂತ.ಜನರ ಬದುಕಿನ ಹಕ್ಕು ಯಾರಿಂದಲೂ ಸಾಧ್ಯವಿಲ್ಲ.ಕಿತ್ತುಕೊಳ್ಳಲು ನಾನು ಬಿಡುವುದಿಲ್ಲ.ಇನ್ನು 6 ತಿಂಗಳಲ್ಲಿ ಸಾವಿರಾರು ನಿವೇಶನ ಹಂಚಿಕೆ ಮಾಡುತ್ತೇನೆಂದು ಹೇಳಿದರು.

ಭ್ರೂಣ ಹತ್ಯೆಯಿಂದ ರಾಜ್ಯದಲ್ಲಿ ಮಹಿಳೆಯರ ಸಂಖ್ಯೆ ಕಡಿಮೆಯಾಗಿದೆ.ಅದರೆ ನಮ್ಮ ತಾಲ್ಲೂಕಿನಲ್ಲಿ ಮಹಿಳೆಯರ ಸಂಖ್ಯೆ ಅಧಿಕವಿರುವುದು ಸಂತಸ ತಂದಿದೆ. ಭ್ರೂಣ ಹತ್ಯೆಗೆ ಕಡಿವಾಣ ಹಾಕಲು ಹಾಗೂ ಮಹಿಳೆಯರಿಗಾಗುವ ದೌರ್ಜನ್ಯ ತಡೆಗಟ್ಟಲು ಕಟ್ಟುನಿಟ್ಟಿನ ಕ್ರಮ ವಹಿಸುತ್ತೇನೆ ಎಂದ ಅವರು,ರಾಜ್ಯ ಸರಕಾರ ಸಂವಿಧಾನ ಜಾತಾ ಮಾಡಲು ಹೊರಟಿದೆ.ನಮ್ಮ ತಾಲ್ಲೂಕಿನಲ್ಲಿ ಜನವರಿ 30ರಿಂದ ಪ್ರತಿ ಗ್ರಾ.ಪಂ. ವ್ಯಾಪ್ತಿಯಲ್ಲಿ ಜಾತಾ ಪ್ರಾರಂಭಿಸಲಾಗುವುದು.ಇದಕ್ಕೆ ತಾಲ್ಲೂಕಿನ ಜನತೆ ಸಹಕಾರ ನೀಡಬೇಕು.ಅಲ್ಲದೇ ತಾಲ್ಲೂಕಿನಲ್ಲಿರುವ ಜ್ವಲಂತ ಸಮಸ್ಯೆಗಳನ್ನು ಬಗೆಹರಿಸಲು ತನ್ನೊಂದಿಗೆ ಕೈ ಜೋಡಿಸಬೇಕೆಂದು ಮನವಿ ಮಾಡಿದರು.

ಮಾಜಿ ಸಚಿವೆ ಮೋಟಮ್ಮ,ಪ.ಪಂ.ಸದಸ್ಯರಾದ ಎಚ್.ಪಿ.ರಮೇಶ್,ಕೆ.ವೆಂಕಟೇಶ್,ಮನೋಜ್,ಬೆಳೆಗಾರ ಸಂಘದ ಅಧ್ಯಕ್ಷ ಭಾಲಕೃಷ್ಣ,ಕರವೇ ಜಿಲ್ಲಾಧ್ಯಕ್ಷ ಪ್ರಸನ್ನ ದಾರದಹಳ್ಳಿ,ಕಸಾಪ ಅಧ್ಯಕ್ಷ ಶಾಂತಕುಮಾರ್,ತಾ.ಪಂ. ಇ.ಒ.ದಯಾವತಿ,ಬಿ.ಇ.ಒ ಹೇಮಂತಚಂದ್ರ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಸಂಘಸಂಸ್ಥೆ ಅಧ್ಯಕ್ಷರು ಉಪಸ್ಥಿತರಿದ್ದರು.

🎙️ವರದಿ.🎙️

ಮಗ್ಗಲಮಕ್ಕಿ ಗಣೇಶ್.

ಬ್ಯೂರೋ ನ್ಯೂಸ್,ಅವಿನ್ ಟಿವಿ.

9448305990.

About Author

Leave a Reply

Your email address will not be published. Required fields are marked *