AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

“ಸಾರಾಯಿ ಶೀಸೆಯಲಿ : ಮದ್ಯಪಾನ ಪ್ರಿಯರ ಮನವಿ ; ಪುರಸಭೆ ಅಧ್ಯಕ್ಷರಿಗೆ ಮತ್ತು ತಾಲ್ಲೂಕು ಸರ್ಕಾರಿ ಆಸ್ಪತ್ರೆ ಮುಖ್ಯಾಧಿಕಾರಿಗಳಿಗೆ ಮನವಿ ಸಲ್ಲಿಸಿದ ಕರ್ನಾಟಕ ಮದ್ಯಪಾನ ಪ್ರಿಯ ಸಂಘ.”

1 min read

ಹಾಸನ ಜಿಲ್ಲೆಯ,ಬೇಲೂರು ನಗರದಲ್ಲಿ ಬಾರ್ ಅಂಡ್ ರೆಸ್ಟೋರೆಂಟಿನಲ್ಲಿ ಸ್ವಚ್ಛತೆ ಮತ್ತು ಶೌಚಾಲಯ ಶುಚಿತ್ವ ಮತ್ತು ಕುಡಿಯುವ ನೀರಿನ ಫಿಲ್ಟರ್ ಹಾಕಿಸಬೇಕೆಂದು ಬೇಲೂರು ಪುರಸಭೆ ಅಧ್ಯಕ್ಷರಿಗೆ ಕರ್ನಾಟಕ ಮದ್ಯಪಾನ ಪ್ರಿಯ ಸಂಘವು ಮನವಿ ಸಲ್ಲಿಸಿದೆ.

ಅನಂತರದಲ್ಲಿ ಬೇಲೂರು ತಾಲ್ಲೂಕು ಸರ್ಕಾರಿ ಆಸ್ಪತ್ರೆ ಮುಖ್ಯ ಅಧಿಕಾರಿಗಳಾದ ಡಾ.ವಿಜಿಯವರಿಗೆ ಮನವಿ ಸಲ್ಲಿಸಿದ ಕರ್ನಾಟಕ ಮದ್ಯಪಾನ ಪ್ರಿಯ ಸಂಘವು ತಾಲ್ಲೂಕಿನಾದ್ಯಂತ ಬಾರ್ ಅಂಡ್ ರೆಸ್ಟೋರೆಂಟ್ ಸ್ವಚ್ಛತೆ ಮತ್ತು ಕುಡಿಯುವ ನೀರು ಸ್ವಚ್ಛತೆ ಕಾಪಾಡುವಂತೆ ಕೇಳಿಕೊಂಡಿದೆ.

ಈ ಸಂದರ್ಭದಲ್ಲಿ ಬೇಲೂರು ತಾಲ್ಲೂಕು ಅಧ್ಯಕ್ಷರಾದ ತೊಟೇಶ್ ತಗರೆ,ಉಪಾಧ್ಯಕ್ಷರಾದ ಧರ್ಮೇಗೌಡ,ಕೌನ್ಸಿಲರ್ ಜಯಣ್ಣ ಉಪಸ್ಥಿತರಿದ್ದರು.

ಮನವಿ ಸ್ವಿಕರಿಸಿದ ನಗರಸಭೆಯ ಅಧ್ಯಕ್ಷರಾದ ತೀರ್ಥ ಕುಮಾರಿ ಮತ್ತು ತಾಲ್ಲೂಕು ವೈದ್ಯಾಧಿಕಾರಿಗಳಾದ ವಿಜಿ ಅವರು ಅತಿ ಶೀಘ್ರದಲ್ಲಿ ಬೇಡಿಕೆಯನ್ನು ಈಡೇರಿಸುವುದಾಗಿ ಮನವಿಗೆ ಸ್ಪಂದಿಸಿದ್ದಾರೆ.

🎙️ವರದಿ.🎙️

ಮಗ್ಗಲಮಕ್ಕಿ ಗಣೇಶ್.

ಬ್ಯೂರೋ ನ್ಯೂಸ್,ಅವಿನ್ ಟಿವಿ.

9448305990.

About Author

Leave a Reply

Your email address will not be published. Required fields are marked *